ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ರೀತಿ ದಿನಕ್ಕೆ 18 ಗಂಟೆ ಕೆಲಸ ಮಾಡಿ, ಭೈರಪ್ಪ ಕಿವಿಮಾತು

|
Google Oneindia Kannada News

ಬೆಂಗಳೂರು, ಸೆ. 17: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಹಿತಿ ಎಸ್.ಎಲ್. ಭೈರಪ್ಪ ಅವರು ಹಾಡಿ ಹೊಗಳಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಶಾಸಕ ರಾಮದಾಸ್ ಅವರು ಆಯೋಜಿಸಿದ್ದ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಅಂತಹ ನಾಯಕ‌ ಇದುವರೆಗೂ ಯಾರೂ ಹುಟ್ಟಿಲ್ಲ. ಮುಂದೆ 2024, 2029 ಕ್ಕೂ ಅವರೇ ಪ್ರಧಾನಿಯಾಗಬೇಕು. ದಿ. ಮಾಜಿ ಪ್ರಧಾನಿ ವಾಜಪೇಯಿ ಅವರು ಮಾಡದಂತಹ ಕೆಲಸ ಕಾರ್ಯಗಳನ್ನು ಈಗ ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಸ್ವಂತ ಬಲದ ಮೇಲೆ 2014, 2019ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಗುಜರಾತ್‌ನಲ್ಲಿ ಕಣ್ಣು ನಾಚುವಂತಹ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಮೋದಿ ಹುಟ್ಟುಹಬ್ಬ ಸಮಾರಂಭದಲ್ಲಿ ಎಸ್.ಎಲ್‌. ಭೈರಪ್ಪ ಹೇಳಿದ್ದಾರೆ.

 Prime Minister Narendra Modi has been praised by Author S.L. Bhairappa

ಪ್ರಧಾನಿ ಮೋದಿ 70ನೇ ಜನ್ಮದಿನ: ದೇವೇಗೌಡ, ರಾಹುಲ್ ಗಾಂಧಿ ಶುಭಾಶಯಪ್ರಧಾನಿ ಮೋದಿ 70ನೇ ಜನ್ಮದಿನ: ದೇವೇಗೌಡ, ರಾಹುಲ್ ಗಾಂಧಿ ಶುಭಾಶಯ

ಪ್ರಧಾನಿ ನರೇಂದ್ರ ಮೋದಿ ಅವರ 6 ವರ್ಷಗಳ ಆಡಳಿತ ತೃಪ್ತಿ ತಂದಿದೆ. ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ. ದೇಶ ನಡೆಸಲು ಮೋದಿ ಅವರಿಗಿಂತ ಬುದ್ದಿವಂತರು ಯಾರಿದ್ದಾರೆ? ರಾಜ್ಯದ ಪಾಲಿನ ಜಿ.ಎಸ್.ಟಿ. ಹಣವನ್ನು ಬೇರೆ ಬೇರೆ ರೂಪದಲ್ಲಿ ಕೊಟ್ಟಿದ್ದಾರೆ. ಜಿ.ಎಸ್.ಟಿ. ಕೊಟ್ಟಿಲ್ಲ ಅಂತ ಯಾಕೆ ದೂಷಿಸಬೇಕು? ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿಕೆ ಕೊಟ್ಟಿದ್ದಾರೆ.

 Prime Minister Narendra Modi has been praised by Author S.L. Bhairappa

ಡ್ರಗ್ಸ್ ಸೇವನೆಯಿಂದ ಯುವಕರು ದಾರಿ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಮೋದಿ ಅವರನ್ನು ಮಾದರಿಯಾಗಿ ಆಗಿ ಇಟ್ಟುಕೊಂಡು ಯುವಕರು ದಿನದಲ್ಲಿ 18 ಗಂಟೆ ಕೆಲಸ ಮಾಡಬೇಕು. ಮಾದಕವಸ್ತುಗಳಿಂದ ಯುವಕರು ಹಾಳಾಗುವುದಕ್ಕೂ ಪ್ರಧಾನಿ ಮೋದಿ ಅವರಿಗೂ ಯಾವುದೇ ಸಂಬಂಧವಿಲ್ಲ. ಮೋದಿ ಅವರು ಏನೇ ಮಾಡಿದರೂ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಮೊನ್ನೆ ರಾಹುಲ್ ಗಾಂಧಿ ಚೀನಾ ಗಡಿ ವಿಚಾರದಲ್ಲಿಯೂ ಟೀಕೆ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿಕೆ ಕೊಟ್ಟಿದ್ದಾರೆ.

English summary
Prime Minister Narendra Modi has been praised by Author S.L. Bhyrappa. Bhyrappa was Speaking at the event, Prime Minister Modi's birthday was hosted by BJP MLA Ramdas in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X