ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಡುಕುತೊರೆ ಬ್ರಹ್ಮ ರಥೋತ್ಸವಕ್ಕೆ ನಡೆದಿದೆ ಸಕಲ ಸಿದ್ಧತೆ

|
Google Oneindia Kannada News

ಮೈಸೂರು, ಫೆಬ್ರುವರಿ 3: ತಿ.ನರಸೀಪುರ ತಾಲ್ಲೂಕು ಮುಡುಕುತೊರೆಯಲ್ಲಿರುವ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಫೆ.4 ರಂದು ಮಂಗಳವಾರ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.

ಕೆಲವು ಕ್ಯಾಲೆಂಡರ್‌ಗಳಲ್ಲಿ ದಿನಾಂಕ ತಪ್ಪಾಗಿ ಪ್ರಕಟವಾಗಿದ್ದರಿಂದ ಫೆ.4ರಂದೇ ಬ್ರಹ್ಮರಥೋತ್ಸವ ನಡೆಯುವ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಮೂರ್ತಿ ಅವರು ತಿಳಿಸಿದ್ದಾರೆ. ಬ್ರಹ್ಮರಥೋತ್ಸವದ ಅಂಗವಾಗಿ ಅಂದು ಬೆಳಗ್ಗಿನಿಂದ ಹಲವಾರು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಸುತ್ತೂರು ಎಂದರೆ ಬರೀ ಜಾತ್ರೆಯಲ್ಲ, ಶೈಕ್ಷಣಿಕತೆಯ ಮಹಾಸಂಗಮಸುತ್ತೂರು ಎಂದರೆ ಬರೀ ಜಾತ್ರೆಯಲ್ಲ, ಶೈಕ್ಷಣಿಕತೆಯ ಮಹಾಸಂಗಮ

ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ ನಡೆಯಲಿದ್ದು, ನಂತರ ಯಾಗಶಾಲೆಯಲ್ಲಿ ಶಿವಯಾಗ ಹೋಮ ನೆರವೇರಲಿದೆ. ಶಿವಯಾಗದ ನಂತರ ರಥ ಸಂಪೋಕ್ಷಣೆ ಮಾಡಿ, ಶಿವ-ಪಾರ್ವತಿ ಮೂರ್ತಿಯಿಟ್ಟು ಮಂಟಪೋತ್ಸವ ಮಾಡಲಾಗುತ್ತದೆ. ಮಂಟಪೋತ್ಸವ ಮುಗಿದ ಬಳಿಕ ಬೆಟ್ಟದಿಂದ ತಾಳುಬೆಟ್ಟಕ್ಕೆ ಉತ್ಸವ ಮೂರ್ತಿಯನ್ನು ತರಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಏಳು ಮಂಟಪಗಳಲ್ಲಿ ಪೂಜೆ ಕೈಂಕರ್ಯ ನಡೆಯಲಿದೆ.

Preparations For Mudukuthore Rathotsava In Mysuru

ಮಧ್ಯಾಹ್ನ 1 ಗಂಟೆ ವೇಳೆಗೆ ರಥಾರೋಹಣ ನೆರವೇರಿ ವಾಸ್ತು ಬೀದಿ ಎಂದು ಕರೆಯಲ್ಪಡುವ ನಾಲ್ಕು ರಸ್ತೆಯಲ್ಲಿ ರಥಯಾತ್ರೆ ನಡೆಯಲಿದೆ. ರಥಾರೋಹಣದ ನಂತರ ತೇರು ಮೊದಲಿಗೆ ದಕ್ಷಿಣಾಭಿಮುಖವಾಗಿ ಬಂದು ನಂತರ ಮೇಲ್ಮುಖವಾಗಿ ಸಂಚರಿಸಲಿದೆ. ಫೆ.7 ರಂದು ತೆಪ್ಪೋತ್ಸವ, ಫೆ.12 ರಂದು ಪರ್ವತ ಪರಿಷೆ ಹಾಗೂ ಕೊನೆಯ ದಿನವಾದ ಫೆ.13ರಂದು ಮಹಾಭಿಷೇಕ ನಡೆಯಲಿದೆ.

English summary
The preparations are going on for the BrahmaRathotsava on Tuesday, February 4 at Mallikarjuna Swamy Temple in Mudukuthore, Narasipura Taluk
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X