ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭ

|
Google Oneindia Kannada News

ಮೈಸೂರು, ಮೇ 23 :ಮೈಸೂರು - ಕೊಡಗು ಲೋಕಸಭೆ ಕ್ಷೇತ್ರ ಮತ ಎಣಿಕೆ ಆರಂಭಗೊಂಡಿದೆ. ಬೆಳಿಗ್ಗೆ 7ಕ್ಕೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಂಚೆ ಕೊಠಡಿ ಸಂಖ್ಯೆ 13, 14 ರಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ನೇತೃತ್ವದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, 6,649 ಅಂಚೆ ಮತಗಳನ್ನು ಹೊಂದಿದೆ. ಪೊಲೀಸ್ ಭದ್ರತೆ, ಚುನಾವಣೆ ಅಧಿಕಾರಿಗಳು, ವಿವಿಧ ಪಕ್ಷಗಳ ಏಜೆಂಟರುಗಳ ಸಮ್ಮುಖದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ಇನ್ನು ಇದೇ ವೇಳೆ ಮತ ಎಣಿಕೆ ಜಾಗಕ್ಕೆ ಭೇಟಿಯಿತ್ತ ಮೈಸೂರು -ಕೊಡಗು ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್, ನಾನು ಜನರನ್ನ, ದೈವವನ್ನ ನಂಬಿದ್ದೇನೆ. ನನ್ನ ಜನ ಕೈ ಬಿಡಲ್ಲ, ಜನ ಕೈ ಬಿಡುವಂತಹ ಕೆಲಸ ಜೀವನದಲ್ಲಿ ಎಂದೂ ಮಾಡಿಲ್ಲ. ನನ್ನದಲ್ಲದ ತಪ್ಪಿಗೆ ನಾನು 2004-2009ರಲ್ಲಿ ಸೋತಿದ್ದೇನೆ. ಈ ಚುನಾವಣೆ ನನಗೆ ರಾಜಕೀಯ ಜೀವನದ ಮರುಹುಟ್ಟು. ನಿಶ್ಚಿತವಾಗಿ ಈ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

postal vote counting started in mysore

ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮೈತ್ರಿ ಅಭ್ಯರ್ಥಿ ನಿಖಿಲ್ ಮುನ್ನಡೆಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE:ಮೈತ್ರಿ ಅಭ್ಯರ್ಥಿ ನಿಖಿಲ್ ಮುನ್ನಡೆ

ಇನ್ನು ಪೊಲೀಸ್ ಭದ್ರತೆ, ಚುನಾವಣೆ ಅಧಿಕಾರಿಗಳು, ಏಜೆಂಟ್ ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದ್ದು ವಿವಿ ಪ್ಯಾಟ್ ಗಳಲ್ಲಿ ಮತ ಎಣಿಕೆ ನಡೆಯಲಿದೆ.

English summary
Mysore - Kodagu Lok Sabha constituency count starts at the Maharani College, Mysore at 7 am. The vote counting process, led by Deputy Commissioner Abhiram J. Shankar, has 6,649 postal votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X