ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಟಿಡಿ ಗೇಮ್ ಪ್ಲಾನ್ ಬದಲು; ಮೈಮುಲ್ ಅಧ್ಯಕ್ಷರಾಗಿ ಪ್ರಸನ್ನ ಆಯ್ಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 30; ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಹಾಗೂ ಮೈಮುಲ್ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ವರಿಷ್ಠರಿಗೆ ಟಾಂಗ್ ನೀಡಿದ್ದರು. ಮೈಮುಲ್ ಚುನಾವಣೆಯಲ್ಲಿಯೂ ಅವರು ಗೇಮ್ ಪ್ಲಾನ್ ಬದಲಿಸಿದ್ದಾರೆ.

ಮಂಗಳವಾರ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ. ಟಿ. ದೇವೇಗೌಡರು ತಮ್ಮ ತಂತ್ರದ ಮೂಲಕ ಜೆಡಿಎಸ್ ವರಿಷ್ಠರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ಪಿ. ಎಂ. ಪ್ರಸನ್ನ ಮೈಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೈಮುಲ್ ಚುನಾವಣೆ; ಸಾ. ರಾ. ಮಹೇಶ್ v/s ಜಿ. ಟಿ. ದೇವೇಗೌಡ! ಮೈಮುಲ್ ಚುನಾವಣೆ; ಸಾ. ರಾ. ಮಹೇಶ್ v/s ಜಿ. ಟಿ. ದೇವೇಗೌಡ!

ಜೆಡಿಎಸ್ ಪಕ್ಷದ ರಾಜಕೀಯ ಚಟುವಟಿಕೆಗಳಿಂದ ಬಹುತೇಕ ದೂರವಿರುವ ಜಿ. ಟಿ. ದೇವೇಗೌಡರು ಜಿಲ್ಲೆಯಲ್ಲಿ ತಮ್ಮ‌ ಎದುರಾಳಿಗೆ ಮೌನವಾಗಿಯೇ ಟಕ್ಕರ್ ಕೊಡುತ್ತಿದ್ದಾರೆ. ಇದೇ ರೀತಿ ಮೈಮುಲ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲೂ ಸಹ ಗೇಮ್ ಪ್ಲಾನ್ ಬದಲಾವಣೆ ಮಾಡಿದ್ದಾರೆ.

ಮೈಮುಲ್ ಚುನಾವಣೆ ಸೋಲು: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಸಿ ಬಲರಾಂ ಆತ್ಮಹತ್ಯೆಮೈಮುಲ್ ಚುನಾವಣೆ ಸೋಲು: ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಸಿ ಬಲರಾಂ ಆತ್ಮಹತ್ಯೆ

PM Prasanna Elected As President Of MYMUL President

ಅಧ್ಯಕ್ಷ ಸ್ಥಾನಕ್ಕೆ ಕೆ. ಈರೇಗೌಡ ಹಾಗೂ ಕೆ. ಎಸ್. ಕುಮಾರ್ ಅವರನ್ನು ಅಭ್ಯರ್ಥಿ ಮಾಡಲು ಒಲವು ತೋರಿದ್ದ ಗೌಡರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಶಾಸಕ ಸಾ. ರಾ. ಮಹೇಶ್ ಪ್ರಾಬಲ್ಯ ಕುಗ್ಗಿಸಲು ಪಿರಿಯಾಪಟ್ಟಣ ಶಾಸಕ ಮಹದೇವ್ ಮಗನಿಗೆ ಮಣೆ ಹಾಕಿದ್ದಾರೆ.

ಶಾಸಕ ಜಿ‌.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗಶಾಸಕ ಜಿ‌.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ

ಈ ಮೂಲಕ ಸಾ. ರಾ. ಮಹೇಶ್ ಜತೆ ಇದ್ದ ಶಾಸಕ ಮಹದೇವ್ ಬಹುತೇಕ ಜಿ. ಟಿ. ದೇವೇಗೌಡ ಅವರ ಪಾಳಯಕ್ಕೆ ಜಿಗಿದಂತಾಗಿದೆ. ಜಿ‌. ಟಿ. ದೇವೇಗೌಡ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಭೆಯಲ್ಲಿ ಪ್ರಸನ್ನ ಅವರನ್ನು ಸರ್ವಾನುಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ನಾಮಪತ್ರ ಸಲ್ಲಿಸಲು ಸೂಚನೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ. ಮಹದೇವು ಅವರ ಪುತ್ರ ಪ್ರಸನ್ನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಅವರನ್ನು ಹೊರತುಪಡಿಸಿ ಬೇರೆ ಯಾರು ಸಹ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.

Recommended Video

ಈ ವರ್ಷ ಮಳೆರಾಯನ ತಡಿಯೋಕೆ ಆಗಲ್ಲಾ! | Oneindia Kannada

ಕೇವಲ ಪ್ರಸನ್ನ ಒಬ್ಬರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಮೈಮುಲ್ ನೂತನ ಅಧ್ಯಕ್ಷರಾಗಿ ಪ್ರಸನ್ನ ಅವರು ಅವಿರೋಧ ಆಯ್ಕೆ ಆದರು. ಇದರೊಂದಿಗೆ ಜಿಟಿಡಿ ತಮ್ಮ ಎದುರಾಳಿಗಳಿಗೆ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಏನೆಂದು ಮನದಟ್ಟು ಮಾಡಿಕೊಟ್ಟಿದ್ದಾರೆ.

English summary
Chamundeshwari JD(S) MLA G. T. Devegowda changed the game plan. P. M. Prasanna elected as Mysuru District Cooperative Milk Producer's Societie's Union Ltd (MYMUL) president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X