ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ, ಎಚ್ಡಿಕೆ ಮಾತು ಎರಡು ಒಂದೇ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 08; "ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ ಮತ್ತು ಎಚ್‌. ಡಿ. ಕುಮಾರಸ್ವಾಮಿ ಮಾತು ಎರಡು ಒಂದೇ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ನನ್ನ ಬಳಿ ಇರುವ ಸಾಕ್ಷಿ ಕೊಟ್ಟರೆ ಸರಕಾರ ಬೀಳುತ್ತದೆ" ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥ ನಾರಾಯಣ ಎತ್ತಿದ ಕೈ ಎಂದ ಕುಮಾರಸ್ವಾಮಿಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥ ನಾರಾಯಣ ಎತ್ತಿದ ಕೈ ಎಂದ ಕುಮಾರಸ್ವಾಮಿ

"ಈ ಇಬ್ಬರ ಮಾತಿಗೆ ನಿಖರತೆಯೂ ಇರಲ್ಲ. ಸ್ಪಷ್ಟತೆಯೂ ಇರಲ್ಲ. ಸ್ಥಿರತೆಯೂ ಇರಲ್ಲ. ಪಿಎಸ್‌ಐ ಹಗರಣದ ಕಿಂಗ್ ಪಿನ್ ಯಾರು? ಎಂಬ ಸತ್ಯ ಗೊತ್ತಿದ್ದರೆ ಅದನ್ನು ಹೇಳಿ ಉಪಕಾರ ಮಾಡಲಿ. ಈ ಸರಕಾರ ಇರಬೇಕಾದ ಅನಿವಾರ್ಯತೆ ನಿಮಗೆ ಏನಿದೆ?. ಸಾಕ್ಷಿ ನೀಡದೆ ಈ ಸರಕಾರ ಉಳಿಸಿ ಕೊಳ್ಳುವ ಕೆಲಸ ನಿಮಗೆ ಯಾಕೆ ಹೇಳಿ?" ಎಂದು ಪ್ರಶ್ನಿಸಿದರು.

Breaking; ಪಿಎಸ್‌ಐ ಹಗರಣ; ನೇಮಕಾತಿ ವಿಭಾಗದ 12 ಸಿಬ್ಬಂದಿ ವರ್ಗಾವಣೆ Breaking; ಪಿಎಸ್‌ಐ ಹಗರಣ; ನೇಮಕಾತಿ ವಿಭಾಗದ 12 ಸಿಬ್ಬಂದಿ ವರ್ಗಾವಣೆ

Pratap Simha Verbal Attack On Former CM HD Kumaraswamy

ಸೋಮವಾರ ಶ್ರೀರಾಮಸೇನೆಯಿಂದ ದೇವಾಲಯಗಳಲ್ಲಿ ಸುಪ್ರಭಾತ ಆರಂಭ ವಿಚಾರವನ್ನು ಸಂಸದರು ಸಮರ್ಥಿಸಿಕೊಂಡರು. "ಸುಪ್ರಭಾತ ಹಾಕುವ ಕ್ರಮ ಒಂದು ರೀತಿ ಪ್ರತಿರೋಧದ ರೀತಿ ಇದೆ. ಇಂತಹ ಬೆಳವಣಿಗೆಗಳು ನಿರೀಕ್ಷಿತ. ಮಸೀದಿಯ ಗೋಪುರದ ಮೇಲೆ ಲೌಡ್ ಸ್ಪೀಕಾರ್ ಹಾಕಿ ಊರಿಗೆಲ್ಲಾ ಕಿರಿಕಿರಿ ಮಾಡುವುದನ್ನು ಎಷ್ಟು ದಿನ ಸಹಿಸಿಕೊಳ್ಳುವುದಕ್ಕೆ ಸಾಧ್ಯ?" ಎಂದು ಪ್ರಶ್ನಿಸಿದರು.

Breaking; ಪಿಎಸ್‌ಐ ನೇಮಕಾತಿ ಹಗರಣ, 11 ಪೊಲೀಸ್ ಸಿಬ್ಬಂದಿ ಅಮಾನತು Breaking; ಪಿಎಸ್‌ಐ ನೇಮಕಾತಿ ಹಗರಣ, 11 ಪೊಲೀಸ್ ಸಿಬ್ಬಂದಿ ಅಮಾನತು

ಮನೆಯ ಒಳಗೆ ಪ್ರಾರ್ಥನೆ ಮಾಡಿಕೊಳ್ಳಲಿ; "100 ಮೀಟರ್‌ಗೆ ಒಂದು ಅನಧಿಕೃತ ಮಸೀದಿ ಮಾಡಿಕೊಂಡು ಲೌಡ್ ಸ್ಪೀಕರ್ ಹಾಕಿ ಕೂಗಿಸುವುದು ತಪ್ಪಲ್ಲವೇ?. ಇಸ್ಲಾಂ ಹುಟ್ಟಿದ್ದಾಗ ಸ್ಪೀಕರ್ ಹಾಕಿ ಕೂಗಿಸಲು ಅವತ್ತು ಸ್ಪೀಕರ್ ಇತ್ತಾ?. ಅಲ್ಲಾ ಬಿಟ್ಟರೆ ಬೇರೆ ದೇವರೆ ಅಲ್ಲ ಎಂದು ಕೂಗುತ್ತಾರೆ. ಮಸೀದಿ ಒಳಗೆ, ಮನೆಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಿ" ಎಂದು ಪ್ರತಾಪ್ ಸಿಂಹ ಹೇಳಿದರು.

"ರಸ್ತೆಯಲ್ಲಿ ಮುಸ್ಲಿಂಮರು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು. ಪ್ರಾರ್ಥನೆ ಮಾಡಲು ಸರಕಾರದ ಮೈದಾನ ಕೊಟ್ಟರೆ ಅದನ್ನು ಈದ್ಗಾ ಮೈದಾನ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ತಡೆ ಹಾಕಬೇಕು" ಎಂದು ಸಂಸದರು ಒತ್ತಾಯಿಸಿದರು.

ಪಾಕ್‌ ಪರ ಘೋಷಣೆ ವಿಚಾರವಾಗಿ ಮಾತನಾಡಿದ ಪ್ರತಾಪ್ ಸಿಂಹ, "ಮೈಸೂರಿನಲ್ಲಿ ಟಿಪ್ಪು ಬೀಜಗಳು ಇವೆ ಎಂಬುದು ನಮಗೆ ಗೊತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗಲೇ ನಮಗೆ ಇದು ಗೊತ್ತಾಯಿತು. ಈ ಬೀಜಗಳನ್ನು ಮಟ್ಟ ಹಾಕುವ ಕೆಲಸವನ್ನು ಸರಕಾರ ಸಮರ್ಥವಾಗಿ ಮಾಡುತ್ತದೆ" ಎಂದರು.

English summary
Kodi mutt swamiji predictions and former chief minister H. D. Kumaraswamy statement are both same. There is no document for that said Mysuru MP Pratap Simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X