ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮೆಟ್ ಗಳನ್ನು ಕುಟ್ಟಿ ಪುಡಿ ಮಾಡಿದ ಪೊಲೀಸರು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ನವೆಂಬರ್ 3 : ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನ ಪ್ರಮುಖ ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ರಾಸಾಯನಿಕಯುಕ್ತ ಹೆಲ್ಮೆಟ್ ಗಳಿಗೆ ಟ್ರಾಫಿಕ್ ಪೊಲೀಸರು ಮುಕ್ತಿ ನೀಡಿದರು.

ಜನರಿಗೆ ಉಚಿತ ಹೆಲ್ಮೆಟ್: ಪೊಲೀಸ್ ಅಧಿಕಾರಿಯ ಬರ್ಥಡೆ ಸ್ಪೆಶಲ್! ಜನರಿಗೆ ಉಚಿತ ಹೆಲ್ಮೆಟ್: ಪೊಲೀಸ್ ಅಧಿಕಾರಿಯ ಬರ್ಥಡೆ ಸ್ಪೆಶಲ್!

ಕಳೆದ ಕೆಲವು ದಿನಗಳ ಹಿಂದೆ ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗಿ ಅವು ರಾಸಾಯನಿಕಗಳಿಂದ ಕೂಡಿದೆ ಎನ್ನುವುದು ತಿಳಿದು ಬಂದಿತ್ತಲ್ಲದೇ ಅವು ಧರಿಸಲು ಯೋಗ್ಯವಲ್ಲದ್ದು ಎಂಬುದು ಸಾಬೀತಾಗಿತ್ತು. ಶುಕ್ರವಾರ ರಾಜಕಮಲ್ ರಸ್ತೆಯಲ್ಲಿರುವ ಕಚೇರಿಯ ಹೊರಗೆ ಈ ಹೆಲ್ಮೆಟ್ ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದರು.

Police seize non-ISI mark helmets in Mysuru

ಬಳಿಕ ಮಾತನಾಡಿದ ಎಸಿಪಿ ಮಾದಯ್ಯ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆಂಬ ಭಯಕ್ಕೆ ದ್ವಿಚಕ್ರ ವಾಹನ ಸವಾರರು ಸಿಕ್ಕ ಸಿಕ್ಕ ಹೆಲ್ಮೆಟ್ ಗಳನ್ನು ಖರೀದಿಸಿ ವಾಹನ ಚಲಾಯಿಸುತ್ತಾರೆ. ಇದನ್ನು ಧರಿಸಿದರೂ ಒಂದೇ ಧರಿಸದಿದ್ದರೂ ಒಂದೇ. ವಾಹನ ಸವಾರರನ್ನು ಭಯ ಪಡಿಸಬೇಕು ಎಂದು ನಾವು ಕ್ರಮ ಕೈಗೊಂಡಿಲ್ಲ. ತಲೆಗೆ ಏಟು ಬಿದ್ದು ಅಪಘಾತ ಸಂಭವಿಸದಿರಲಿ ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದೇವೆ. ಆದರೆ ಐಎಸ್ ಐ ಗುರುತಿಲ್ಲದ ಇಂಥಹ ಹೆಲ್ಮೆಟ್ ಗಳಿಂದ ಅಪಾಯವೇ ಜಾಸ್ತಿ ಆದ್ದರಿಂದ ಸೂಕ್ತ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಹೇಳಿದರು.

Police seize non-ISI mark helmets in Mysuru

ಟ್ರಾಫಿಕ್ ಸಿಬ್ಬಂದಿ ಸೇರಿ ವಶಪಡಿಸಿಕೊಳ್ಳಲಾದ ಹೆಲ್ಮೆಟ್ ನ್ನು ಒಡೆದು ಅವುಗಳಿಗೆ ಮುಕ್ತಿ ನೀಡಿದರು.

English summary
Mysuru city traffic police on Thursday destroyed the seized helmets coated with chemicals which were being sold on roadside here in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X