• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜವಂಶದ ವಿಶಾಲಾಕ್ಷಿದೇವಿ ಸ್ಥಿತಿ ಚಿಂತಾಜನಕ: ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾದೇವಿ

|
   ಪ್ರಮೋದಾ ದೇವಿ ಒಡೆಯರ್ ಆಯುಧ ಪೂಜೆ ಬಿಟ್ಟು ಬೆಂಗಳೂರಿಗೆ ಬರಲು ಕಾರಣ | Oneindia Kannada

   ಮೈಸೂರು, ಅಕ್ಟೋಬರ್.18: ಜಯಚಾಮರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ಅನಾರೋಗ್ಯ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದಿಢೀರ್ ಬೆಂಗಳೂರಿಗೆ ಹೊರಟಿದ್ದಾರೆ.

   ಮೈಸೂರು ದಸರಾ - ವಿಶೇಷ ಪುರವಣಿ

   ವಿಶಾಲಾಕ್ಷಿ ದೇವಿಯವರ ಸ್ಥಿತಿ ಚಿಂತಾಜನಕವಾಗಿದ್ದು, ಸಾಂಪ್ರದಾಯಿಕ ಆಯುಧ ಪೂಜೆ ಕೈ ಬಿಟ್ಟು ರಾಜಮಾತೆ ಪ್ರಮೋದಾದೇವಿ ಬೆಂಗಳೂರಿಗೆ ಹೊರಟಿದ್ದಾರೆ. ಸದ್ಯ ಆಯುಧ ಪೂಜೆಗೆ ರಾಜಮಾತೆ ಗೈರಾಗಿದ್ದು, ರಾಜವಂಶಸ್ಥರ ಗೈರಿನಲ್ಲಿಯೇ ಯದುವೀರ್ ಒಡೆಯರ್ ಪೂಜೆ ಸಲ್ಲಿಸುತ್ತಿದ್ದಾರೆ.

   ಮೈಸೂರು ಅರಮನೆ ಇಬ್ಬರು ಸದಸ್ಯರ ಆರೋಗ್ಯದಲ್ಲಿ ವ್ಯತ್ಯಯ

   ವಿಶಾಲಾಕ್ಷಿದೇವಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

   ಮೈಸೂರಿನಲ್ಲಿ ಶುರುವಾಯ್ತು ಮಳೆ: ಏನೆಲ್ಲಾ ಅವಾಂತರ ಸೃಷ್ಟಿಸಿದೆ ಗೊತ್ತಾ?

   ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ (86) ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.

   English summary
   Jayachamarajendra Wodeyar's last daughter Vishalakshidevi Suffering from illness. So Pramoda Devi Wadiyar is coming to Bangalore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X