ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದ ಆರೋಪ; ಹುಣಸೂರಿನಲ್ಲಿ ಮೂವರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 07: ಬೆಂಗಳೂರಿನಿಂದ ಚುನಾವಣಾ ಸಮೀಕ್ಷೆ ನಡೆಸಲು ಬಂದಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಗರ ಸಭೆ ಮಾಜಿ ಸದಸ್ಯ ಹಾಗೂ ಆತನ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಮುಜೀಬ್, ಬಷೀರ್ ಅಹಮ್ಮದ್ ಹಾಗೂ ಹಸೀಬ್ ಅಹಮ್ಮದ್ ಬಂಧಿತ ಆರೋಪಿಗಳು.

ಸ್ಥಳೀಯ ಚುನಾವಣೆ ಸಮೀಕ್ಷೆ ಮಾಡಲು ಹುಣಸೂರು ಪಟ್ಟಣದ ರೆಹಮತ್ ಮೋಹಲ್ಲಾ ಪ್ರದೇಶಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ನ್ಯೂಸ್ ಚಾನಲ್ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

 ಕೊಡಗಿನಲ್ಲಿ ಆದಿವಾಸಿಗಳ ಗುಡಿಸಲು ಕಿತ್ತು ಹಾಕಿದ ಅಧಿಕಾರಿಗಳು: ಪ್ರಶ್ನಿಸಿದ ಯುವಕನಿಗೆ ಥಳಿತ ಕೊಡಗಿನಲ್ಲಿ ಆದಿವಾಸಿಗಳ ಗುಡಿಸಲು ಕಿತ್ತು ಹಾಕಿದ ಅಧಿಕಾರಿಗಳು: ಪ್ರಶ್ನಿಸಿದ ಯುವಕನಿಗೆ ಥಳಿತ

Police Arrested Three For Assult On Media Persons In Hunasuru

ಆರೋಪಿಗಳು ಚಾನೆಲ್​ನ ಕ್ಯಾಮರಾ ಜಖಂ ಮಾಡಿದ್ದಷ್ಟೇ ಅಲ್ಲದೇ ಕ್ಯಾಮರಾ ಮ್ಯಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಕ್ಯಾಮರ ಮ್ಯಾನ್ ರಕ್ಷಣೆಗೆ ಬಂದ ವರದಿಗಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

English summary
A former Municipal Council member and his sons have been arrested by police on charges of assaulting media persons who had come from Bangalore to conduct an election survey in hunasuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X