ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮಾರ್ಚ್ 25 ರಂದು ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಕೆ

|
Google Oneindia Kannada News

ಮೈಸೂರು, ಮಾರ್ಚ್ 21:ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಮಾರ್ಚ್ 25 ರಂದು ನಾಮಪತ್ರ ಸಲ್ಲಿಸುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.25 ರಂದು ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ‌ನಾಮಪತ್ರ ಸಲ್ಲಿಸಲಿದ್ದೇನೆ. ನಾಮಪತ್ರ ಸಲ್ಲಿಕೆಗೆ ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಆಗಮಿಸಲಿದ್ದಾರೆ ಎಂದರು.

ಮೈಸೂರಿಗೆ ಸಿದ್ದು ಮಾಡಿದ್ದೇನು? ಪ್ರತಾಪ್ ಸಿಂಹ ಬೆಂಬಲಿಗನ ಪ್ರಶ್ನೆಮೈಸೂರಿಗೆ ಸಿದ್ದು ಮಾಡಿದ್ದೇನು? ಪ್ರತಾಪ್ ಸಿಂಹ ಬೆಂಬಲಿಗನ ಪ್ರಶ್ನೆ

ಈಗಾಗಲೇ ಕೊಡಗು ವ್ಯಾಪ್ತಿಯಿಂದ‌ಲೇ ಪ್ರಚಾರ ಆರಂಭ ಮಾಡಿದ್ದೇನೆ. ಇನ್ನೆರಡು ದಿನಗಳ ಕಾಲ ಆ ಭಾಗದ ಪ್ರಚಾರ ಮುಗಿಯಲಿದೆ. ಮೋದಿಯವರು ಪ್ರಚಾರಕ್ಕೆ ‌ಬರುವ ಸಾಧ್ಯತೆ ಇದೆ ಎಂದು ಹೇಳಿದರು.

Pratap simha will file a nomination on March 25th

 ಪ್ರತಾಪ್ ಸಿಂಹ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ಪ್ರತಾಪ್ ಸಿಂಹ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು

ನಾನು ನನ್ನ ಚುನಾವಣೆ ಮುಗಿಯುವವರೆಗೂ ಯಾವುದೇ ಅಭ್ಯರ್ಥಿಯ ಪರ ಪ್ರಚಾರ ಹೋಗುವುದಿಲ್ಲ. ನನ್ನ ಚುನಾವಣೆ ಮುಗಿದ ನಂತರ‌ ಇತರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ಮೈತ್ರಿ ಪಕ್ಷ ಏನೇ ತಂತ್ರ ಮಾಡಿದರೂ ಗೆಲುವು ನನ್ನದೇ. ಜೆಡಿಎಸ್ ಕಾಂಗ್ರೆಸ್ ಪಕ್ಷದಲ್ಲಿಯೂ ಮೋದಿ ಬೆಂಬಲಿಸುವ ಜನರಿದ್ದಾರೆ. ಅವರಲ್ಲೇ ಬಿಜೆಪಿಯನ್ನು ಬೆಂಬಲಿಸುತ್ತಾರೆ.ಮೈಸೂರು ಭಾಗದಲ್ಲಿ ಮೈತ್ರಿ ಆಟ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಿದ್ದಾರೆ ಎಂದು ತಿಳಿಸಿದರು.

English summary
Mysuru-Kodagu BJP Candidate Pratap simha will file a nomination on March 25th. BJP leaders Yadiyurappa, Shri Ramulu will likely attend on that day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X