ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು - ಕಾಚಿಗುಡ ರೈಲು ವಿಸ್ತರಣೆಗೆ ಪ್ರತಾಪ್ ಸಿಂಹ ಹಸಿರು ನಿಶಾನೆ

|
Google Oneindia Kannada News

ಮೈಸೂರು, ಮಾರ್ಚ್ 05: ಮೈಸೂರು - ಕಾಚಿಗುಡ (ಹೈದ್ರಾಬಾದ್) ರೈಲು ವಿಸ್ತರಣೆಗೆ ಸಂಸದ ಪ್ರತಾಪ್ ಸಿಂಹ ಇಂದು ಮಂಗಳವಾರ ಹಸಿರು ನಿಶಾನೆ ತೋರಿಸಿದರು.

ಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲುಮಾರ್ಚ್‌ನಿಂದ ಶಿವಮೊಗ್ಗದಿಂದ ತಿರುಪತಿಗೆ ಎಕ್ಸ್‌ಪ್ರೆಸ್ ರೈಲು

ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ರೈಲು ವಿಸ್ತರಣೆಗೆ ಚಾಲನೆ ನೀಡಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ಹೈದ್ರಾಬಾದ್ ನಡುವೆ ಸಾಕಷ್ಟು ವಾಣಿಜ್ಯ ವ್ಯವಹಾರ ಇದೆ. ಹೀಗಾಗಿ ಮೈಸೂರು - ಕಾಚಿಗೂಡ ಎಕ್ಸ್‌ಪ್ರೆಸ್ ಪ್ರಯಾಣಿಕರ ಅಗತ್ಯತೆ ಪೂರೈಸಲಿದೆ ಎಂದರು.

Pratap Simha gave a green signal to the Mysore-Kachiguda train extension

ಕಳೆದ 10 ವರ್ಷಗಳಲ್ಲಿ ಈ ಭಾಗಕ್ಕೆ ಕೇವಲ 1 ಟ್ರೈನ್ ತರಲಿಲ್ಲ.ನಮ್ಮದೇ ಪಕ್ಷದ ಎಂಪಿ ಇದ್ರು, ಆದ್ರೂ ತರೋದಿಕ್ಕೆ ಆಗಲಿಲ್ಲ. ಆದ್ರೆ ನರೇಂದ್ರ ಮೋದಿ ನೆರವಿನಿಂದ ನಾನು 6 ಟ್ರೈನ್ ತಂದಿದ್ದೇನೆ. ಬ್ರಿಟಿಷ್ ಕಾಲದ ರೈಲ್ವೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದ್ರೆ ಮೋದಿಯಂತ ಪ್ರಧಾನಿ, ಪಿಯೂಸ್ ಗೋಯಲ್ ಅಂತಾ ಸಚಿವರಿರಬೇಕು ಎಂದು ಶ್ಲಾಘಿಸಿದರು.

 ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಈ ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ, ಹಾಗೆಯೇ ಮೋದಿಯೂ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಪ್ರತಾಪ್ ಸಿಂಹ ನುಡಿದರು.

Pratap Simha gave a green signal to the Mysore-Kachiguda train extension

ಇನ್ನು ಮುಂದೆ ಮೈಸೂರಿನಿಂದ ಕೇವಲ 205 ರೂಪಾಯಿನಲ್ಲಿ ಹೈದ್ರಬಾದ್ ತಲುಪಬಹುದು ಎಂದ ಪ್ರತಾಪ್ ಸಿಂಹ, 2 ವರ್ಷಗಳಲ್ಲಿ ಮೈಸೂರು ರೈಲ್ವೆಯಲ್ಲಿ ಯಾವುದೇ ಕೆಲಸ ಇರಬಾರದು. ಈ ನಿಟ್ಟಿನಲ್ಲಿ ಮುಂದೆ ಸ್ಯಾಟಲೈಟ್ ರೈಲ್ವೆ ನಿಲ್ದಾಣ ಆದ ಬಳಿಕ ಎಲ್ಲಾ ಕೆಲಸ ಮಾಡುತ್ತೇನೆ. ನಾನು ಬೇರೆಯವರ ತರ ಕಮಿಷನ್ , ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲ್ಲ. ರಾಜಕಾಣ ಮಾಡಲು ಮೈಸೂರಿಗೆ ಬಂದಿಲ್ಲ, ಸೇವೆ ಮಾಡಲು ಬಂದಿದ್ದೇನೆ ಎಂದರು.

Pratap Simha gave a green signal to the Mysore-Kachiguda train extension

ನಾನು ನನ್ನ ಮಗಳ ಭವಿಷ್ಯ ಯೋಚನೆ ಮಾಡಲ್ಲ. ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡ್ತೀನಿ.ಮಕ್ಕಳು, ಮರಿಮಕ್ಕಳ ಭವಿಷ್ಯಕ್ಕೆ ಬೆಲೆ ಕೊಡುವ ರಾಜಕಾರಣಿ ನಾನಲ್ಲ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡ , ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗೆ ಸೇರಿ ಹಲವರು ಭಾಗಿಯಾಗಿದ್ದರು.

English summary
MP Pratap Simha gave a green signal to the Mysore-Kachiguda (Hyderabad) train extension on Tuesday (March 5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X