ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ

|
Google Oneindia Kannada News

ಮೈಸೂರು, ಡಿಸೆಂಬರ್ 18: ಚಾಮರಾಜನಗರದ ಕಿತ್ತುಗುತ್ತಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟಿರುವ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಈಗಾಗಲೇ 14 ಮಂದಿ ಮೃತಪಟ್ಟಿದ್ದು, ಮಂಗಳವಾರ ದುಂಡಮ್ಮ(50) ಎಂಬಾಕೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Poisonous Prasadam claims 15 lives at Maramma Temple

ಸೋಮವಾರವಷ್ಟೇ ಜೆಎಸ್‌ಎಸ್‌ಆಸ್ಪತ್ರೆಯಲ್ಲಿ ಮೈಲಿಬಾಯಿ ಎನ್ನುವವರು ಮೃತಪಟ್ಟಿದ್ದರು. ಮೈಲಿಬಾಯಿ ಅವರ ಪತಿ ಕೃಷ್ಣನಾಯ್ಕ ಅವರು ಡಿಸೆಂಬರ್ 14ರಂದು ಮೃತಪಟ್ಟಿದ್ದರು.

ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ

ಮೈಲಿಬಾಯಿ ಸ್ಥಿತಿ ಗಂಭೀರವಾಗಿದ್ದ ಕಾರಣ ಕಳೆದ ನಾಲ್ಕು ದಿನದಿಂದ ಐಸಿಯುನಲ್ಲಿಟ್ಟಿದ್ದರು. ಇದೀಗ ಅವರು ಮೃತಪಟ್ಟಿದ್ದು ಮೂರು ಮಕ್ಕಳನ್ನು ಅನಾಥರಾಗಿದ್ದಾರೆ.

ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ

ಇನ್ನೂ 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ. 100 ಕ್ಕೂ ಹೆಚ್ಚು ಮಂದಿ ಕಿಚ್ಚುಗುತ್ತಿ ಮಾರಮ್ಮ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದರು ಅದರಲ್ಲಿ ಮಂಗಳವಾರ ದುಂಡಮ್ಮ ಎನ್ನುವವರು ಸಾವನ್ನಪ್ಪಿದ್ದಾರೆ.

ಪ್ರಸಾದಕ್ಕೆ ಬಳಸುವ ನೀರಿಗೆ ಕೀಟನಾಶಕ ಬೆರೆಸಲಾಗಿತ್ತು: ಐಜಿಪಿ ಮಾಹಿತಿಪ್ರಸಾದಕ್ಕೆ ಬಳಸುವ ನೀರಿಗೆ ಕೀಟನಾಶಕ ಬೆರೆಸಲಾಗಿತ್ತು: ಐಜಿಪಿ ಮಾಹಿತಿ

ದೇವಸ್ಥಾನದಲ್ಲಿ ಪ್ರಸಾದವಾಗಿ ತಯಾರಿಸಲಾಗುತ್ತಿದ್ದ ರೈಸ್‌ಬಾತ್‌ಗೆ ಬಳಸುವ ನೀರಿನಲ್ಲೇ ಕೀಟನಾಶಕ ಬಳಸಿದ್ದರು ಎನ್ನುವ ಮಾಹಿತಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಈ ಕುರಿತು ದಕ್ಷಿಣ ವಲಯ ಐಜಿಪಿ ಕೆವಿ ಶರತ್ ಚಂದ್ರ ಮಾಹಿತಿ ನೀಡಿದ್ದರು. ಬೆಳೆಗಳಿಗೆ ಬಳಸುವ ಕೀಟ ನಾಶಕ ಮೋನೋಕ್ರೋಟೋಫಸ್ ಅನ್ನು ನೀರಿನಲ್ಲಿ ಬೆರೆಸಲಾಗಿತ್ತು.

English summary
Soon after 15 people were killed in a mass food poisoning incident at a temple in Chamarajnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X