ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳುವಾದ ಚಿನ್ನ ಪತ್ತೆಗೆ ಮನೆ ಕೆಲಸದಾಕೆಗೆ ಪೊಲೀಸರ ಹಿಂಸೆ; ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 12: ಮನೆಯೊಂದರಿಂದ ಕಳುವಾಗಿದ್ದ ಚಿನ್ನವನ್ನು ಪತ್ತೆ ಹಚ್ಚಲು ಪೊಲೀಸರು ಮನೆ ಕೆಲಸದಾಕೆಗೆ ಹಿಂಸೆ ನೀಡಿದ ಕುರಿತು ವರದಿಯಾಗಿದೆ.

ಮೈಸೂರು ನಗರದ ಹಿನಕಲ್‌ನ ಸೌಪರ್ಣಿಕಾ ಅಪಾರ್ಟ್‌ಮೆಂಟ್‌ನಲ್ಲಿ ಲಕ್ಷ್ಮಿ ಕೆಲಸ ಮಾಡುತ್ತಿದ್ದಳು. ಹದಿನೈದು ದಿನಗಳ ಹಿಂದೆ ಮನೆ ಮಾಲೀಕ ಸುನಿತಾ ಕೃಷ್ಣಪ್ಪ ಮನೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಆ ವೇಳೆ ಆಭರಣ ಧರಿಸಿ ನಂತರ ಕಬೋರ್ಡ್‌ನಲ್ಲಿ ಇಟ್ಟಿದ್ದರು. ಅಲ್ಲಿದ್ದ 75 ಗ್ರಾಂ ಚಿನ್ನ ಕಾಣೆಯಾದ ಹಿನ್ನೆಲೆ ವಿಜಯನಗರ ಪೊಲೀಸರಿಗೆ ದೂರು ನೀಡಲಾಗಿತ್ತು.

ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆಗೆ ಕಾರಣ ಬಹಿರಂಗ! ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆಗೆ ಕಾರಣ ಬಹಿರಂಗ!

ಚಿನ್ನ ಪತ್ತೆ ಮಾಡಲು ವಿಚಾರಣೆಗೆಂದು ಲಕ್ಷ್ಮಿಯನ್ನು ವಿಜಯನಗರ ಪೊಲೀಸ್‌ ಠಾಣೆಗೆ ಕರೆಸಿಕೊಂಡ ಪೊಲೀಸರು, ದೈಹಿಕ ಹಲ್ಲೆ ಮಾಡಿದ್ದಾರೆಂದು ಲಕ್ಷ್ಮಿ ಆಪಾದಿಸಿದ್ದಾಳೆ. ""ನನ್ನ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರು ಈಗ ಮನೆಗೆ ಕಳುಹಿಸಿದ್ದಾರೆ. ಕೂಡಲೇ ಚಿನ್ನ ಮತ್ತು ಒಡವೆ ನೀಡುವಂತೆ ಪೊಲೀಸರು ತಾಕೀತು ಮಾಡಿದ್ದಾರೆ'' ಎಂದಿದ್ದಾರೆ.

Mysuru: Police Violence On Housekeeper For Gold Detection

""ಪೊಲೀಸರು ಠಾಣೆಯಲ್ಲಿ ಮೈ ಕೈ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಪುರುಷ ಪೊಲೀಸರು ಥಳಿಸಿರೆಂದೂ ಸಂತ್ರಸ್ಥೆ ಆರೋಪಿಸಿದ್ದಾಳೆ. ಲಾಠಿಯಿಂದ ಹೊಡೆದು, ಶೂ ಕಾಲಲ್ಲಿ ಪೊಲೀಸರು ಒದ್ದಿದ್ದಾರೆ. ವಿಜಯನಗರ ಪೊಲೀಸರ ವಿರುದ್ಧ ಲಕ್ಷ್ಮಿ ಆರೋಪ ಮಾಡಿದ್ದಾಳೆ.

ವಿಚಾರಣೆ ಹೆಸರಿನಲ್ಲಿ ಪೊಲೀಸರು ದೈಹಿಕ ಹಲ್ಲೆ ಮಾಡಿದ್ದಾರೆಂದು ಲಕ್ಷ್ಮಿ ಆಪಾದಿಸಿದ್ದು, ಈಗ 5 ಗ್ರಾಂ ಚಿನ್ನ ಅಥವಾ 3,80,000 ಹಣ ಕೊಡುವಂತೆ ತಾಕೀತು ಮಾಡಿ ಕಳುಹಿಸಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ತರಲಿ ಎಂದು ಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾಳೆ.

English summary
Police have reportedly tortured a housekeeper to locate stolen gold from a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X