• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಮೋದಿ

|
Google Oneindia Kannada News

ಮೈಸೂರು, ಜೂನ್ 21: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲಿನ ನೂತನ ವಸ್ತು ಸಂಗ್ರಹಾಲಯ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.

Recommended Video

   ಮೋದಿ ಮತ್ತು ಮಹಿಳೆ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ | Oneindia Kannada

   ಅರಮನೆ ಮೈದಾನದಲ್ಲಿ ಆಯೋಜಿಸಿದ 8ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಕರ್ನಾಟಕ ಮತ್ತು ಮೈಸೂರಿನ ಜನತೆಗೆ ಯೋಗ ದಿನದ ಶುಭಾಷಯ ಕೋರಿದರು. ತದನಂತರ ಸಾರ್ವಜನಿಕರೊಂದಿಗೆ ಯೋಗಾಭ್ಯಾಸ ಮಾಡಿದರು.

   Yoga Day 2022 Live Updates: ಮೈಸೂರಲ್ಲಿ ಡಿಜಿಟಲ್ ಯೋಗ ಕೇಂದ್ರ ವೀಕ್ಷಿಸಿದ ಪ್ರಧಾನಿYoga Day 2022 Live Updates: ಮೈಸೂರಲ್ಲಿ ಡಿಜಿಟಲ್ ಯೋಗ ಕೇಂದ್ರ ವೀಕ್ಷಿಸಿದ ಪ್ರಧಾನಿ

   ಯೋಗಾಭ್ಯಾಸದ ಕಾರ್ಯಕ್ರಮವನ್ನು ಮುಗಿಸಿದ ಪ್ರಧಾನಿ, ವೇದಿಕೆಯಿಂದ ನೇರವಾಗಿ ಅರಮನೆ ಆವರಣವನ್ನು ತಲುಪಿದ್ದು, ಅಲ್ಲಿ ನೂತನ ವಸ್ತು ಸಂಗ್ರಹಾಲಯ ಕೇಂದ್ರವನ್ನು ಉದ್ಘಾಟನೆ ಮಾಡಿದರು.

   ವಸ್ತು ಸಂಗ್ರಹಾಲಯ ಕೇಂದ್ರದಲ್ಲಿರುವ ಡಿಜಿಟಲ್ ಯೋಗ ಕೇಂದ್ರವನ್ನು ಉದ್ಘಾಟನೆ ಮಾಡಿ ಅದರ ಕುರಿತು ಮೋದಿ ಮಾಹಿತಿ ಪಡೆದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಜೊತೆಗಿದ್ದಾರೆ.

   ಮೈಸೂರು ಅರಮನೆಯಲ್ಲಿ ಪ್ರಧಾನಿ ಉಪಹಾರ: ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್‌ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಉಪಾಹಾರ ಸೇವಿಸಲಿದ್ದಾರೆ.

   ಈ ಸಂದರ್ಭ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ ಒಡೆಯರ್‌ ಮತ್ತು ಆದ್ಯವೀರ್ ಒಡೆಯರ್‌ ಸಹ ಇರಲಿದ್ದಾರೆ. ರಾಜಮಾತೆಯ ಆಹ್ವಾನದ ಮೇರೆಗೆ ಉಪಹಾರ ಕೂಟ ಆಯೋಜನೆ ಮಾಡಲಾಗಿದೆ.

   ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗಾಗಿ ಭರ್ಜರಿ ಉಪಹಾರದ ಜೊತೆಗೆ ವಿಶೇಷವಾಗಿ ಮೈಸೂರು ಪಾಕ್ ಅನ್ನು ತಯಾರಿಸಲಾಗಿದೆ. ಮೈಸೂರು ಅರಸರ ಕಾಲದಲ್ಲಿ ಮೈಸೂರು ಪಾಕ್ ತಯಾರಿಸುತ್ತಿದ್ದ ಕುಟುಂಬದವರು, ಪ್ರಧಾನಿಗಾಗಿ ವಿಶೇಷವಾಗಿ ಮೈಸೂರು ಪಾಕ್ ತಯಾರಿಸಿದ್ದಾರೆ.

   English summary
   Prime Minister Narendra Modi inaugurated the museum in Mysuru. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X