ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಟ್ಟ ಹತ್ತಿ ಚಾಮುಂಡಿ ದರ್ಶನ ಪಡೆದ ಪವರ್ ಸ್ಟಾರ್ ಪುನೀತ್

|
Google Oneindia Kannada News

ಮೈಸೂರು, ಜೂನ್ 8: ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿ ಅಧಿದೇವತೆ ಚಾಮುಂಡಿ ದೇವಿಗೆ ಸ್ಯಾಂಡಲ್ ‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವಸ್ಥಾನದಲ್ಲಿ ಪುನೀತ್ ರಾಜ್​ಕುಮಾರ್​ ದಿಢೀರ್ ಭೇಟಿ ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಮೈಸೂರಲ್ಲಿ ಅಭಿಮಾನಿಗಳೊಂದಿಗೆ ನಟಸಾರ್ವಭೌಮ ಚಿತ್ರ ವೀಕ್ಷಿಸಿದ ಪುನೀತ್ ಮೈಸೂರಲ್ಲಿ ಅಭಿಮಾನಿಗಳೊಂದಿಗೆ ನಟಸಾರ್ವಭೌಮ ಚಿತ್ರ ವೀಕ್ಷಿಸಿದ ಪುನೀತ್

ಪುನೀತ್ ರಾಜ್ ಕುಮಾರ್ ಬೆಟ್ಟ ಹತ್ತಿ ಇಳಿಯುವವರೆಗೂ ಅಭಿಮಾನಿಗಳು ಜೊತೆಯಲ್ಲಿ ಅವರಿಗೆ ಸಾಥ್ ನೀಡಿದರು. ಪುನೀತ್ ಮೈಸೂರಿಗೆ ಬಂದಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವುದು ಸಾಮಾನ್ಯ. ಹಾಗೆಯೇ ಇಂದು ಕೂಡ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

Power star puneeth rajkumar climbed chamundi hills

ಕೆಲವು ದಿನಗಳ ಕೆಳಗೆ ಮೈಸೂರಿನಲ್ಲಿ ನಡೆದ ಮಹಿಳಾ ಪುನರ್ವಸತಿ ಶಕ್ತಿಧಾಮದ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದ ಸಂದರ್ಭದಲ್ಲೂ ಕಾರ್ಯಕ್ರಮ ಮುಗಿಸಿ ಬೆಟ್ಟ ಹತ್ತಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದರು.

English summary
Power star puneeth rajkumar climbed chamundi hills. He offered a special pooja in temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X