ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದುವರೆಗೂ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತಗಳ ಅಂತರದಿಂದ ಗೆದ್ದವರ ವಿವರ

|
Google Oneindia Kannada News

ಮೈಸೂರು, ಮಾರ್ಚ್ 22: ಮೈಸೂರು ಲೋಕಸಭಾ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದ್ದು, ಇದುವರೆಗೆ ಒಟ್ಟು 16 ಚುನಾವಣೆಗಳನ್ನು ಕಂಡಿದೆ. 1951 ಮತ್ತು 1957ರ ಚುನಾವಣೆಗಳಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಏಕಸದಸ್ಯ ಸಾಮಾನ್ಯ ಕ್ಷೇತ್ರವಾದ ಬಳಿಕ ಮೊದಲ ಚುನಾವಣೆ 1962 ರಲ್ಲಿ ನಡೆದಿತ್ತು.

ಆ ಬಳಿಕದ ಇತಿಹಾಸವನ್ನು ನೋಡಿದಾಗ ಅಭ್ಯರ್ಥಿಗಳ ಗೆಲುವಿನ ಅಂತರದಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬಹುದು.ಈ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಪಡೆದ ದಾಖಲೆ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹೆಸರಿನಲ್ಲಿದೆ. ಅತಿಕಡಿಮೆ ಅಂತರದ ಗೆಲುವು ಪಡೆದಿರುವುದು ಅಡಗೂರು ಎಚ್‌.ವಿಶ್ವನಾಥ್.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ:ಅಭ್ಯರ್ಥಿಗಳ ಆಯ್ಕೆ ವಿಳಂಬವೇಕೆ?ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ:ಅಭ್ಯರ್ಥಿಗಳ ಆಯ್ಕೆ ವಿಳಂಬವೇಕೆ?

1962 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ ಅವರು 57,906 ಮತಗಳಿಂದ ಗೆದ್ದಿದ್ದರು. ಅಂದು ಒಟ್ಟು 4.33 ಲಕ್ಷ ಮತದಾರರು ಇದ್ದರು. ಮತದಾರರ ಸಂಖ್ಯೆಯನ್ನು ಗಮನಿಸಿದಾಗ ಶಂಕರಯ್ಯ ಅವರು ದೊಡ್ಡ ಅಂತರದ ಗೆಲುವನ್ನೇ ಪಡೆದಿದ್ದರು.

ಒಡೆಯರ್‌ ಅವರ ಅತ್ಯಧಿಕ ಮತಗಳ ಗೆಲುವಿನ ಸಾಧನೆ 1989ರ ಚುನಾವಣೆಯಲ್ಲಿ ಮೂಡಿಬಂದಿತ್ತು. ಅವರು 2,49,364 ಮತಗಳಿಂದ ಜಯ ಸಾಧಿಸಿದ್ದರು. ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದು 3,84,88 ಮತಗಳನ್ನು ಪಡೆದುಕೊಂಡಿದ್ದರು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಜನತಾಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿದ್ದ ಡಿ.ಮಾದೇಗೌಡ 1.35 ಲಕ್ಷ ಮತಗಳನ್ನು ಹಾಗೂ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಪ.ಮಲ್ಲೇಶ್‌ 1.31 ಲಕ್ಷ ಮತಗಳನ್ನು ಗಳಿಸಿದ್ದರು. ಮುಂದೆ ಓದಿ...

 ಒಡೆಯರ್‌ ಗೆಲುವು ಕಂಡದ್ದು ಹೀಗೆ

ಒಡೆಯರ್‌ ಗೆಲುವು ಕಂಡದ್ದು ಹೀಗೆ

ಜನತಾಪಕ್ಷದ ಜತೆಗೆ ಮೊದಲ ಬಾರಿಗೆ ಜನತಾದಳದ ಅಭ್ಯರ್ಥಿ ಕಣದಲ್ಲಿದ್ದರು. ಇದರಿಂದ ಮತಗಳು ಜನತಾಪಕ್ಷ ಹಾಗೂ ಜನತಾದಳದ ಅಭ್ಯರ್ಥಿಗಳ ನಡುವೆ ಹಂಚಿಹೋಗಿದ್ದವು. ಒಡೆಯರ್‌ ಅವರ ಗೆಲುವಿನ ಅಂತರ ಹೆಚ್ಚಲು ಈ ಅಂಶವೂ ಕಾರಣವಾಗಿತ್ತು. ಮೈಸೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ಪಡೆದಿರುವುದು ಅವರೊಬ್ಬರು ಮಾತ್ರ.

 ಜನಪ್ರಿಯವಾಗಿದ್ದ ಒಡೆಯರ್‌ ಕೆಲಸ

ಜನಪ್ರಿಯವಾಗಿದ್ದ ಒಡೆಯರ್‌ ಕೆಲಸ

ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ರಾಜ ಮನೆತನದ ಕೆಲಸ ಕಾರ್ಯಗಳು ಇಲ್ಲಿನ ಜನತೆಗೆ ಹೆಚ್ಚು ಪ್ರಿಯವಾಗಿದ್ದವು.ಇದೇ ಕಾರಣ ಅವರನ್ನು ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸುವಂತೆ ಮಾಡಿತು. ಇದಾದ ಬಳಿಕ ರಾಜ ಮನೆತನದಿಂದ ರಾಜಮಾತೆ ಪ್ರಮೋದಾ ದೇವಿ ಹಾಗೂ ಯದುವೀರ್ ಕೃಷ್ಣದತ್ತ ಒಡೆಯರ್ ಗೂ ಕೂಡ ಅನೇಕ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರೂ ಇದ್ಯಾವುದಕ್ಕೂ ಅವರು ಗಮನಹರಿಸಲಿಲ್ಲ.

 ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್

 ಗೆಲುವಿನ ದಾಖಲೆ ಬರೆದ ತುಳಸೀದಾಸ್

ಗೆಲುವಿನ ದಾಖಲೆ ಬರೆದ ತುಳಸೀದಾಸ್

ಎರಡನೇ ಅತಿದೊಡ್ಡ ಅಂತರದ ಗೆಲುವಿನ ದಾಖಲೆ ಕಾಂಗ್ರೆಸ್‌ನ ಎಚ್‌.ಡಿ.ತುಳಸೀದಾಸ್ ಹೆಸರಿನಲ್ಲಿದೆ. ಅವರು 1971ರ ಚುನಾವಣೆಯಲ್ಲಿ 1.45 ಲಕ್ಷ ಮತಗಳ ಗೆಲುವು ಪಡೆದಿದ್ದರು. ಮೂರನೇ ಸ್ಥಾನದಲ್ಲಿ ಸಿ.ಎಚ್‌.ವಿಜಯಶಂಕರ್ ಇದ್ದಾರೆ. 1998ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅವರು 1.03 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಎಚ್‌.ಚಿಕ್ಕಮಾದು ಅವರನ್ನು ಮಣಿಸಿದ್ದರು.

 ಕಡಿಮೆ ಅಂತರದ ಗೆಲುವು ಕಂಡ ವಿಶ್ವನಾಥ್

ಕಡಿಮೆ ಅಂತರದ ಗೆಲುವು ಕಂಡ ವಿಶ್ವನಾಥ್

ವಿಜಯಶಂಕರ್‌ ಅವರು ಈ ಬಾರಿ ಕಾಂಗ್ರೆಸ್‌ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಕಡಿಮೆ ಅಂತರದ ಗೆಲುವು ವಿಶ್ವನಾಥ್‌ ಅವರದ್ದಾಗಿದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು 7,691 ಮತಗಳ ಮುನ್ನಡೆಯಿಂದ ಆಯ್ಕೆಯಾಗಿದ್ದರು. ವಿಶ್ವನಾಥ್‌ 3,54,810 ಮತಗಳನ್ನು ಪಡೆದಿದ್ದರೆ, ಅವರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯ ವಿಜಯಶಂಕರ್ 3,47,119 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿಯ ವಿಜಯಶಂಕರ್ 10,150 ಮತಗಳಿಂದ ಗೆಲುವು ಒಲಿಸಿಕೊಂಡಿದ್ದರು.

 ಲೋಕ ಸಮರ 2019:ಮೈಸೂರಿನಲ್ಲಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಲೋಕ ಸಮರ 2019:ಮೈಸೂರಿನಲ್ಲಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

English summary
In 1989 Lok Sabha elections, King Srikantadatta Narasimharaja Wadiyar got highest votes in Mysuru constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X