ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲವಿಲ್ಲದ ದೇಶ ಯಾವುದಿದೆ?, ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 13; "ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಜಗದೀಶ್ ಶೆಟ್ಟರ್ ಅವಧಿಯರೆಗೂ ಆದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಐದು ವರ್ಷದ ಆಡಳಿತದಲ್ಲಿ ಆದ ಸಾಲವೇ ಹೆಚ್ಚು. ಶೇ 3ರಷ್ಟು ಸಾಲ ಇವರ ಅವಧಿಯಲ್ಲಿ ಜಾಸ್ತಿ ಆಗಿದೆ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗುಡುಗಿದರು.

ಭಾನುವಾರ ಮೈಸೂರು ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಸಿದ್ದರಾಮಯ್ಯ ಅವರೇ ಸಾಲ ಇಲ್ಲದ ದೇಶ ಯಾವುದಿದೆ ಹೇಳಿ. ಸ್ವತಃ ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ" ಎಂದರು.

ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ; ಸಿದ್ದರಾಮಯ್ಯ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ; ಸಿದ್ದರಾಮಯ್ಯ

"ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯೇ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾ ಪಾಸ್ ಮಾಡಿರೋರು, ಬಿಎ ಪಾಸ್ ಮಾಡಿರೋರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ" ಎಂದು ಟೀಕಿಸಿದರು.

 ಪಂಜಾಬ್‌ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ರೈತರ ಸಾಲ ಮನ್ನಾ ಭರವಸೆ ಪಂಜಾಬ್‌ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ರೈತರ ಸಾಲ ಮನ್ನಾ ಭರವಸೆ

Pratap Simha Question To Siddaramaiah In Loan

"ಸಿದ್ದರಾಮಯ್ಯ ಅವರಿಗೆ ಆರ್ಥಿಕ ವ್ಯವಸ್ಥೆ ಅರ್ಥವಾಗಿಲ್ಲ. ಹೀಗಾಗಿ ಅವರು ಕೇಂದ್ರದ ಬಜೆಟ್ ಅನ್ನು ಸಾಲದ ಬಜೆಟ್ ಅಂತಾ ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡಿಸಿದ್ದಾರೆ ಅಷ್ಟೆ. ಅವರಿಗೆ ಆರ್ಥಿಕ ವ್ಯವಸ್ಥೆ ಸ್ಪಷ್ಟವಾಗಿ ಅರ್ಥವಾಗಿಲ್ಲ" ಎಂದು ಟೀಕಿಸಿದರು.

ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್‌ಗೆ ಕೇಂದ್ರ ಸಮ್ಮತಿ ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್‌ಗೆ ಕೇಂದ್ರ ಸಮ್ಮತಿ

"ನಾವು ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸುತ್ತೇವೆ. ಆದರೆ ಕಾಂಗ್ರೆಸ್‌ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯದಲ್ಲಿ ಏನೇನಾಗಿದೆ? ಎಂಬುದು ಜನರಿಗೆ ಗೊತ್ತಿದೆ" ಎಂದರು.

ರೈಲಿನ ಹೆಸರು ಬದಲಾವಣೆ; ಟಿಪ್ಪು ರೈಲಿನ ಹೆಸರು ಬದಲಾವಣೆ ಕುರಿತು ಚರ್ಚೆ ಬಗ್ಗೆ ಮತನಾಡಿದ ಪ್ರತಾಪ್ ಸಿಂಹ, "ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ಬಗ್ಗೆ ಸಾಕಷ್ಟು ಜನ ಮನವಿ ಮಾಡಿದ್ದರು. 1870ರಲ್ಲಿ ಚಾಮರಾಜ ಒಡೆಯರ್ ಮೈಸೂರಿನಲ್ಲಿ ರೈಲು ಹಳಿ ಬರಲು ಕಾರಣಕರ್ತರಾಗಿದ್ದರು. ಅದು ಮೈಸೂರು ಮಹಾರಾಜರ ವೈಯಕ್ತಿಕ ಯೋಜನೆಯಾಗಿತ್ತು. ರೈಲು ಸಂಪರ್ಕವನ್ನು ಮೈಸೂರಿಗೆ ತಂದವರು ಮೈಸೂರು ಅರಸರು" ಎಂದು ಹೇಳಿದರು.

"ಒಡೆಯರ್ ಅವರ ಹೆಸರಿನಲ್ಲಿ ಒಂದು ರೈಲು ಇಲ್ಲ. ಆದರೆ, ಆ ಯದುವಂಶವನ್ನು ನಾಶ ಮಾಡಲು ಹೋದ ಟಿಪ್ಪು ಹೆಸರು ಏಕೆ?. ಟಿಪ್ಪು ಸುಲ್ತಾನ್ ಒಂದು ಹಳಿ ಹಾಕಿಲ್ಲ. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ" ಎಂದು ಘೋಷಣೆ ಮಾಡಿದರು.

"ರಾಜ್ಯ ಸರಕಾರ ಶಾಂತಿ ಕದಡಬೇಡಿ ಎಂದು ಮನವಿ ಮಾಡುವ ಅವಶ್ಯಕತೆ ಇಲ್ಲ. ಶಾಂತಿ ಕದಡುವವವರ ಮೇಲೆ ಕಠಿಣ ಕ್ರಮ ಕೈ ಗೊಳ್ಳುತ್ತೇವೆ. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಹಿಜಾಬ್ ಅಂತಾ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಾಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ" ಎಂದು ಕರೆ ನೀಡಿದರು.

ಮೈಸೂರು ವಿಮಾನ ವಿಸ್ತರಣೆಗೆ ಹಣ ಬಿಡುಗಡೆ ವಿಚಾರ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಮಾಜಿ ಸಿಎಂ ಯಡಿಯೂರಪ್ಪ ವಿಷಕಂಠನಿದ್ದಂತೆ. ಅವರ ಅವಧಿಯಲ್ಲಿ ರಾಜ್ಯಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಪ್ರವಾಹ ಬಂತು, ಕೋವಿಡ್‌ನಿಂದ ರಾಜ್ಯದ ಜನರು ತತ್ತರಿಸಿದರು. ಎಲ್ಲಾ ಕಡೆ ಒಬ್ಬರೇ ಓಡಾಡಿ ಕೆಲಸ ಮಾಡಿದರು" ಎಂದರು.

'ಆ ವೇಳೆ ಆದಾಯ ಸಂಪೂರ್ಣ ಕುಸಿದಿತ್ತು. ಖಜಾನೆ ಬರಿದಾಗಿತ್ತು ಆಗ ಸಿಎಂ ಆಗಿ ಅವರು ಜೀವ ಕಾಪಾಡಿದರು. ಅಷ್ಟಕ್ಕೆ ನಾನು ಕೃತಜ್ಞನಾಗಿದ್ದೇನೆ. ಅವರು ಜೀವ ಕಾಪಾಡಿದರು ನಾವು ಜೀವನ ಕಾಪಾಡುತ್ತೇವೆ" ಎಂದು ತಿಳಿಸಿದರು.

English summary
Mysuru Kodagu MP Pratap Simha question to leader of opposition Siddaramaiah about loan of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X