ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 111 ವರ್ಷ ಹಿಂದಿನ ಅಂಚೆಯಣ್ಣನ ಪ್ರತಿಮೆ ಸ್ಥಳಾಂತರ ಯಶಸ್ವಿ

|
Google Oneindia Kannada News

ಮೈಸೂರು, ಮೇ 9:111 ವರ್ಷ ಹಳೆಯದಾದ ಮೈಸೂರು ಸಂಸ್ಥಾನದ ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್‌ ಪ್ರತಿಮೆಗಳು ಸ್ಥಳಾಂತರಗೊಂಡಿವೆ.

ಹಲವು ತಿಂಗಳ ಹಿಂದೆಯೇ ಲಾರಿಯೊಂದು ಪ್ರತಿಮೆಯ ಬುಡಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಭಿನ್ನಗೊಂಡಿತ್ತು. ಮುಂದಾಗುವ ಅನಾಹುತದ ಬಗ್ಗೆ ಎಚ್ಚೆತ್ತ ಇಲಾಖೆ ಪ್ರತಿಮೆಗಳ ಸುರಕ್ಷತೆಯ ದೃಷ್ಟಿಯಿಂದ ಪ್ರತಿಮೆ ಸ್ಥಳಾಂತರಿಸಲು ನಿರ್ಧರಿಸಿ, ಪಾರಂಪರಿಕ ಸಂರಕ್ಷಣೆ ಸಮಿತಿಗೆ ಸ್ಥಳಾಂತರ ಬಗ್ಗೆ ವರದಿ ನೀಡಿ, ಅವರಿಂದ ಅನುಮತಿ ಪಡೆದು ಪ್ರತಿಮೆ ಸ್ಥಳಾಂತರಗೊಳಿಸಿದೆ.

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಮೈಸೂರು ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್ ಅಶ್ವಾರೋಹಿ ದಳದ ಪ್ರವೇಶ ದ್ವಾರದ ಮುಂಭಾಗದಲ್ಲಿ ಬಲ ಭಾಗದಲ್ಲಿ ಬಸಪ್ಪರ ಪ್ರತಿಮೆ ಹಾಗೂ ಎಡಭಾಗದಲ್ಲಿ ಭುಜರಂಗರಾವ್ ಪ್ರತಿಮೆಗಳನ್ನು ಸುಮಾರು ಐದು ಅಡಿ ಹಿಂದಕ್ಕೆ ಸ್ಥಳಾಂತರ ಮಾಡಲಾಯಿತು.

Postman Basappa’s statue moved to new location at Mysuru

ಪ್ರಾಚ್ಯವಸ್ತು, ಅಶ್ವಾರೋಹಿ ದಳದ ಒಳಾವರಣದಲ್ಲಿ ನಿರ್ಮಿಸಿರುವ ಪ್ಲಾಟ್ ಫಾರಂಗೆ ಸ್ಥಳಾಂತರವಾಗುವ ಪ್ರತಿಮೆಗಳನ್ನು ಸುರಕ್ಷಿತವಾಗಿ ಸಾಗಿಸಲು ಹುಲ್ಲು, ಥರ್ಮ್‍ಕೋಲ್, ಗೋಣಿಚೀಲ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಬಳಸಿ, ತಜ್ಞರ ಸಮ್ಮುಖದಲ್ಲೇ ಪ್ಯಾಕಿಂಗ್ ಮಾಡಲಾಯಿತು. ನಂತರ ಮಾನವಸಂಪನ್ಮೂಲ ಬಳಸಿ ಪ್ರತಿಮೆಗಳನ್ನು ಸಾಗಿಸಲಾಗುತ್ತದೆ. ಇವೆರಡು ಪ್ರತಿಮೆಗಳನ್ನು ಸುಣ್ಣ, ಮರಳು ಹಾಗೂ ನೀರು ಮಿಶ್ರಣದೊಂದಿಗೆ ಲೈಮ್ ಪ್ಲಾಸ್ಟರ್ ವಿಧಾನದಲ್ಲಿ ನಿರ್ಮಾಣ ಮಾಡಲಾಯಿತು.

ಹೆಲಿಕಾಪ್ಟರ್ ತರಬೇತಿ ವಿಭಾಗ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಹೆಲಿಕಾಪ್ಟರ್ ತರಬೇತಿ ವಿಭಾಗ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರ

Postman Basappa’s statue moved to new location at Mysuru

ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್‌ ಪ್ರತಿಮೆ 111 ವರ್ಷಗಳ ಇತಿಹಾಸ ಹೊಂದಿದೆ. ನಾಲ್ವಡಿ ಅವರ ಕಾಲದಲ್ಲಿ ಅಂಚೆ ವಿತರಣೆಯಲ್ಲಿ ಅಪೂರ್ವ ಸಲ್ಲಿಸಿದ್ದ ಬಸಪ್ಪ ಹಾಗೂ ಅಶ್ವದಳದ ಕಂಮಾಂಡರ್‌ ಭುಜಂಗರಾವ್‌ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರಿಬ್ಬರ ಸೇವೆ ನೆನಪಿಗಾಗಿ ಸುಣ್ಣ, ಮರಳು ಹಾಗೂ ನೀರು ಮಿಶ್ರಣದ ಸುಣ್ಣದ ಗಾರೆ(ಲೈಮ್‌ ಮಾಟರ್‌)ಯಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು.

English summary
Postman Basappa and Commandant Bhujangarao Jagadale statue moved to new location at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X