ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರಾತನ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ ಮೋಸ; ಇಬ್ಬರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 3: ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ವ್ಯಕ್ತಿಯೊಬ್ಬರಿಗೆ ಪುರಾತನ ಕಾಲದ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹೇಳಿ ನಕಲಿ ಚಿನ್ನದ ಗುಂಡುಗಳನ್ನು ನೀಡಿ 30 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Recommended Video

Apple producion moves from China to India | Oneindia Kannada

ಬಂಧಿತರನ್ನು ಕೆಆರ್ ಎಸ್ ನಿವಾಸಿಗಳಾದ ಭೀಮ್ ಅಲಿಯಾಸ್ ಡೈನಾ ಬಿನ್ ಗಂಗಾರಾಮ್ ಮತ್ತು ಅರ್ಜುನ್ ಅಲಿಯಾಸ್ ಮಾರ್ವಾಡ ಬಿನ್ ಹರಿಲಾಲ್ ಎಂದು ಗುರುತಿಸಲಾಗಿದೆ. ಇಲ್ಲಿನ ಕುಂಬಾರಕೊಪ್ಪಲಿನ ನಿವಾಸಿ ರಾಘವೇಂದ್ರ ಎಂಬುವರು ಪುರಾತನ ಕಾಲದ ನಾಣ್ಯ ಮತ್ತು ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದು, ಇವರನ್ನು ಸಂಪರ್ಕಿಸಿದ ಅರೋಪಿಗಳು ತಮ್ಮ ಊರಿನಲ್ಲಿ ಮನೆ ಪಾಯ ತೆಗೆಯುವಾಗ ರಾಜರ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದರು.

Police Arrested Two For Fraud By Giving Duplicate Gold In Mysuru

 ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದ ಚಾಣಾಕ್ಷರ ತಂಡ ಕಂಬಿ ಹಿಂದೆ ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದ ಚಾಣಾಕ್ಷರ ತಂಡ ಕಂಬಿ ಹಿಂದೆ

ಮೊದಲಿಗೆ ಒಂದು ಅಸಲಿ ಚಿನ್ನದ ನಾಣ್ಯವನ್ನೂ ನೀಡಿ ನಂಬಿಕೆ ಗಳಿಸಿಕೊಂಡಿದ್ದರು. ನಂತರ 30 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಚಿನ್ನದ ನಾಣ್ಯ ಮತ್ತು ಗುಂಡುಗಳ ಸರಗಳುಳ್ಳ ಬ್ಯಾಗ್ ಗಳನ್ನು ನೀಡಿ ಹೋಗಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ ನಕಲಿ ಚಿನ್ನವೆಂದು ತಿಳಿದು ಬಂದಿದೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದೀಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

English summary
Police have arrested two people for cheating a person by giving duplicate gold in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X