ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೋಟಕ ವಸ್ತಗಳ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಸೀಮಾ ನಿಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 21: ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳದಲ್ಲಿ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಸೀಮಾ ಎಂಬ ಶ್ವಾನ ನಿಧನವಾಗಿದೆ.

ನವೆಂಬರ್ 14, 2009 ರಿಂದ ಸೂಕ್ತ ತರಬೇತಿಯೊಂದಿಗೆ ಇಲಾಖೆಗೆ ಸೇರಿದ್ದ ಸೀಮಾ, ಡಾಗ್ ಶೋ, ಮಾಕ್ ಡ್ರಿಲ್(ಅಣಕು ಕಾರ್ಯಚರಣೆ)ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು.

ಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರುಮೈಸೂರು ನಂಬರ್‌ ಒನ್ ಸ್ವಚ್ಛ ನಗರಿಯಾಗಲು ಸಹಕಾರ ಕೋರಿದ ಪಾಲಿಕೆ ಆಯುಕ್ತರು

ಗಣ್ಯ ವ್ಯಕ್ತಿಗಳ ಭದ್ರತೆ ಮತ್ತು ನಾಡಹಬ್ಬ ಭದ್ರತೆ, ಬಂದೋಬಸ್ತ್‍ಗಳ ಕರ್ತವ್ಯದ ಸಂದರ್ಭಗಳಲ್ಲಿ ಎಎಸ್‍ಸಿ ತಂಡದೊಂದಿಗೆ ಉತ್ತಮ ಕರ್ತವ್ಯ ನಿರ್ವಹಿಸಿ ಸೀಮಾ ಶ್ವಾನ ಮೆಚ್ಚುಗೆಗೆ ಪಾತ್ರವಾಗಿತ್ತು.

Mysuru Polices Sniffer Dog Seema Dies After 11 Years Of Service

2016ನೇ ಸಾಲಿನಲ್ಲಿ ಮೈಸೂರು ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಬಾಂಬ್ ಸ್ಪೋಟದ ಸಂಧರ್ಭದಲ್ಲಿ ಸದರಿ ಶ್ವಾನವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿತ್ತು. ಸೀಮಾ ಶ್ವಾನಕ್ಕೆ ಮಂಜು ಜಿ, ಎ.ಎಚ್.ಸಿ 151 ತರಬೇತುದಾರರಾಗಿದ್ದರು.

ಪೊಲೀಸ್ ಇಲಾಖೆಯಲ್ಲಿ ಸುಮಾರು 11 ವರ್ಷ 2 ತಿಂಗಳು ಯಶಸ್ವಿಯಾಗಿ ಸೇವೆ ಸಲ್ಲಿಸಿ ವಯೋಸಹಜ ಖಾಯಿಲೆಯಿಂದ ಬುಧವಾರ, ಜನವರಿ 20, 2021 ರಂದು ಮರಣ ಹೊಂದಿದೆ.

Mysuru Polices Sniffer Dog Seema Dies After 11 Years Of Service

ಡಿಸಿಪಿ ಸಿಎಆರ್ ಕೇಂದ್ರ ಸ್ಥಾನದ ಶಿವರಾಜುರವರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸಿಪಿ ಸುದರ್ಶನ್, ಶ್ವಾನದಳದ ಉಸ್ತುವಾರಿ ಅಧಿಕಾರಿ ಶ್ರೀ.ಮೂರ್ತಿ ಕೆ.ಎಂ, ಆರಕ್ಷಕ ನಿರೀಕ್ಷಕರು, ಸುರೇಶ್ ಉಪ ನಿರೀಕ್ಷಕರು, ಹಾಗೂ ಶ್ವಾನ ದಳದ ಇತರೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಸೀಮಾ ಶ್ವಾನದ ಸಾವಿಗೆ ಶ್ವಾನದಳದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಕಂಬನಿ ಮಿಡಿದಿದ್ದಾರೆ.

English summary
Seema, a dog, who was on duty at the Mysore city police unit, was dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X