ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೈಸೂರಿನ 'ಪ್ರೇಮ ಕುಮಾರಿ'

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 4 : ಮಾಜಿ ಸಚಿವ ರಾಮ್ ದಾಸ್ ರವರ ಪ್ರೇಮ ಪ್ರಕರಣದಲ್ಲಿ ಕೇಳಿ ಬಂದ ಹೆಸರು ಪ್ರೇಮ ಕುಮಾರಿ ಎಲ್ಲರಿಗೂ ತಿಳಿದೇ ಇದೆ.

ಇವರು ಯಾರು ಎಂದು ಯಾರಿಗೂ ತಿಳಿದಿಲ್ಲದಿದ್ದಾಗ ಇದ್ದಾಗ, ಏಕಾಏಕಿ ಸೆಲಿಬ್ರಿಟಿಯಾಗಿ ಹೆಸರು ಮಾಡಿದ ಪ್ರೇಮಕುಮಾರಿ ಸದ್ಯ ಸುದ್ದಿಯಲ್ಲಿದ್ದಾರೆ. ಹೌದು, ರಾಮ್ ದಾಸ್ ಗೆ ಟಕ್ಕರ್ ಕೊಡಲೆಂದೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಖುದ್ದು ಪ್ರೇಮಕುಮಾರಿ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ .

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಚುಕ್ಕಾಣಿ ಯಾರ ಕೈಗೆ..?ಮೈಸೂರಿನ ಕೃಷ್ಣರಾಜ ಕ್ಷೇತ್ರದ ಚುಕ್ಕಾಣಿ ಯಾರ ಕೈಗೆ..?

ಇಂದು ಹಲವು ಬೆಳವಣಿಗೆಗಳ ಬಳಿಕ ಕೆ.ಆರ್ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಫರ್ಧಿಸುವುದಾಗಿ ಮೈಸೂರಿನ ಅಗ್ರಹಾರ ವೃತ್ತದ ಬಳಿಯ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ.

 Premkumari will contest from Krishnaraja Constituency as Independent candidate.

ಇಲ್ಲಿ ಅಚ್ಚರಿಯ ವಿಷಯವೆಂದರೆ ಕೆಲವು ದಿನಗಳ ಕೆಳಗಷ್ಟೇ ಐಎನ್ ಸಿಪಿ ಎಂಬ ಪಕ್ಷಕ್ಕೆ ಸೇರಿ ತಾವು ಸ್ಫರ್ಧಿಸುವುದಾಗಿ ಘೋಷಿಸಿ, ನಂತರ ಕೆಲ ದಿನಗಳ ಬಳಿಕ ಹಿಂದೆ ಸರಿದಿದ್ದರು. ಈಗ ಮತ್ತೆ ಆ ಪಕ್ಷಕ್ಕೂ ಗುಡ್ ಬೈ ಹೇಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ನಡೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಇನ್ನು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೇಮಕುಮಾರಿ, ನಾನು ಕೆ.ಆರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದೇನೆ. ಐ ಎನ್ ಸಿ ಪಿ ಪಕ್ಷದ ನಡೆ ಹಲವು ಬಾರಿ ನೋವುಂಟು ಮಾಡಿತು.

ಅಷ್ಟೇ ಅಲ್ಲ ಆ ಪಕ್ಷದಲ್ಲಿ ನನಗೆ ಉಸಿರುಗಟ್ಟುವ ವಾತಾವರಣವೂ ಹೆಚ್ಚಿತ್ತು. ನನಗೆ ಈ ಕ್ಷೇತ್ರದಲ್ಲಿ ಲಿಂಗಾಯಿತರ ಬೆಂಬಲ ಹೆಚ್ಚಿದೆ ಕಾರಣ ನಾನು ಕೂಡ ಲಿಂಗಾಯಿತಳು. 40 ಸಾವಿರ ಮತಗಳು ಲಿಂಗಾಯಿತರದ್ದೇ ಇರುವುದರಿಂದ ಗೆಲುವು ಖಚಿತ. ನಾನು ಇವತ್ತಿನಿಂದ ಪ್ರಚಾರ ಆರಂಭಿಸಿದ್ದೇನೆ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಮುಂದುವರೆದು ಮಾತನಾಡಿದ ಅವರು, ನನ್ನ ವೈಯುಕ್ತಿಕ ಜೀವನ ಹಾಳಾಗಿದೆ. ಸರಕಾರಿ ಕೆಲಸದಲ್ಲಿದೆ. ಸದ್ಯ ರಾಜೀನಾಮೆ ನೀಡಿದ್ದೇನೆ. ನಾನು ನನ್ನ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ನ್ಯಾಯ ಸಿಗಲು ರಾಜಕೀಯ ಒಂದೇ ದಾರಿ. ನಾನೊಬ್ಬ ನೊಂದ ಮಹಿಳೆ. ನನ್ನ ಹಾಗೂ ರಾಮ್ ದಾಸ್ ಪ್ರಕರಣ ನ್ಯಾಯಾಲಯದಲ್ಲಿದೆ.

ನನ್ನ ಉದ್ದೇಶ ರಾಮ್ ದಾಸ್ ಸೋಲಿಸುವುದು ಅಲಲ್. ಜನಸೇವೆಗೆ ಹಾಗೂ ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಅಷ್ಟೆ. ಟಿಕೇಟ್ ಹಿಂಪಡೆಯುವ ಯೋಚನೆಯಿಲ್ಲ. ನಾನು ಯುವ ರಾಜಕಾರಣಿ. ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದವರ ಬಗ್ಗೆ ಮಾತನಾಡುವುದಿಲ್ಲ.

ಪ್ರೇಮಕುಮಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಂತೆ, ನಿಜಾನಾ?ಪ್ರೇಮಕುಮಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಂತೆ, ನಿಜಾನಾ?

10 ವರ್ಷಗಳಿಂದ ರಾಮ್ ದಾಸ್ ಅವರ ಜೊತೆ ಇದ್ದು ರಾಜಕೀಯದ ಬಗ್ಗೆ ಅರಿವಿದೆ. ನನಗೆ ಅನ್ಯಾಯವಾಗಿದ್ದು ಈ ರಾಜಕೀಯ ವ್ಯವಸ್ಥೆಯಿಂದಲೇ, ಅದನ್ನು ಸರಿಪಡಿಸಿಕೊಂಡು ಹೋಗಲು ರಾಜಕೀಯ ಜೀವನದಿಂದ ಮಾತ್ರ ಸಾಧ್ಯ ಎಂದರು.

ರಾಮದಾಸ್ - ಪ್ರೇಮಕುಮಾರಿ ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದ್ದರಿಂದ, ಎಲ್ಲೋ ತಮಗೆ ನ್ಯಾಯ ಲಭಿಸುವುದಿಲ್ಲ ಎಂಬ ಸತ್ಯವರಿತ ಪ್ರೇಮಾರವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಹೆಚ್ಚು ಹೊಡೆತ ಬೀಳುವುದು ರಾಮ್ ದಾಸ್ ರವರಿಗೆ. ಪ್ರೇಮ ಕುಮಾರಿ ರಾಜಕೀಯದ ಆಗಮನ ರಾಮ್ ದಾಸ್‌ ಅವರನ್ನು ಮುಜುಗರಕ್ಕೀಡು ಮಾಡುವುದರಲ್ಲಿ ಸಂಶಯವೇ ಇಲ್ಲ.

ಅಷ್ಟೇ ಅಲ್ಲದೇ ಇದರಿಂದಾಗಿ ಅವರಿಗೆ ಬಿಜೆಪಿ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ. ಅದರಲ್ಲೂ ಒಂದು ಪಕ್ಷ ರಾಮ್ ದಾಸ್ ಗೆ ಟಿಕೇಟ್ ಲಭಿಸಿದರೂ ಮತ ವಿಭಜನೆಗೊಳ್ಳುವ ಸಾಧ್ಯತೆ ಹೆಚ್ಚು.

ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೇ ಪ್ರೇಮಕುಮಾರಿಯವರು ರಾಮ್ ದಾಸ್ ರ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲೆಂದೋ ಅಥವಾ ತಮ್ಮ ವೈಯುಕ್ತಿಕ ಜೀವನದ ಸಮಸ್ಯೆ ಪರಿಹಾರಕ್ಕಾಗಿಯೋ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬುದು ಇಲ್ಲಿನ ಜನರ ಅಭಿಪ್ರಾಯ.

English summary
Premkumari will contest from Krishnaraja Constituency as Independent candidate against Ex minister and BJP Candidate Ramdas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X