ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?

|
Google Oneindia Kannada News

Recommended Video

Mysore Dasara 2018 : ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತಾ? |Oneindia Kannada

ಮೈಸೂರು, ಅಕ್ಟೋಬರ್.05: ವಿಜಯನಗರದ ಅರಸರ ಮೇಲ್ಪಂಕ್ತಿಯನ್ನು ಅನುಸರಿಸಿ ನವರಾತ್ರಿ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು ಮೈಸೂರು ಅರಸರು ಮಾತ್ರವಲ್ಲ. ಇಕ್ಕೇರಿ ಮತ್ತು ಮದುರೆಯ ನಾಯಕರುಗಳು, ದೂರದ ಒರಿಸ್ಸಾದ ದೊರೆಗಳು ಸಹ ಆಚರಿಸುತ್ತಾರೆ.

ಸ್ವಾತಂತ್ರ್ಯ ಬಂದ ಬಳಿಕ ರಾಜಾಡಳಿತ ಕೊನೆಗೊಂಡಿತು. ಆದರೆ ಆಗ ಯಾವ ರೀತಿಯಲ್ಲಿ ರಾಜರು ದರ್ಬಾರ್ ನಡೆಸುತ್ತಿದ್ದರೋ, ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ಈಗಲೂ ನಡೆಸಿಕೊಂಡು ಬರಲಾಗುತ್ತಿದೆ. ಇಷ್ಟಕ್ಕೂ ಈ ಖಾಸಗಿ ದರ್ಬಾರ್ ಹೇಗೆ ನಡೆಯುತ್ತದೆ? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ದರ್ಬಾರನ್ನು ಒಡೆಯರ್ ಕಾಲದಲ್ಲಿ ಎಷ್ಟು ಕಟ್ಟುನಿಟ್ಟಾಗಿ, ಸಂಪ್ರದಾಯಬದ್ಧವಾಗಿ ನಡೆಸುತ್ತಿದ್ದರು ಎಂಬುದು ಈಗಿನ ಖಾಸಗಿ ದರ್ಬಾರ್ ನೋಡಿದ ಮಂದಿಯ ಅರಿವಿಗೆ ಬಂದೇ ಬರುತ್ತದೆ.

ಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸಯದುರಾಯರಿಂದ ಯದುವೀರ್ ವರೆಗೆ, ತಿಳಿಯಲೇಬೇಕಾದ ರಾಜಮನೆತನದ ಇತಿಹಾಸ

ದಸರಾ ಹಬ್ಬವನ್ನು ಮೊದಲ ಬಾರಿ 1610 ರಲ್ಲಿ ಒಡೆಯರ್ ರಾಜ ಒಡೆಯರ್ ಆರಂಭಿಸಿದರು. ಮೈಸೂರು ಅರಮನೆಯಲ್ಲಿ ಎಲ್ಲಾ 10 ದಿನಗಳ ಕಾಲ ಬೆಳಕಿನಿಂದ ಸಜ್ಜುಗೊಳ್ಳುವ, ವೈಭವೋಪೇತ ಖಾಸಗಿ ದರ್ಬಾರ್ ಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಒಡೆಯರ್ ರಾಜಮನೆತನದ ದಂಪತಿ ಮೈಸೂರಿನಲ್ಲಿರುವ ಚಾಮುಂಡಿ ದೇವಸ್ಥಾನದಲ್ಲಿರುವ ವಿಶೇಷ ದೇವತೆ ಚಾಮುಂಡೇಶ್ವರಿ ಪೂಜೆ ಪ್ರದರ್ಶನದಿಂದ ಆರಂಭವಾಗುತ್ತವೆ.
ಇದಾದ ನಂತರ ವಿಶೇಷ ದರ್ಬಾರ್ ಅನುಸರಿಸುತ್ತಿದ್ದರು. ನಿಜಕ್ಕೂ ದರ್ಬಾರ್ ಹೇಗೆ ನಡೆಯುತ್ತಿತ್ತು ಎಂಬ ಕುತೂಹಲ ನಿಮಗಿದ್ದರೆ ಈ ಲೇಖನ ಓದಿ...

 ರುಮಾಲು ಮೈಸೂರು ಪೇಟ

ರುಮಾಲು ಮೈಸೂರು ಪೇಟ

ರಾಜರು ಸಾಂಪ್ರದಾಯಿಕ ರುಮಾಲು ಮೈಸೂರು ಪೇಟವನ್ನು ದರ್ಬಾರ್ ಸಮಯದಲ್ಲಿ ಧರಿಸುತ್ತಿದ್ದರು ಅಥವಾ ದಸರಾ ಆಚರಣೆಗಳ ಸಂದರ್ಭದಲ್ಲಿ ಒಂದು ವಿಧ್ಯುಕ್ತ ಮೆರವಣಿಗೆಯ ಸಮಯದಲ್ಲಿ ಧರಿಸುತ್ತಿದ್ದರು.

1805 ರಲ್ಲಿ ಕೃಷ್ಣರಾಜ ಒಡೆಯರ್ -3 ಆಳ್ವಿಕೆ ಸಮಯದಲ್ಲಿ ದಸರಾದಂದು ಮೈಸೂರು ಅರಮನೆ ವಿಶೇಷ ದರ್ಬಾರ್ ಹೊಂದುವ ಸಂಪ್ರದಾಯ ಆರಂಭಿಸಿದಾಗ ರಾಜ ಕುಟುಂಬದ ಸದಸ್ಯರು, ವಿಶೇಷ ಆಹ್ವಾನಿತರು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಪಾಲ್ಗೊಂಡರು.

 ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ

 ದರ್ಬಾರ್ ಉಡುಗೆಗಳು

ದರ್ಬಾರ್ ಉಡುಗೆಗಳು

ದರ್ಬಾರ್ ಸಮಯದಲ್ಲಿ ರಾಜ ಮತ್ತು ಆಹ್ವಾನಿತ ಗಣ್ಯರು ಕಡ್ಡಾಯವಾಗಿ ಒಂದು ದೀರ್ಘ ಕಪ್ಪು ಕೋಟ್, ಬಿಳಿ ಪ್ಯಾಂಟ್ ಮತ್ತು ಕಡ್ಡಾಯ ಮೈಸೂರು ಪೇಟ ಧರಿಸುತ್ತಿದ್ದರಿಂದ ದರ್ಬಾರ್ ಉಡುಗೆ ಎಂಬ ಹೆಸರು ಬಂತು.

ಈ ಸಂಪ್ರದಾಯ ಒಡೆಯರ್ ಕುಟುಂಬದ ಪ್ರಸ್ತುತ ಕುಡಿ ಈಗಲೂ ಮುಂದುವರೆಸುತ್ತಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಸರಾ ಸಮಯದಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾರೆ.

 ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ

 ಮುಕ್ಕಾಲು ಗಂಟೆ ದರ್ಬಾರ್ ಆಚರಣೆ

ಮುಕ್ಕಾಲು ಗಂಟೆ ದರ್ಬಾರ್ ಆಚರಣೆ

ಹೊರಗೆ ನಡೆಯುವ ದಸರೆಯ ವೈಭವ ನಿಜವಾದ ದಸರೆಯಲ್ಲ. ಅರಮನೆಯೊಳಗಣ ವೈಭವ ಮಾತ್ರವೇ ದಸರಾ. ಆದರೆ ಇದು ಜನಸಾಮಾನ್ಯರು ನೋಡದ ದಸರಾ. ನವರಾತ್ರಿಯ 9 ದಿನವೂ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಒಡೆಯರ್ ಮನೆತನದ ರಾಜ ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ದರ್ಬಾರ್ ಆಚರಣೆ ಮಾಡಲಾಗುತ್ತದೆ.

ರಾಜರ ಆಡಳಿತದಲ್ಲಿ ನಿಜವಾದ ದರ್ಬಾರ್ ನಡೆಯುತ್ತಿತ್ತು. ಆದರೆ ಪೌರಾಡಳಿತದ ಬಳಿಕ ಕೇವಲ ಖಾಸಗಿ ದರ್ಬಾರ್ ಗೆ ಮಾತ್ರ ಚಾಲನೆ ದೊರಕಿತು. ಅಂದು ರಾಜರು ಧರಿಸುವ ಬಟ್ಟೆಯ ವೈಭವವೇ ಬೇರೇ. ಅದನ್ನೇ ವಿಶಿಷ್ಟ ದರ್ಜಿ ತಯಾರಿಸುತ್ತಾರೆ.

ನಂತರ ಆ ದಿರಿಸಿನಲ್ಲಿಯೇ ಸಿಂಹಾಸನಕ್ಕೆ ಬಲಗೈ ಎತ್ತಿ ಸೆಲ್ಯೂಟ್ ಮಾಡುವ ರಾಜರ ವೈಭವನ್ನು ನೋಡಲು ಎರಡು ಕಣ್ಣು ಸಾಲದು. ನಂತರ ಮೊಳಗುವ ಬಹುಪರಾಕ್ ಕೂಡ ಅದ್ಭುತವೇ.

 ಭಾಗಶಃ ಅವನತಿಗೊಂಡ ದರ್ಬಾರ್

ಭಾಗಶಃ ಅವನತಿಗೊಂಡ ದರ್ಬಾರ್

ದರ್ಬಾರ್ ನಲ್ಲಿ ಸಾಮಾನ್ಯವಾಗಿ ಹೊಗಳುಭಟ್ಟರು ಇರುತ್ತಾರೆ. ನವರಾತ್ರಿಯ ಮೊದಲ ದಿನ ಬೆಳಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತಿತ್ತು. ಉಳಿದ ದಿನಗಳಲ್ಲಿ ಸಂಜೆಯ ವೇಳೆಯಲ್ಲಿ ನಡೆಯುತ್ತಿತ್ತು. ಪರಾಕು ಹೇಳುವವರು, ದ್ವಾರಪಾಲಕರು, ರಾಜರ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜ ಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಮಿತ್ರರು ಎಲ್ಲರೂ ಇಲ್ಲಿ ಪಾಲ್ಗೊಳ್ಳುತ್ತಾರೆ.

ತಮ್ಮ ರಾಜ್ಯದ ಕಷ್ಟ ಕಾರ್ಪಣ್ಯ, ತಮ್ಮ ಸಾಧನೆ, ಪ್ರತಿಭೆಗಳ ಅನಾವರಣಕ್ಕೆ ರಾಜರ ಕಾಲದ ವೇದಿಕೆಯಂತಿದ್ದ ರಾಜರ ದರ್ಬಾರ್ ಈಗ ಭಾಗಶಃ ಅವನತಿಗೊಂಡಿದೆ ಎಂಬಲ್ಲಿ ಸಂಶಯವಿಲ್ಲ.

English summary
Private Darbar was strictly and traditionally held during Wodeyar's time. Everyone has the curiosity about how this private Darbar can take place. Here's a beautiful article on about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X