• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ ಸೇರಿದ ಪ್ರೇಮಕುಮಾರಿ

By Mahesh
|

ಮೈಸೂರು, ಜನವರಿ 07: ಮಾಜಿ ಸಚಿವ ಎಸ್ಎ ರಾಮದಾಸ್ ಜತೆಗಿನ ಪ್ರೇಮ ಪ್ರಕರಣದಿಂದ ಬೆಳಕಿಗೆ ಬಂದ ಪ್ರೇಮಕುಮಾರಿ ಅವರು ಭಾನುವಾರದಂದು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷ (ಐ.ಎನ್.ಸಿ.ಪಿ.) ಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಅಯೂಬ್ ಖಾನ್ ಮುಂತಾದವರು ಉಪಸ್ಥಿತರಿದ್ದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಸೇವೆ ಮಾಡಬೇಕು ಎನ್ನುವ ಹಂಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದೇನೆ. ರಾಮದಾಸ್ ಅವರ ಮೇಲಿನ ಹಠದಿಂದಲ್ಲ. ವೈಯಕ್ತಿಕ ಜೀವನವೇ ಬೇರೆ ರಾಜಕೀಯ ಜೀವನವೇ ಬೇರೆ ಎಂದು ಹೇಳಿದರು.

ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!

ಮೈಸೂರಿನಿಂದಲೇ ಸ್ಪರ್ಧೆ: ನಾನು ಮೈಸೂರಿನಿಂದಲೇ ಅಸೆಂಬ್ಲಿಗೆ ಸ್ಪರ್ಧಿಸುತ್ತೇನೆ. ಆದರೆ, ಯಾವ ಕ್ಷೇತ್ರ ಎಂಬುದನ್ನು ಪಕ್ಷ ನಿರ್ಧರಿಸಲಿದೆ. ರಾಮದಾಸ್ ಅವರ ವಿರುದ್ಧ ಸ್ಪರ್ಧಿಸಬೇಕು ಎಂಬುದು ರಾಜಕೀಯಕ್ಕೆ ಬಂದಿಲ್ಲ. ಸಮಾಜ ಸೇವೆ ಮಾಡುವುದು ನನ್ನ ಗುರಿ ಎಂದು ಪ್ರೇಮಕುಮಾರಿ ಹೇಳಿದರು.

2018ರ ಚುನಾವಣೆಗೆ ಸ್ಪರ್ಧೆ : ಪ್ರೇಮಕುಮಾರಿ ಸಂದರ್ಶನ

ವಿದ್ಯಾರ್ಥಿ ದೆಸೆಯಲ್ಲೇ ನನಗೆ ರಾಜಕೀಯ ಆಸಕ್ತಿ ಇದೆ. ನಾ‌ನು ಬಹಳ‌ ನೊಂದಿರುವ ಹೆಣ್ಣು ಮಗಳು. ನೊಂದವರ ಧ್ವನಿಯಾಗಬೇಕು. ಸರ್ಕಾರಗಳು ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನ ನನ್ನ ಪ್ರಕರಣದಲ್ಲೇ ಸಾಬೀತಾಗಿದೆ. ಹಾಗಾಗಿ ನೊಂದವರ ಪರ‌ ನಿಲ್ಲಬೇಕೆಂಬ ಸದುದ್ದೇಶದಿಂದ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Premakumari today joined Indian New Congress Party in presence of party president Ayub Khan. Premakumari who had kicked-up a controversy claiming that former Minister S.A. Ramdas had secretly married her, recently had announced that she will contest election from Mysuru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more