ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ ಪರಿಚಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 28: ಮೈಸೂರು ನಗರದ ಸಾಧ್ವಿ ಪತ್ರಿಕೆಯ ಸಂಪಾದಕ ಸಿ.ಮಹೇಶ್ವರನ್ ಅವರು 2020ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಿ.ಮಹೇಶ್ವರನ್ ಅವರನ್ನು ರಾಜ್ಯ ಸರ್ಕಾರವು ಮಾಧ್ಯಮ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಿ.ಮಹೇಶ್ವರನ್ 1994 ರಲ್ಲಿ ಸಾಧ್ವಿ ಪತ್ರಿಕೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ ದಲ್ಲೇ 1899 ರಲ್ಲಿ ಸಾಧ್ವಿ ಪತ್ರಿಕೆಯನ್ನು ಸ್ಥಾಪಿಸಲಾಗಿದೆ.

ಜಾನಪದ ಕ್ಷೇತ್ರ; ಹಾಸನದ ಹಂಪನಹಳ್ಳಿ ತಿಮ್ಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಜಾನಪದ ಕ್ಷೇತ್ರ; ಹಾಸನದ ಹಂಪನಹಳ್ಳಿ ತಿಮ್ಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಈ ಪತ್ರಿಕೆ 121 ಸುದೀರ್ಘ ವರ್ಷಗಳಿಂದ ಅಸ್ತಿತ್ವದಲ್ಲಿರುವ ಒಂದು ಮೈಲಿಗಲ್ಲಾಗಿದೆ, ಇದು ದಕ್ಷಿಣ ಭಾರತದ ಕನ್ನಡ ಪತ್ರಿಕೆಗಳ ಇತಿಹಾಸದಲ್ಲಿ ಅಪರೂಪವಾಗಿದೆ. ಇತ್ತೀಚೆಗೆ ಸಾಧ್ವಿಯ ಡಿಜಿಟಲ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

Mysuru: Introduction Of Karnataka Rajyotsava Awardee K Maheshwaran

ಸಾಧ್ವಿ ಪ್ರತಿಷ್ಠಾನದ ಬ್ಯಾನರ್ ಅಡಿಯಲ್ಲಿಯೂ ಮಹೇಶ್ವರನ್ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೨೦ರ ಪಟ್ಟಿಯಲ್ಲಿ ಸಿ.ಮಹೇಶ್ವರನ್ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

English summary
C. Maheshwaran, editor of Sadhvi News Paper in Mysore, is the recipient of the 2020 Karnataka Rajyotsava Award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X