ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿಷೇಕ್ ಹತ್ಯೆ ಪ್ರಕರಣ; "ಕಿರಿಕಿರಿ ಮಾಡಿದ್ದಕ್ಕೆ ಕೊಂದೆ" ಎಂದ ಆರೋಪಿ

By ಕೋವರ್ ಕೊಲ್ಲಿ ಇಂದ್ರೇಶ್
|
Google Oneindia Kannada News

ಮೈಸೂರು, ಡಿಸೆಂಬರ್ 2: ಅಮೆರಿಕದಲ್ಲಿ ಮೈಸೂರಿನ ವಿದ್ಯಾರ್ಥಿ ಅಭಿಷೇಕ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಆಫ್ರಿಕಾ ಮೂಲದ ಎರಿಕ್ ಡೆವನ್ ಟರ್ನರ್ (42) ಎಂದು ತಿಳಿದು ಬಂದಿದೆ.

ನವೆಂಬರ್ 28ರಂದು ತನ್ನ ಕೆಲಸ ಮುಗಿಸಿ ಹೋಟೆಲ್​ನಿಂದ ತೆರಳುವ ಮುನ್ನ, ಸಮಯ ಮೀರಿದ್ದರಿಂದ ರೂಂ ಖಾಲಿ ಮಾಡುವಂತೆ ಆ ಹೋಟೆಲ್​ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದ ಆರೋಪಿಗೆ ಅಭಿಷೇಕ್ ಇಂಟರ್ ಕಾಮ್ ಫೋನ್ ಮೂಲಕ 2 ರಿಂದ 3 ಬಾರಿ ತಿಳಿಸಿದ್ದ. ಆದರೂ ಎರಿಕ್ ಡೆವನ್ ಟರ್ನರ್ ರೂಂ ಖಾಲಿ ಮಾಡಿರಲಿಲ್ಲ. ಇದರಿಂದ ಅಭಿಷೇಕ್, ರೂಮಿನ ಬಳಿ ಬಂದು ಬೆಲ್ ಮಾಡಿದ್ದರು. ಇದರಿಂದ ಕೋಪಗೊಂಡ ಈತ ಕಿರಿಕಿರಿ ಮಾಡುತ್ತೀಯಾ ಎಂದು ಏಕಾಏಕಿ ಅಭಿಷೇಕ್ ಗೆ ಗುಂಡು ಹೊಡೆದು ಪರಾರಿಯಾಗಿದ್ದ. ಈತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. ಕಿರಿಕಿರಿ ಮಾಡಿದ್ದಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದೇನೆ ಎಂದು ಬಂಧಿತ ಆರೋಪಿ ಹೇಳಿಕೆ ನೀಡಿದ್ದಾನೆ.

 ಅಭಿಷೇಕ್ ಹತ್ಯೆಗೆ ಟ್ವಿಸ್ಟ್; ಹೋಟೆಲ್ ಗ್ರಾಹಕನೇ ಹಣೆಗೆ ಗುಂಡಿಕ್ಕಿದ್ದ ಅಭಿಷೇಕ್ ಹತ್ಯೆಗೆ ಟ್ವಿಸ್ಟ್; ಹೋಟೆಲ್ ಗ್ರಾಹಕನೇ ಹಣೆಗೆ ಗುಂಡಿಕ್ಕಿದ್ದ

Police Arrested Who Murdered Mysuru Student Abhishek

ಗುರುವಾರ ಅಭಿಷೇಕ್ ತಂದೆ, ತಾಯಿ ಹಾಗೂ ಸೋದರ ಅಮೆರಿಕದ ಸ್ಯಾನ್ ಬರ್ನಾಡಿನೋಗೆ ತಲುಪಲಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಆರ್ಥಿಕ ಸಂಕಷ್ಟದಲ್ಲಿರುವ ಅಭಿಷೇಕ್ ಕುಟುಂಬಕ್ಕೆ ಅಮೆರಿಕದ ಸ್ನೇಹಿತರು, ಸಂಬಂಧಿಕರು ಹಾಗೂ ಕಾಲೇಜಿನ ಕಡೆಯಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

English summary
Police have arrested a man accused of shooting and murdering a Mysuru student in america,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X