ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಡಿ ಕೋಟೆ ಚೆಕ್ ಪೋಸ್ಟ್ ಬಳಿ ಅತ್ಯಾಹತವಾಗಿ ನಡೆಯುತ್ತಿದೆ ವಸೂಲಿ ದಂಧೆ

|
Google Oneindia Kannada News

ಮೈಸೂರು, ಮೇ 12 : ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಂತಾಗಿದೆ. ಪೊಲೀಸರೇ ವಸೂಲಿ ದಂಧೆಗೆ ಇಳಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಕರ್ನಾಟಕದಿಂದ ಕೇರಳಕ್ಕೆ ಸಾಗುವ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಸಾಗುವ ವಾಹನಗಳೇ ಚೆಕ್ ಪೋಸ್ಟ್ ನಲ್ಲಿರುವ ಪೊಲೀಸರ ಟಾರ್ಗೆಟ್ ಆಗಿದೆ.

ಎಚ್‌.ಡಿ.ಕೋಟೆಯ ಅಂತರಸಂತೆ ಉಪಠಾಣೆಯ ಚೆಕ್‌ಪೋಸ್ಟ್‌ನಲ್ಲಿ ನಿತ್ಯವೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ನಿಮ್ಮ ವಾಹನದಲ್ಲಿ ಕಳ್ಳತನದ ಮಾಲು ಸಾಗಿಸಿದರೂ ಸಾಕು ಪೊಲೀಸರಿಗೆ ಹಣ ನೀಡಿದರೇ ಸುಲಭವೆಂದು ಈ ವಿಡಿಯೋ ಅಕ್ಷರಶಃ ತೋರ್ಪಡಿಸತ್ತಿದೆ.

ಬಲವಂತವಾಗಿ ಗಣಪತಿ ಚಂದಾ ವಸೂಲಿ ಮಾಡಿದರೆ 3 ವರುಷ ಜೈಲು ಬಲವಂತವಾಗಿ ಗಣಪತಿ ಚಂದಾ ವಸೂಲಿ ಮಾಡಿದರೆ 3 ವರುಷ ಜೈಲು

ಇನ್ನು ವಾಹನದಲ್ಲಿ ಏನು ಬೇಕಾದರೂ ಸಾಗಿಸಿದರೂ ಪೊಲೀಸರು ತಪಾಸಣೆ ಮಾಡುವುದಿಲ್ಲ. ಅವರು ಕುಳಿತ್ತಿದ್ದ ಸ್ಥಳಕ್ಕೆ ಹೋಗಿ ನೂರು ಅಥವಾ ಐನೂರು ರೂ. ಕೊಡಬೇಕು. ಅಷ್ಟೇ ಅಲ್ಲದೆ, ವಾಹನಗಳಲ್ಲಿ ಕೋಳಿ ಸಾಗಿಸುತ್ತಿದ್ದರೆ, ಅದನ್ನು ಪೊಲೀಸರು ವಸೂಲಿ ರೂಪದಲ್ಲಿ ಪಡೆದುಕೊಳ್ಳುತ್ತಿರುವುದು ಸಹ ರೆಕಾರ್ಡ್ ಆಗಿದೆ.

Police taking amount and things in HD Kote – Kerala check post

ಮೈಸೂರು ಕಾರಾಗೃಹದ ಮೇಲೆ ದಿಢೀರ್ ಪೊಲೀಸ್ ದಾಳಿ ಮೈಸೂರು ಕಾರಾಗೃಹದ ಮೇಲೆ ದಿಢೀರ್ ಪೊಲೀಸ್ ದಾಳಿ

ಕೋಳಿ ಅಲ್ಲದೆ ತರಕಾರಿ, ಅಕ್ಕಿಯನ್ನು ಕೂಡ ವಸೂಲಿ ರೂಪದಲ್ಲಿ ಪಡೆಯುತ್ತಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಈ ವಸೂಲಿ ದಂಧೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದಂಧೆಗೆ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.

English summary
Police taking amount and things in HD Kote – Kerala check post. The video is gone viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X