ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ತನ ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿದ ಮೈಸೂರಿನ ಪ್ರೊಫೆಸರ್‌

By Coovercolly Indresh
|
Google Oneindia Kannada News

ಮೈಸೂರು, ಫೆಬ್ರವರಿ 3: ಇಂದು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನರು ಬಲಿಯಾಗುತ್ತಿರುವ ಖಾಯಿಲೆ ಎಂದರೆ ಕ್ಯಾನ್ಸರ್.‌ ಈ ಖಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ಗುಣಪಡಿಸಬಹುದಾದರೂ ನಂತರದ ಹಂತಗಳಲ್ಲಿ ಗುಣಪಡಿಸಲು ಸಾಧ್ಯವೇ ಇಲ್ಲ. ಈ ನತದೃಷ್ಟ ರೋಗಿಗಳಿಗೆ ಸಾವೇ ಗತಿ.

ದೇಹದ ಯಾವುದೇ ಅಂಗಕ್ಕಾದರೂ ಕ್ಯಾನ್ಸರ್‌ ತಗುಲಬಹುದಾಗಿದೆ. ವಿಶ್ವದಲ್ಲಿ ಲಕ್ಷಾಂತರ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್‌ ನಿರೋಧಕ ಔಷಧಿಗಳು ಅಲ್ಪ ಪ್ರಮಾಣದಲ್ಲಿ ಮಾತ್ರ ರೋಗ ಗುಣಪಡಿಸುತ್ತಿವೆ.

ಮೈಸೂರಿನ ಉತ್ಪನ್ನಗಳು ಇನ್ಮುಂದೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯಮೈಸೂರಿನ ಉತ್ಪನ್ನಗಳು ಇನ್ಮುಂದೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯ

ಇದೀಗ ಇದಕ್ಕೆ ಅಲ್ಪ ಪ್ರಮಾಣಕ್ಕಿಂತ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವ ಔಷಧವೊಂದನ್ನು ಮೈಸೂರು ವಿವಿಯ ರಾಸಾಯನಿಕ ವಿಭಾಗದ ಪ್ರೊಫೆಸರ್ ಡಾ.ಬಸಪ್ಪ ಅವರು ಕಂಡು ಹಿಡಿದಿದ್ದಾರೆ.

Professor Of Mysuru Who Invented Medicine For Breast Cancer

ಈಗ ಸ್ತನ ಕ್ಯಾನ್ಸರ್‌ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಔಷಧ ಕೆಲಸ ಮಾಡಲಿದ್ದು, ಇದು ಬಸಪ್ಪ ಅವರ ಹಲವು ವರ್ಷಗಳ ಸಂಶೋಧನೆಯ ಫಲವಾಗಿದೆ.

ಈ ಕುರಿತು ಮಾತನಾಡಿದ ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸಪ್ಪ ಅವರು, "ಸ್ತನ ಕ್ಯಾನ್ಸರ್ ಹೋಗಲಾಡಿಸಲು ಔಷಧ ಬೀಜವನ್ನು ಪತ್ತೆ ಹಚ್ಚಿ, ಈ ಹಿಂದಿನ ಔಷಧಿಯಾದ ಟ್ಯಾಮೊಕ್ಸಿಫೆನ್‍ಗೆ ಹೋಲಿಸಿದಾಗ ಇದಕ್ಕಿಂತ ತಾವು ಕಂಡು ಹಿಡಿದ ಔಷಧ ಹೆಚ್ಚು ಉಪಯುಕ್ತವಾಗಿದೆ" ಎಂದರು.

ಎಎಂಟಿಎ ಎಂಬ ಹೆಸರಿನ ಔಷಧಿ ಬೀಜವನ್ನ ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ್ದೇವೆ. ಇದು ಟ್ಯಾಮೊಕ್ಸಿಫೆನ್‍ಗಿಂತ ಹೆಚ್ಚು ಸಾಂದ್ರತೆ ಹಾಗೂ ಸ್ತನ ಕ್ಯಾನ್ಸರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ನಮ್ಮ ತಂಡದ ಸಾಧನೆ ಎಂದು ಪ್ರೊಫೆಸರ್‌ ಬಸಪ್ಪ ಅವರು ಹೇಳಿದರು.

ಈ ಸಂಶೋಧನೆಯಲ್ಲಿ ಫ್ರೋ.ಪೀಟರ್, ಲೋಬಿ, ಡಾ.ವಿಜಯ್, ಜೊತೆಯಲ್ಲಿ ವಿಶನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಕೂಡ ಜೊತೆಯಾಗಿದೆ. ಕರ್ನಾಟಕ ಮತ್ತು ಭಾರತ ಸರ್ಕಾರದ ನಿಧಿ ಹಾಗೂ ಸಹಕಾರ ನೀಡಿದೆ. ಈ ಔಷಧ ಸ್ತನ ಕ್ಯಾನ್ಸರ್ ಇದ್ದವರಿಗೆ ಚೇತರಿಕೆಗೆ ಹೆಚ್ಚು ವೇಗವಾಗಿ ಸಹಕಾರಿಯಾಗಲಿದೆ ಎಂದು ಡಾ.ಬಸಪ್ಪ ತಿಳಿಸಿದರು.

ನೂತನವಾಗಿ ಆವಿಷ್ಕರಿಸಿರುವ ಈ ಔಷಧದಿಂದಾಗಿ ಜಗತ್ತಿನ ಕೋಟ್ಯಾಂತರ ಸ್ತನ ಕ್ಯಾನ್ಸರ್‌ ರೋಗಿಗಳಿಗೆ ಉಪಯೋಗವಾಗಲಿದೆ ಎಂದು ಬಸಪ್ಪ ತಿಳಿಸಿದರು.

English summary
Lakhs of women in the world are suffering from breast cancer and now a breast cancer drug has been discovered by Dr. Basappa, professor of chemistry at Mysuru University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X