ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮೋದಿ ಪ್ರವಾಸ ಮುಕ್ತಾಯ, ಮಂಡಕಳ್ಳಿಯಿಂದ ದೆಹಲಿಗೆ ವಾಪಸ್

|
Google Oneindia Kannada News

ಮೈಸೂರು, ಜೂನ್ 21; ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಮುಕ್ತಾಯಗೊಂಡಿದೆ. ಮೈಸೂರು ವಿಮಾನ ನಿಲ್ದಾಣದಿಂದ ಮೋದಿ ದೆಹಲಿಗೆ ವಾಪಸ್ ಆದರು.

ಮೈಸೂರು ಅರಮನೆಯಿಂದ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಮೋದಿ ಆಗಮಿಸಿದ್ದರು.

PM Modi Yoga Day Speech : ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ PM Modi Yoga Day Speech : ವಿಶ್ವ ಯೋಗ ದಿನದಂದು ದೇಶದ ಜನರಿಗೆ ಪ್ರಧಾನಿ ಸಂದೇಶ

ಮಂಗಳವಾರ ನರೇಂದ್ರ ಮೋದಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈಸೂರು ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಯೋಗಾಭ್ಯಾಸ ಮಾಡಿದರು.

ರಾಜ್ಯದಲ್ಲಿ 33 ಸಾವಿರ ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ ರಾಜ್ಯದಲ್ಲಿ 33 ಸಾವಿರ ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ

PM Narendra Modi Return To Delhi After Two Days Of Karnataka Tour

ಬಳಿಕ ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಮುಗಿಸಿ, ವಸ್ತುಪ್ರದರ್ಶನ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ವೀಕ್ಷಿಸಿದರು.

ಮೈಸೂರಿನಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಮೋದಿ ಮೈಸೂರಿನಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಮೋದಿ

ಆಯುಷ್‌ ಇಲಾಖೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ಸಮಗ್ರ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ಯೋಗ ಶಿಕ್ಷಣ ನೀಡುವ ಸಂಸ್ಥೆಗಳು, ಅಕಾಡೆಮಿಗಳ ಭರಪೂರ ಮಾಹಿತಿಯೊಂದಿಗೆ ದೇಶಿಯ ಉತನ್ನಗಳ ಪರಿಚಯವನ್ನು ಖುದ್ದು ಮೋದಿ ವೀಕ್ಷಿಸಿದರು.

ಮೈಸೂರಿನಲ್ಲಿ ಯೋಗ ಮಾಡಿದ ಮೋದಿ

ಬಳಿಕ ರಾಜಮಾತೆ ಪ್ರಮೋದಾ ದೇವಿ ಆಹ್ವಾನದಂತೆ ಪ್ರಧಾನಿ ನರೇಂದ್ರ ಮೋದಿ ಮೈಸೂರು ಅರಮನೆಯಲ್ಲಿ ಉಪಹಾರ ಸೇವಿಸಿದರು. ಬಳಿಕ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ದೆಲಿಯಲ್ಲಿ ಸಭೆ; ಪ್ರಧಾನಿ ಮೋದಿ ದೆಹಲಿಯಲ್ಲಿ ಮಧ್ಯಾಹ್ನ ಮೂರು ಸೇನಾ ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಿದ್ದಾರೆ. ಅಗ್ನಿಪಥ್ ಯೋಜನೆ ಬಗ್ಗೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಮೋದಿಗೆ ವಿವರಣೆ ನೀಡಲಿದ್ದಾರೆ.

Recommended Video

ಮೋದಿ ಮತ್ತು ಮಹಿಳೆ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ | Oneindia Kannada

English summary
After two days of Karnataka tour prime minister of India Narendra Modi return to Delhi from Mandakalli airport, Mysuru on June 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X