ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣವಿದ್ದ ಪರ್ಸ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮೈಸೂರಿನ ಕಾನ್ಸ್‌ಟೆಬಲ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 8: ಈ ಜಗತ್ತಿನಲ್ಲಿ ಹಣವನ್ನು ಸುಲಭ ಮಾರ್ಗದಲ್ಲಿ ಪಡೆಯುವುದಕ್ಕೆ ಹಾತೊರೆಯುವವರೇ ಸುಮಾರು ಮಂದಿ. ಆದರೆ ತಮಗೆ ರಸ್ತೆಯಲ್ಲಿ ಸಿಕ್ಕ ಪರ್ಸ್ ಅನ್ನು ಪೊಲೀಸ್​​​​ ಠಾಣೆಗೆ ನೀಡುವ ಮೂಲಕ ಇಲ್ಲಿನ ಪೊಲೀಸ್ ಕಾನ್ಸ್​ಟೇಬಲ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

Recommended Video

Red alert in Kodagu district | Madkeri | Oneindia Kannada

ನಗರದ ಪೊಲೀಸ್​​ ಆಯುಕ್ತರ ಕಚೇರಿಯಲ್ಲಿ ಪೊಲೀಸ್​​​​​​​​​​​ ಕಾನ್ಸ್​ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದ ವಿ. ಶ್ರೀನಿವಾಸ್ ಎಂಬುವವರೇ ಪ್ರಾಮಾಣಿಕತೆ ಮೆರೆದ ಕಾನ್ಸ್​ಟೆಬಲ್. ಇವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದ ಕಡೆಯಿಂದ ಆರ್​ಟಿಒ ಕಚೇರಿ ಕಡೆ ಬರುತ್ತಿರುವಾಗ ರಸ್ತೆಯಲ್ಲಿ ಹಸಿರು ಬಣ್ಣದ ಪರ್ಸ್ ಬಿದ್ದಿರುವುದು ಕಂಡುಬಂತು. ಅದನ್ನು ನೋಡಿ ಪರ್ಸ್ ತೆಗೆದುಕೊಳ್ಳಲು ಹೋದಾಗ ವಾಹನವೊಂದು ಪರ್ಸ್ ಮೇಲೆ ಹರಿದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾದವು.

ಮೈಸೂರು; ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆಗೆ ಸೆಲ್ಯೂಟ್ಮೈಸೂರು; ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆಗೆ ಸೆಲ್ಯೂಟ್

Mysuru Police Constable Honestly Handedover Purse Which He Got On Road

ನೋಟುಗಳನ್ನು ಆಯ್ದುಕೊಂಡು ಪರ್ಸ್ ನೋಡಿದಾಗ ಅದರಲ್ಲಿ 3 ವಿದೇಶಿ ನೋಟುಗಳು ಇರುವುದು ಕಂಡುಬಂದಿವೆ. ತಕ್ಷಣ ಆ ಪರ್ಸ್ ಮತ್ತು ಹಣವನ್ನು ಲಕ್ಷ್ಮಿಪುರಂ ಠಾಣೆಗೆ ಕೊಟ್ಟು ಕಾನ್ಸ್‌​ಟೆಬಲ್ ಕರ್ತವ್ಯಕ್ಕೆ ಮರಳಿದ್ದಾರೆ. ಇವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಪರ್ಸ್​ ಕಳೆದುಕೊಂಡವರು ಬಂದು ಪರ್ಸ್ ಪಡೆಯಬಹುದೆಂದು ಲಕ್ಷ್ಮೀಪುರಂ ಪೊಲೀಸರು ತಿಳಿಸಿದ್ದಾರೆ‌.

English summary
The police constable honestly handed over a purse to a police station which he got on road at mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X