ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಗೆ ಹುಸಿ ಬಾಂಬ್ ಕರೆ: ಇದು ಕುಡುಕ ಸೃಷ್ಟಿಸಿದ ಅವಾಂತರ

|
Google Oneindia Kannada News

ಮೈಸೂರು, ಮೇ. 14: ಕುಡುಕನೊಬ್ಬ ಮೈಸೂರಿನಲ್ಲಿ ಹುಸಿ ಬಾಂಬ್ ಇಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿ, ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ ಪ್ರಸಂಗ ಇಂದು ಮಂಗಳವಾರ ನಡೆದಿದೆ. ಹೌದು, ಮೈಸೂರಿನ ಅರಮನೆ ಆವರಣದಲ್ಲಿ ಕುಡುಕನೊಬ್ಬ ಬಾಂಬ್‌ ಇಟ್ಟಿರುವುದಾಗಿ ಹೇಳಿ ಪ್ರವಾಸಿಗರು ಹಾಗೂ ಪೊಲೀಸ್ ಸಿಬ್ಬಂದಿ ಕ್ಷಣಕಾಲ ಆತಂಕಕ್ಕೀಡಾಗುವಂತೆ ಮಾಡಿದ ಘಟನೆ ನಡೆಯಿತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಗಂಗಾಧರ್‌ ಎಂಬ ಕುಡುಕ ಅರಮನೆ ಆವರಣದಲ್ಲಿ ಆತಂಕ ಸೃಷ್ಠಿಸಿದಾತ. ಇಂದು ಬೆಳಗ್ಗೆ 9.30ರ ವೇಳೆಗೆ ಅರಮನೆಗೆ ಬಾಂಬ್ ಕರೆ ಬಂದಿದ್ದು, ಬಾಂಬ್ ಇದೆ ಎಂಬ ಮಾಹಿತಿ ಮೇರೆಗೆ ಅರಮನೆಯಲ್ಲಿ ಹೈಅಲರ್ಟ್, ಭದ್ರತೆ ಹೆಚ್ಚಿಸಲಾಗಿತ್ತು.

ವಿಮಾನ ತಪ್ಪಿದ್ದಕ್ಕೆ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದವಿಮಾನ ತಪ್ಪಿದ್ದಕ್ಕೆ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದ

ಶ್ವಾನದಳ ಹಾಗ ಬಾಂಬ್‌ ನಿಷ್ಕ್ರೀಯದಳ ತಪಾಸಣೆಗೆ ಮುಂದಾದ ವೇಳೆ ಅಲ್ಲಿಯೇ ಮಲಗಿದ್ದ ಕುಡುಕ ಗಂಗಾಧರ್ "ಬಾಂಬ್‌ ಇದೆ. ಬಾಂಬ್‌ ಇರುವುದಕ್ಕೆ ಪೊಲೀಸರು ಚೆಕ್‌ ಮಾಡುತ್ತಿದ್ದಾರೆ" ಎಂದು ಕೂಗಾಡಿದ್ದಾನೆ.ಗಂಗಾಧರ್ ಮಾತಿನಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಆತಂಕಗೊಂಡಿದ್ದಾರೆ.

Police clarified about fake bomb call at Mysuru Ambavilasa palace

ಈ ಸಂದರ್ಭದಲ್ಲಿ ಪೊಲೀಸರು ತಕ್ಷಣ ಗಂಗಧಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯದಳದಿಂದ ಅರಮನೆ ಆವರಣದಲ್ಲಿ ಎಂದಿನಂತೆ ಪರಿಶೀಲನೆ ನಡೆಸಿ, ಈ ಬಗ್ಗೆ ಡಿಸಿಪಿ ಮುತ್ತುರಾಜ್ ದೂರವಾಣಿ ಕರೆ ಮಾಡಿ, ಯಾವುದೇ ಹುಸಿಬಾಂಬ್‌ ಕರೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Fake bomb call at Mysuru Ambavilasa palace:Bomb squad alerted tight security at palace premises.But now police clarified about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X