ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Mysuru Dasara 2022 : ರಾಷ್ಟ್ರಪತಿ ಮುರ್ಮುರಿಂದ ಚಾಲನೆಗೆ ಕ್ಷಣಗಣನೆ, ಐತಿಹಾಸಿಕ ಕ್ಷಣಕ್ಕೆ ಮೈಸೂರು ಸಾಕ್ಷಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 26: ಎರಡು ವರ್ಷದ ಕೋವಿಡ್ 19 ಆತಂಕದಿಂದ ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಂಡಿದೆ. ಈ ವರ್ಷ ನಾಡ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿರುವುದರಿಂದ 'ಸಾಂಸ್ಕೃತಿಕ ನಗರಿ' ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.‌ ರಾಷ್ಟ್ರಪತಿಯೊಬ್ಬರು ದಸರೆಗೆ ಚಾಲನೆ‌ ನೀಡುತ್ತಿರುವುದು ಇದೆ ಮೊದಲು.

ಅದರಲ್ಲೂ ಬುಡಕಟ್ಟು ಸಮುದಾಯ ಮಹಿಳೆ ನಾಡಿನ ಮಹಾನ್ ಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ. ನವರಾತ್ರಿ ಮಹಿಳಾ ಪ್ರಧಾನ ಹಬ್ಬವಾದರೂ ಇಲ್ಲಿಯವರೆಗೆ ಪುರುಷ ಮಹಾಶಯರೆ ಹೆಚ್ಚು ಬಾರಿ ದಸರಾವನ್ನು ಉದ್ಘಾಟಿಸಿದ್ದಾರೆ. ರಾಜಕಾರಣಿ ಕೆ.ಎಸ್.ನಾಗರತ್ನಮ್ಮ, ಖ್ಯಾತ ಸಂಗೀತಗಾರರಾದ ಡಾ.ಗಂಗೂಬಾಯಿ ಹಾನಗಲ್, ಚಿತ್ರ ನಟಿ ಬಿ.ಸರೋಜಾದೇವಿ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಈವರೆಗೆ ದಸರಾ ಉದ್ಘಾಟಿಸಿದ್ದಾರೆ. ದ್ರೌಪದಿ ಮುರ್ಮ ಐದನೆಯವರು. ಅದರಲ್ಲೂ ಬುಡುಕಟ್ಟು ಸಮುದಾಯ ಮಹಿಳೆ ಎಂಬುದು ಮತ್ತೊಂದು ವಿಶೇಷ.

Video: ಕಣ್ಮನ ಸೆಳೆಯುವ ಮೈಸೂರು ದೀಪಾಲಂಕಾರ ವೀಕ್ಷಿಸಿದ ಸಿಎಂ ಬೊಮ್ಮಾಯಿVideo: ಕಣ್ಮನ ಸೆಳೆಯುವ ಮೈಸೂರು ದೀಪಾಲಂಕಾರ ವೀಕ್ಷಿಸಿದ ಸಿಎಂ ಬೊಮ್ಮಾಯಿ

ಮೊದಲಿಗೆ ರಾಷ್ಟ್ರಪತಿ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ದರ್ಶನ ಪಡೆಯಲಿದ್ದಾರೆ.‌ ದೇವಸ್ಥಾನದ ಪಕ್ಕ ಬೆಳ್ಳಿರಥದಲ್ಲಿ ಸರ್ವ ಅಲಂಕಾರದೊಂದಿಗೆ 9.45ರಿಂದ 10.05ರೊಳಗೆ ಸಲ್ಲುವ ಶುಭ ವ್ಯಕ್ತಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದರೊಂದಿಗೆ 10 ದಿನಗಳ ಅದ್ಧೂರಿ ದಸರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಬಳಿಕ ಸಂಜೆ ಅರಮನೆ ಆವರಣದಲ್ಲಿ ನಡೆಯುವ ದಲ್ಲೇ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಇದೇ ದಿನ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ಆಹಾರ ಮೇಳ, ದಸರಾ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನಕ್ಕೂ ಚಾಲನೆ ಸಿಗಲಿದೆ.

President Draupadi Murmu to inaugurate Mysuru Dasara at 9:45 AM

ಬುಡಕಟ್ಟು ಜನರಲ್ಲಿ ಸಂಭ್ರಮ

200 ಆದಿವಾಸಿಗಳು ರಾಷ್ಟ್ರಪತಿ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಈ ಪೈಕಿ 70 ಮಂದಿ ಬುಡಕಟ್ಟು ಸಾಂಪ್ರದಾಯಿಕ ಉಡುಗೆಯಲ್ಲೇ ಆಗಮಿಸಲಿದ್ದಾರೆ. 16 ಬುಡಕಟ್ಟು ನಾಯಕರು ರಾಷ್ಟ್ರಪತಿ ಅವರನ್ನು ಸಮಾರಂಭ ಮುಗಿದ ಮೇಲೆ ಸನ್ಮಾನಿಸಲಿದ್ದಾರೆ. ಆದಿವಾಸಿಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು 10 ನಿಮಿಷ ಸಮಯವನ್ನೂ ಮುರ್ಮು ನೀಡಿದ್ದಾರೆ

2 ವರ್ಷದ ಕೋವಿಡ್ ಕರಿಛಾಯೆ ಬಳಿಕ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಅರಮನೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಆಚರಣೆ ನಡೆಯಲಿದ್ದು, ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ರಾಜ್ಯಪತಿ ಬ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ

ವೇದಿಕೆ ಮೇಲೆ 13 ಆಸನಗಳು

ರಾಷ್ಟ್ರಪತಿಗಳು ಆಗಮಿಸುವ ಹಿನ್ನೆಲೆ ಹೆಚ್ಚಿನ ಭದ್ರತೆಗೆ ಆದ್ಯತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನೀಡಲಾಗಿದೆ. ವೇದಿಕೆಯಲ್ಲಿ 13 ಆಸನಗಳಿರಲಿವೆ, ಪ್ರಾದ್ ಜೋತಿ ಸೇರಿ ಆರು ಕೇಂದ್ರ ಸಚಿವರು, ನಾಲ್ವರು ರಾಜ್ಯ ಸಚಿವರು ಇರಲಿದ್ದಾರೆ.

English summary
Mysore Dasara 2022 Live Updates: President Draupadi Murmu inaugurates Mysore Dasara. Check Jamboo Savari, Vijayadashami, Dasara Celebrations Live Updates, Latest News and Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X