ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಶೇ 85ರಷ್ಟು ಜನ ಬೂಸ್ಟರ್ ಡೋಸ್ ಪಡೆದಿಲ್ಲ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 13: ಕೋವಿಡ್ 19 ನಾಲ್ಕನೇ ಅಲೆ ಆತಂಕದ ನಡುವೆಯೇ ಮೈಸೂರಿನಲ್ಲಿ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇನ್ನೂ ಡೋಸ್ ಶೇ.85ರಷ್ಟು ಜನ ಬೂಸ್ಟರ್ ಡೋಸ್ ಹಾಕಿಸಿಕೊಳ್ಳದಿರುವುದು ಆರೋಗ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಇದ್ದು, ಸಮರ್ಪಕವಾಗಿ ಕೊರೋನಾ ನಿರ್ವಹಣೆಗೆ ಬೂಸ್ಟರ್ ಡೋಸ್ ಒಂದೇ ಪರಿಹಾರವಾಗಿದೆ. ಜನರು ತಮ್ಮ ಆರೋಗ್ಯದ ಹಿತ ದೃಷ್ಟಿಂದ ಸ್ವಯಂಪ್ರೇತವಾಗಿ ಬೂಸ್ಟರ್ ಡೋಸ್ ಪಡೆಯಲು ಮುಂದಾಗಬೇಕು ಎಂದು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.

ಇತ್ತೀಚೆಗೆ ಕೊರೊನಾ ಪಾಸಿಟಿವಿಟಿ, ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಹೀಗೆ ರೋಗದ ಗಂಭೀರತೆ ಕಡಿಮೆಯಾಗಿರುವುದರಿಂದ ಜನರು ಜ್ವರ, ನೆಗಡಿ, ತಲೆ ನೋವು, ಶೀತದಂತೆ ಇದೂ ಒಂದು ಕಾಯಿಲೆ ಎಂದು ಭಾವಿಸುತ್ತಿದ್ದಾರೆ. ಅದು ಅಲ್ಲದೇ ಮೈಸೂರಿನ ಹಿರಿಯ ನಾಗರಿಕರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದರು.

Poor Response to Covid Booster dose from senior citizens in Mysuru amid 4th wave

ಜಿಲ್ಲೆಯ 33 ಲಕ್ಷ ಜನರಲ್ಲಿ 20 ಲಕ್ಷ ಗ್ರಾಮಾಂತರ, 13 ಲಕ್ಷ ನಗರವಾಸಿಗಳಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ 60 ವರ್ಷ ಮೇಲ್ಪಟ್ಟ 3 ಲಕ್ಷದ 95 ಸಾವಿರ ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ. ಇವರಲ್ಲಿ ಶೇ. 18 (75 ಸಾವಿರದ 800 ಜನ) ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಶೇ.12 ರಷ್ಟು ಮಂದಿ ಮಾತ್ರವೇ ಸರಕಾರದ ಈ ಅಭಿಯಾನಕ್ಕೆ ಸ್ಪಂದಿಸಿ ಡೋಸೇಜ್ ಪಡೆದಿದ್ದಾರೆ.

ನಾಲ್ಕನೇ ಅಲೆ ಆತಂಕ, ಹಿರಿಯ ನಾಗರಿಕರಿಗೆ ವ್ಯಾಕ್ಸಿನ್ ಏಕೆ..?

ಕೊರೊನಾ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕೋಮಾರ್ಬಿಡಿಟಿಗಳಿಗೆ ಅಂದರೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಬೇಗ ಆವರಿಸಿಕೊಳ್ಳುತ್ತದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ನೂರಾರು ಮಂದಿ ಹಿರಿಯ ನಾಗರಿಕರು ಇದೇ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವಂತಾಯಿತು.

Poor Response to Covid Booster dose from senior citizens in Mysuru amid 4th wave

ಇದೇ ಕಾರಣಕ್ಕೆ ಸರಕಾರ ಹಿರಿಯ ನಾಗರಿಕರನ್ನು ಹೈ ರಿಸ್ಕ್ ವರ್ಗವೆಂದು ಪರಿಗಣಿಸಿ ಮೊದಲ ಹಂತದಲ್ಲಿಯೆ ಅವರಿಗೆ ವ್ಯಾಕ್ಸಿನ್ ನೀಡುತ್ತಿದೆ. ಅಂತೆಯೇ 1ನೇ ಹಾಗೂ 2ನೇ ಡೋಸ್ ಅನ್ನು ಹಿರಿಯ ನಾಗರಿಕರು ಪಡೆದುಕೊಂಡಿದ್ದಾರೆ. ಆದರೆ ಇದೀಗ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಮುಂದೆ ಬರದೇ ಇರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

18 ರಿಂದ 59 ವರ್ಷದೊಳಗಿನವರಿಗೆ

18 ರಿಂದ 59 ವರ್ಷದೊಳಗಿನವರನ್ನು ನಾನಾ ವಯೋಮಾನದ ವರ್ಗಗಳಾಗಿ ವಿಂಗಡಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸೇಜ್ ವ್ಯಾಕ್ಸಿನ್ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಫ್ರೆಂಟ್ ಲೈನ್ ವರ್ಕರ್ ಗಳಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ವರ್ಗದಲ್ಲಿ 1 ಲಕ್ಷದ 22 ಸಾವಿರ ಫ್ರೆಂಟ್ ಲೈನ್ ವಾರಿಯರ್ಸ್ ಗೆ ಕಡ್ಡಾಯವಾಗಿ ಬೂಸ್ಟರ್ ಡೋಸೇಜ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

Poor Response to Covid Booster dose from senior citizens in Mysuru amid 4th wave

"ಜೊತೆಗೆ 1 ಲಕ್ಷ ಮಂದಿ ಈಗಾಗಲೇ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಸಿಬ್ಬಂದಿಗೆ ವ್ಯಾಕ್ಸಿನ್ ಪಡೆಯುವುದು ಕಡ್ಡಾಯವಾಗಿರುವುದರಿಂದ ಶೇ.70 ರಷ್ಟು ಮಂದಿ ಬೂಸ್ಟರ್ ಡೋಸೇಜ್ ಪಡೆದುಕೊಂಡಿದ್ದಾರೆ. ಆದರೆ ಸರಕಾರದ ವತಿಯಿಂದ ಉಚಿತವಾಗಿ ವ್ಯಾಕ್ಸಿನ್ ನೀಡುತ್ತಿದ್ದರೂ ಹಿರಿಯ ನಾಗರಿಕರು ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ," ಎಂದು ಮೈಸೂರು ಡಿಹೆಚ್ಓ ಡಾ.ಜಯಂತ್ ತಿಳಿಸಿದರು.

Recommended Video

Virat Kohli ಔಟ್ ಆದ ಮೇಲೆ ಮಾಡಿದ್ದೇನು | Oneindia Kannada

"ಇನ್ನೂ ಮೈಸೂರು ನಗರದ 21 ಪಿಎಚ್ ಸಿಗಳಲ್ಲಿ 3 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದೆ. ಕೊರೊನಾ ತೀವ್ರತೆ ಕಡಿಮೆಯಾಗಿರುವುದರಿಂದ ವ್ಯಾಕ್ಸಿನ್ ಪಡೆದುಕೊಳ್ಳುವಲ್ಲಿ ಜನರ ನಿರಾಸಕ್ತಿ ಕಂಡು ಬರುತ್ತಿದೆ. ಯಾವುದಾದರೂ ಸಂಘಟನೆಗಳು ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸೇಜ್ ಕೊಡಿಸಲು ಮುಂದೆ ಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಾಹನದಲ್ಲಿ ಸಿಬ್ಬಂದಿ ಹಾಗೂ ವ್ಯಾಕ್ಸಿನ್ ಕಳುಹಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು," ಎಂದು ಲಸಿಕೆ ನೋಡೆಲ್ ಅಧಿಕಾರಿ ಡಾ.ಜಯಂತ್ ಮನವಿ ಮಾಡಿದರು.

English summary
85 Percent of Mysore District Senior Citizens Not Receiving Booster Dose. District Health officers request for vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X