• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

|
   Mysore Dasara 2018 : ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಖಾಸಗಿ ದರ್ಬಾರ್ ಗೆ ಪೂಜೆ

   ಮೈಸೂರು, ಅಕ್ಟೋಬರ್ 10 : ನಾಡಹಬ್ಬ ಮೈಸೂರು ದಸರಾಕ್ಕೆ ಸಾಂಪ್ರದಾಯಿಕ ಚಾಲನೆ ದೊರೆತಿದ್ದು, ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ವೈಭವದಿಂದ ಆರಂಭವಾಗಿದೆ.

   ಯದುವಂಶದ ಉತ್ತರಾಧಿಕಾರಿ ಹಾಗೂ ಪ್ರಮೋದಾದೇವಿ ಅವರ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಮೊದಲ ದಿನದ ದರ್ಬಾರ್ ನಡೆಸಿದರು.

   ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಮುಂಜಾನೆ 4.30ಕ್ಕೆ ಎಣ್ಣೆಶಾಸ್ತ್ರ ಮಾಡಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ಗಣಪತಿ ಪೂಜೆ, ಕಳಶ ಸ್ಥಾಪನೆ, ನವಗ್ರಹ ಪೂಜೆ ನಂತರ ಯದುವೀರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು.

   ದಸರೆಗೆ ವೈಭವದ ಚಾಲನೆ: ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ಘೋಷಿಸಿದ ಸುಧಾ ಮೂರ್ತಿ

   ಅರಮನೆಯ 20ಕ್ಕೂ ಹೆಚ್ಚು ಪುರೋಹಿತರು ಸಿಂಹಾಸನಾರೋಹಣದ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ನಂತರ ಭದ್ರಾಸನಕ್ಕೆ ಸಿಂಹ ಹಾಗೂ ಪಕ್ಷಿಗಳಿಗೆ ಅಕ್ಷಿ ಜೋಡಣೆ ಕಾರ್ಯ ನಡೆಯಿತು. ಬಳಿಕ ಯದುವೀರ್ ಸಿಂಹಾಸನಕ್ಕೆ ಮೂರು ಪ್ರದಕ್ಷಿಣೆ ಹಾಕಿ ಜಯಘೋಷದೊಂದಿಗೆ ಸಿಂಹಾಸನಾರೂಢರಾಗಿ ಸಭೆಗೆ ಗೌರವ ವಂದನೆ ಸಲ್ಲಿಸಿದರು.

   ಈ ಸಮಯದಲ್ಲಿ ಬೆಳಗ್ಗೆ ಅಂಬಾವಿಲಾಸ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ ಮತ್ತು ಹಸುವನ್ನು ಕರೆತರಲಾಯಿತು. ಮುಂದೆ ಓದಿ....

   `ಕಾಯೋ ಶ್ರೀಗೌರಿ'

   `ಕಾಯೋ ಶ್ರೀಗೌರಿ'

   ಅರಮನೆಯ ಆತ್ಮವಿಲಾಸ ಗಣೇಶನ ಸನ್ನಿಧಿಗೆ ತೆರಳಿ ಪ್ರಾರ್ಥನೆ ಮಾಡಿದ ನಂತರ, ದರ್ಬಾರ್ ಹಾಲ್ ಗೆ ಆಗಮಿಸಿದರು. ದರ್ಬಾರ್ ಹಾಲ್ ಗೆ ಬರುತ್ತಿದ್ದಂತೆ ವಂದಿ ಮಾಗಧರು ಬಹುಪರಾಕ್ ಹೇಳಿದರು. ರಾಜವಂಶಸ್ಥರ ಕುಲ ಪುರೋಹಿತರಾದ ಜನಾರ್ಧನ ಅಯ್ಯಂಗಾರ್ ನೇತೃತ್ವದಲ್ಲಿ ಜಯಚಾಮರಾಜ ಒಡೆಯರ್ ಅವರು ರಚಿಸಿರುವ ರಾಜವಂಶಸ್ಥರ ಗೀತೆ `ಕಾಯೋ ಶ್ರೀಗೌರಿ'ಯನ್ನು ಪೊಲೀಸ್ ವಾದ್ಯ ತಂಡದಿಂದ ನುಡಿಸಲಾಯಿತು.

   ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ

   ಪೂರ್ಣಫಲ ಪ್ರಸಾದ ಸ್ವೀಕಾರ

   ಪೂರ್ಣಫಲ ಪ್ರಸಾದ ಸ್ವೀಕಾರ

   ಚಾಮುಂಡಿಬೆಟ್ಟ, ನಂಜನಗೂಡು, ಮೇಲುಕೋಟೆ, ಶ್ರೀರಂಗ ಪಟ್ಟಣ, ಶೃಂಗೇರಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದವನ್ನು ಸ್ವೀಕರಿಸಿದರು.

   ಯದುವೀರ್ ಪಳಪಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ್ದರು. ಇನ್ನೂ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.

   ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?

   ಪಟ್ಟದ ಆನೆಗಳು ಸನ್ನದ್ಧ

   ಪಟ್ಟದ ಆನೆಗಳು ಸನ್ನದ್ಧ

   ಈ ಮಧ್ಯೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧವಾಗಿವೆ.

    ಖಾಸಗಿ ದರ್ಬಾರ್ ಆಗಿ ಬದಲಾಯಿತು

   ಖಾಸಗಿ ದರ್ಬಾರ್ ಆಗಿ ಬದಲಾಯಿತು

   ಹಿಂದಿನ ಮಹಾರಾಜರು ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸುತ್ತಿದ್ದರು.

   ಅದನ್ನು ಇದೀಗ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಇದು ಖಾಸಗಿ ದರ್ಬಾರ್ ಆಗಿ ಬದಲಾಗಿದೆ. ಆದರೆ ಆಗಿನ ಸಂಪ್ರದಾಯ, ರಾಜವೈಭವವನ್ನು ಈಗಲೂ ನಾವು ಕಾಣಬಹುದಾಗಿದೆ. ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುತ್ತಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mysuru Dasara 2018: Private Darbar has begun in palace Today. Yaduveer Wadiyar performed the throne worship.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more