ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ನಾಯಕ; ಪ್ರತಾಪ್ ಸಿಂಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 29 ; "ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ನಾಯಕ. ಉಗುಳಿ ಓಡಿ ಹೋಗಿದ್ದಾರೆ ಅಷ್ಟೇ. ಆತ ಹೇಳಿಕೆ ಶೂರ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಸಾಕ್ಷಿ ಇದ್ದಿದ್ದರೆ ಕೊಡಲು ಏಕೆ ಭಯ. ಹಿಂದೆ ಬಿಟ್ ಕಾಯಿನ್ ವಿಚಾರದಲ್ಲೂ ಇದೇ ರೀತಿ ಮಾಡಿದ್ದರು" ಎಂದರು.

Breaking; ಪಿಎಸ್‌ಐ ನೇಮಕಾತಿ ಹಗರಣ; ತನಿಖೆ ಬಗ್ಗೆ ಖರ್ಗೆ ಅಸಮಾಧಾನ Breaking; ಪಿಎಸ್‌ಐ ನೇಮಕಾತಿ ಹಗರಣ; ತನಿಖೆ ಬಗ್ಗೆ ಖರ್ಗೆ ಅಸಮಾಧಾನ

"ಸುಖಾ ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪ ಮಾಡಿದ್ದರು. ಸಾಕ್ಷಿ ಕೊಡಿ ಅಂದರೆ ಹಿಟ್ ಅಂಡ್ ರನ್ ಮಾಡುತ್ತಾರೆ. ಇವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಸಂಸದರು ದೂರಿದರು.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಸರ್ಕಾರ ಭಾಗಿ: ಪ್ರಿಯಾಂಕ್ ಖರ್ಗೆಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಸರ್ಕಾರ ಭಾಗಿ: ಪ್ರಿಯಾಂಕ್ ಖರ್ಗೆ

Priyank Kharge Is Hit And Run Leader Says Pratap Simha

ಪಿಎಸ್‌ಐ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಪರೀಕ್ಷೆಯಲ್ಲಿ ಯಾರು ಅಕ್ರಮವೆಸಗಿದ್ದಾರೆ ಅವರ ಮೇಲೆ ಮಾತ್ರ ಕ್ರಮ ಕೈಗೊಳ್ಳಿ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು. ಕಷ್ಟಪಟ್ಟು ಓದುವವರ ಆತ್ಮ ವಿಶ್ವಾಸ ಕುಗ್ಗಿಸಬೇಡಿ. ಪರೀಕ್ಷೆಗಳು ಪಾರದರ್ಶಕವಾಗಿರಬೇಕು" ಎಂದರು.

ಆರೋಪಿ ಮನೆಯಲ್ಲಿ ಗೊಡಂಬಿ ತಿಂದ ಹೋಮ್ ಮಿನಿಸ್ಟರ್‌ಗೂ ನೋಟಿಸ್ ಕೊಡಿ: ಪ್ರಿಯಾಂಕ್ ಖರ್ಗೆ ಆರೋಪಿ ಮನೆಯಲ್ಲಿ ಗೊಡಂಬಿ ತಿಂದ ಹೋಮ್ ಮಿನಿಸ್ಟರ್‌ಗೂ ನೋಟಿಸ್ ಕೊಡಿ: ಪ್ರಿಯಾಂಕ್ ಖರ್ಗೆ

"50 ಲಕ್ಷ ಕೊಟ್ಟು ಪಿಎಸ್‌ಐ ಆದವರು ಯಾವ ರೀತಿ ಕೆಲಸ ಮಾಡಬಹುದು?. ಮೊದಲ ದಿನದಿಂದಲೇ ಲಂಚದ ಅಂಗಡಿ ತೆರೆಯುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ನ್ಯಾಯ ಹೇಗೆ ಕೊಡುತ್ತಾರೆ?. ಪರೀಕ್ಷಾ ಅಕ್ರಮದ ಸಮಗ್ರ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.

ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, "ಜಮೀರ್ ಮನಸ್ಥಿತಿ ಆರೋಪಿಗಳಿಗೆ ಬೆಂಬಲ ನೀಡುವುದು. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದಿಂದಲೇ ಆಗಿದೆ. ಹಿಂದೆ ಡಿ. ಜೆ. ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲೂ ಇವರು ಆರೋಪಿಗಳ ಪರ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ಪರ ಇರುವ ಒಬ್ಬ ನಾಯಕನೂ ಇಲ್ಲ" ಎಂದು ಆರೋಪಿಸಿದರು.

"ಸಿದ್ದರಾಮಯ್ಯ ವೈಸ್ ಕ್ಯಾಪ್ಟನ್ ಜಮೀರ್. ಡಿ. ಕೆ. ಶಿವಕುಮಾರ್ ವೈಸ್ ಕ್ಯಾಪ್ಟನ್ ನಲಪಾಡ್. ಇವರಿಬ್ಬರ ಮೂಲಕ ಸಿದ್ದರಾಮಯ್ಯ, ಡಿಕೆಶಿ ಮುಸ್ಲಿಂ ಕ್ರಿಶ್ಚಿಯನ್ ಓಲೈಕೆಗೆ ನಿಂತಿದ್ದಾರೆ. ಜಮೀರ್ ಅಂತಹವರಿಂದ ಬೇರೆ ಏನು ನಿರೀಕ್ಷೆ ಮಾಡಬಹುದು?" ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.

English summary
Mysuru MP Pratap Simha said that Congress leader and former minister Priyank Kharge is hit and run leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X