ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಐವರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 11 : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಮೂವರು ಮಹಿಳೆಯರನ್ನು ರಕ್ಷಿಸಿ, ಐವರು ಯುವಕರನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ಕೇರಳ ಮೂಲದ ಕಣ್ಣನೂರು ತಾಲ್ಲೂಕಿನ ಅನು, ಅನಿಲ್ ಅಗಸ್ಟನ್, ಕೆ.ಪಿ.ರಫೀ, ಅಬ್ದುಲ್ ನಾಸೀರ್, ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಹುಣಸೂರು ಪಟ್ಟಣದ ಬಾಲಾಜಿ ಪ್ಯಾಲೇಸ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮೂವರು ಮಹಿಳೆಯರನ್ನು ರಕ್ಷಣೆ ಮಾಡಿ, ಐವರು ಯುವಕರನ್ನು ಬಂಧಿಸಿದ್ದಾರೆ.[ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಮೂವರ ಸೆರೆ]

Police raided a prostitution center at mysuru, 5 men arrested

ವೇಶ್ಯಾವಾಟಿಕೆ ನಡೆಸಲು ಸಹಕರಿಸಿದ ಲಾಡ್ಜ್ ಮಾಲೀಕ ಅಬ್ದುಲ್ ನಾಸೀರ್ ಹಾಗೂ ಮ್ಯಾನೇಜರ್ ಅನಿಲ್ ಕುಮಾರ್ ತಲೆಮರೆಸಿಕೊಂಡಿದ್ದು, ಇವರಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಕಳುವು : ಚೋರ ಸೆರೆ
ಮೈಸೂರು: ಇಲ್ಲಿನ ದೇವರಾಜ ಠಾಣೆ ಪೊಲೀಸರು ದ್ವಿಚಕ್ರ ವಾಹನಗಳ ಕಳ್ಳನನ್ನು ಬಂಧಿಸಿ ಆತನಿಂದ ರು 80ಸಾವಿರ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಬಂಧಿತ ಬೆಂಗಳೂರು ಪೀಣ್ಯ 2ನೇ ಹಂತದ ನಿವಾಸಿ ಸಂತೋಷ್ ಅಲಿಯಾಸ್ ಸಂತು(23) ಎನ್ನಲಾಗಿದೆ. ಈತ ಮೂಲತಃ ಮಂಡ್ಯಜಿಲ್ಲೆಯ ಮಳ್ಳವಳ್ಳಿ ತಾಲ್ಲೂಕು ಹಲಗೂರು ನಿವಾಸಿಯಾಗಿದ್ದು. ಮಂಗಳವಾರ ಮೈಸೂರು ಮಿಷನ್ ಆಸ್ಪತ್ರೆ ರಸ್ತೆಯ ಎಲ್ಲಮ್ಮಾಂಬ ದೇವಸ್ಥಾನದ ಬಳಿ ಕಳವು ಮಾಡಿದ್ದ ಹೊಂಡ ಆಕ್ಟೀವಾ ದ್ವಿಚಕ್ರ ವಾಹನವನ್ನು ಮಾರುವ ವೇಳೆ ಪೊಲೀಸರಿಗೆ ಸಿಕಿಬಿದ್ದಿದ್ದಾನೆ.

Police raided a prostitution center at mysuru, 5 men arrested

ವಿಚಾರಣೆ ವೇಳೆ ಕೊಡಗಿನ ಶನಿವಾರ ಸಂತೆಯಲ್ಲಿ ಹೊಂಡಾ ಆಕ್ಟಿವಾವನ್ನು ಹಾಗೂ ಮೈಸೂರಿನ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಜಾಜ್ ಡಿಸ್ಕವರ್ ಬೈಕ್ ಗಳನ್ನು ನಕಲಿ ಕೀ ಬಳಸಿ ಕಳವು ಮಾಡಿರುವುದಾಗಿ ಸತ್ಯ ನುಡಿದಿದ್ದಾನೆ. ಪೊಲೀಸರು ಕಳುವಾದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಸ್ತುತ ಮೈಸೂರಿನಲ್ಲಿ ವಾಸಿಸುತ್ತಿರುವ ಈತ ಹೆಬ್ಬಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಿದ್ದು, ಈಚೆಗಷ್ಟೇ ಮದುವೆಯಾಗಿದ್ದ ಸಂಬಳ ಸಾಲದೇ ಬೈಕ್ ಕಳವಿನ ದಂಧೆಯನ್ನು ಶುರುಮಾಡಿದ್ದ ಎನ್ನಲಾಗಿದೆ.

English summary
Police raided a prostitution center at Mysuru here on January 11 .5 Men were arrested and 3 women were rescued during the raid. And another incident The arrest of the thief who stole the bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X