ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೋಗ ದಿನಾಚರಣೆಗೆ ಮೈಸೂರಿಗೆ ಪ್ರಧಾನಿ ಮೋದಿ ಆಗಮನ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್‌ 10: ನಗರದಲ್ಲಿ ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಬರುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಲ್ಲಿ ಮೈಸೂರು ಯೋಗ ಫೌಂಡೇಷನ್ ಹಾಗೂ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 'ಯೋಗೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಈ ಹೇಳಿಕೆಯನ್ನು ಸಂಸದ ಪ್ರತಾಪ್‌ಸಿಂಹ ನೀಡಿದ್ದಾರೆ.

ಕುಷ್ಠರೋಗಿಗಳ ಪಾಲಿನ ಜೀವಂತ ದೇವರು ಯೋಗ ಗುರು ಸ್ವಾಮಿ ಶಿವಾನಂದ</a><a href=" title="ಕುಷ್ಠರೋಗಿಗಳ ಪಾಲಿನ ಜೀವಂತ ದೇವರು ಯೋಗ ಗುರು ಸ್ವಾಮಿ ಶಿವಾನಂದ" />ಕುಷ್ಠರೋಗಿಗಳ ಪಾಲಿನ ಜೀವಂತ ದೇವರು ಯೋಗ ಗುರು ಸ್ವಾಮಿ ಶಿವಾನಂದ

"ಕೋವಿಡ್ ಕಾರಣದಿಂದ ಕಳೆದ 2 ವರ್ಷದಿಂದ ಯೋಗ ದಿನ ಆಚರಣೆ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಈ ಬಾರಿ ಮೈಸೂರಿಗೆ ಬರುವಂತೆ ಪ್ರಧಾನಿ ಅವರಿಗೆ ಮನವಿ ಮಾಡಲಾಗಿದೆ. ಲಡಾಖ್ ಅಥವಾ ಮೈಸೂರಿಗೆ ಬರಲು ಪ್ರಧಾನಿಗಳ ಪ್ರವಾಸ ಪಟ್ಟಿ ಮಾಡಲಾಗಿದ್ದು, ಸಾಂಸ್ಕೃತಿಕ ನಗರಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ," ಎಂದರು.

Prime Minister Narendra Modi Likely to attend to Yoga Day

"ಮೋದಿ ಅವರು ಪ್ರಧಾನಿಯಾದ ಬಳಿಕ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯ ಗೊತ್ತುವಳಿ ಮಂಡಿಸಿದರು. ಆಗ ಸಭೆಯಲ್ಲಿ ಹಾಜರಿದ್ದ 177 ದೇಶಗಳು ಗೊತ್ತುವಳಿಯನ್ನು ಒಕ್ಕೊರಲಿನಿಂದ ಅಂಗೀಕರಿಸಿದ್ದವು. ಅಲ್ಲದೆ 2019ರಲ್ಲಿ 197 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸುವ ಮೂಲಕ ಯೋಗದ ಮಹತ್ವ ಸಾರಿದವು," ಎಂದು ಹೇಳಿದರು.

Prime Minister Narendra Modi Likely to attend to Yoga Day

ಯೋಗ ದಾಖಲೆಯನ್ನು ಮುರಿಯುವ ಭರವಸೆ ವ್ಯಕ್ತಪಡಿಸಿದ ಸಂಸದ

"ಈ ಹಿಂದೆ ಮೈಸೂರು ಯೋಗ ದಿನದಂದು ವಿಶ್ವ ದಾಖಲೆ ಮಾಡಿತ್ತು. ಈ ಬಾರಿ ಕೂಡ ಎಲ್ಲರೂ ಕೈಜೋಡಿಸುವ ಮೂಲಕ ಈಗ ಇರುವ 1.2 ಲಕ್ಷ ಯೋಗ ದಾಖಲೆಯನ್ನು ಮುರಿಯಬೇಕಾಗಿದೆ. ಈ ಬಾರಿ ಮೈಸೂರಿನಲ್ಲಿ 1.10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗಬಂಧುಗಳು ಸೇರುವ ನಿರೀಕ್ಷೆ ಇದೆ," ಎಂದು ಭರವಸೆ ವ್ಯಕ್ತಪಡಿಸಿದರು.

Recommended Video

ಕೌಂಟ್ ಡೌನ್ ಸ್ಟಾರ್ಟ್: RCB ಜೊತೆ ಸೇರಿ ಹೊಸ ದಾಖಲೆ‌ ಬರೆಯಲು ಸಜ್ಜಾದ KGF 2 | Oneindia Kannada

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ ಮಾತನಾಡಿದರು. ಯೋಗ ಫೌಂಡೇಶನ್‌ನ ಅಧ್ಯಕ್ಷ ಶ್ರೀಹರಿ, ಡಾ.ರಾಘವೇಂದ್ರ ಪೈ ಹಾಗೂ ಗಣೇಶ್ ಶಂಖನಾದದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೇಯರ್ ಸುನಂದಾ ಪಾಲನೇತ್ರ ಹಾಜರಿದ್ದರು. ಡಾ.ಚಂದ್ರ ಆಚಾರ್ಯ ಅವರು ವಿಶೇಷ ಯೋಗಾಭ್ಯಾಸದ ಮೂಲಕ ಗಮನ ಸೆಳೆದರು.

English summary
Prime Minister Narendra Modi May Come to Yoga Day in Mysuru Says MP Pratap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X