ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮದಾಸ್ ಬೆನ್ನು ಬಿಡದ ಪ್ರೇಮಕುಮಾರಿ, ಕಚೇರಿ ಮುಂದೆ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 21: ಪ್ರೇಮಕುಮಾರಿ ಅವರು ಬಿಜೆಪಿ ಶಾಸಕ ರಾಮದಾಸ್ ಅವರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಕೆಲವು ದಿನ ತಣ್ಣಗಾಗಿದ್ದ ಇವರಿಬ್ಬರ ಪ್ರಕರಣದ ಸುದ್ದಿ ಈಗ ಮತ್ತೆ ಗರಿಗೆದರಿದೆ.

ತಾನು ರಾಮದಾಸ್ ಅವರ ಮಡದಿ ಎಂದು ಅವರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವ ಪ್ರೇಮಕುಮಾರಿ ಅವರು ಇದ್ದಕ್ಕಿದ್ದಂತೆ ರಾಮದಾಸ್ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ?ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ?

ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ, ಅದು ಇತ್ಯರ್ಥವಾಗಲು ಬಹಳ ಸಮಯ ಬೇಕು ಆದರೆ ಅಲ್ಲಿವರೆಗೆ ಕಾಯಲು ಸಾಧ್ಯವಿಲ್ಲ. ನಾನು ಅವರ ಜೊತೆನೆ ಬದುಕಬೇಕು ಅವರು ನನ್ನ ಗಂಡ. ನಾನೇನು ಕೀಳು ಜಾತಿಯವಳಲ್ಲ. ನಾನು ಕೂಡ ಒಳ್ಳೆಯ ಕುಟುಂಬದಿಂದಲೇ ಬಂದಿರುವುದು. ನಾನು ಸತ್ತರು ರಾಮದಾಸ್ ಬಿಡುವುದಿಲ್ಲ ಎಂದಿದ್ದಾರೆ.

Premakumari did protest in front of Ramdas office

ಅವರ ವಿರುದ್ಧ ಚುನಾವಣೆಗೆ ನಿಂತಿದ್ದ ನಾನು ಅವರು ಹೇಳಿದ್ದಕ್ಕಾಗಿ ಚುನಾವಣೆಯಿಂದ ಹಿಂದೆ ಸರಿದೆ ಆದರೆ ಈಗ ಅವರು ನನ್ನ ಕರೆ ಸ್ವೀಕರಿಸುತ್ತಿಲ್ಲ, ಅವರ ಮನೆ ಒಳಕ್ಕೆ ನನ್ನನ್ನು ಬಿಡುತ್ತಿಲ್ಲ, ಮನೆ ಕೆಲಸದವಳಿಗೆ ಹೋಗಲು ಅನುಮತಿ ಇದೆ ನನಗೆ ಏಕೆ ಇಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ರಾಮದಾಸ್ ಅವರು ಮನೆಯಲ್ಲೂ ಇಲ್ಲಾ, ಆಫೀಸಿನಲ್ಲೂ ಇಲ್ಲಾ. ತಪ್ಪೇ ಮಾಡಿಲ್ಲ ಎಂದರೆ ಮತ್ಯಾಕೆ ಪಲಾಯನ ಮಾಡ್ತಿದ್ದಾರೆ? ಈವತ್ ಇದೆ ಅವನಿಗೆ ಮಾರಿಹಬ್ಬ..! ಅವನಿಗೆ ಸರಿಯಾಗಿ ಗ್ರಹಚಾರ ಬಿಡಿಸ್ತೀನಿ..! ಯಾವುದೇ ಕಾರಣಕ್ಕೂ ರಾಮದಾಸ್ ಬಿಡಲ್ಲ ಅಂಥ ಪ್ರೇಮ ಕುಮಾರಿಬುಸುಗುಟ್ಟಿದ್ದನ್ನು ಸ್ಥಳದಲ್ಲಿದ್ದ ಪೊಲೀಸರು, ಮಾಧ್ಯಮದವರು ಮೂಕ ಪ್ರೇಕ್ಷಕರಾಗಿ ವೀಕ್ಷಿಸಿದರು.

English summary
Premakumari did protest in front of BJP MLA Ramadas office. She said 'i won't let him, I'm his wife i have to live with him, if he is not guilty then why he running away from me' she questioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X