ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಆಲೋಚನೆಗಳಿಗೆ ವಿಶ್ವ ಮಾನ್ಯತೆ ಇದೆ: ಎಸ್. ಎಲ್. ಭೈರಪ್ಪ

|
Google Oneindia Kannada News

Recommended Video

ಮೋದಿ ಆಲೋಚನೆಗಳಿಗೆ ವಿಶ್ವ ಮಾನ್ಯತೆ ಇದೆ ಎಂದ ಎಸ್ಎಲ್.ಭೈರಪ್ಪ

ಮೈಸೂರು, ಸೆಪ್ಟೆಂಬರ್ 23: "ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏನು ಮಾಡಿದರೂ ಆ ಕೆಲಸದ ಹಿಂದೆ ದೂರಾಲೋಚನೆ ಇರುತ್ತದೆ. ಜತೆಗೆ ಪ್ರಾಮುಖ್ಯ ಇರುತ್ತದೆ. ಮೋದಿ ಅವರಿಗೆ ಸಾಕಷ್ಟು ಲೋಕಾನುಭವ ಇದೆ" ಎಂದು ಸಾಹಿತಿ ಹಾಗೂ ಈ ಬಾರಿಯ ಮೈಸೂರು ದಸರಾ ಉದ್ಘಾಟಕ ಎಸ್. ಎಲ್. ಭೈರಪ್ಪ ಭಾನುವಾರ ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗ

ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಅವರು, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು, ಮಾತನಾಡಿದರು. ನರೇಂದ್ರ ಮೋದಿ ಅವರ ಅಲೋಚನೆಗಳಿಗೆ ಭಾರತದಲ್ಲಿ ಮಾತ್ರ ಅಲ್ಲ, ವಿಶ್ವಮಟ್ಟದಲ್ಲಿ ಪ್ರಾಮುಖ್ಯವಿದೆ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರರಾದ ಭೈರಪ್ಪ ಹೇಳಿದರು.

PM Modi Thoughts Respected In Global Level, Said S. L. Bhyrappa

ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರ ನಿರ್ಮಾಣ ಆಗಲಿ ಎಂದು ಬಯಸುವವರಲ್ಲಿ ನಾನು ಕೂಡ ಒಬ್ಬ. ಆದರೆ ಭೂಮಿ ವಿವಾದವು ಸುಪ್ರೀಂ ಕೋರ್ಟ್ ನಲ್ಲಿದೆ. ಆ ಕಾರಣಕ್ಕೆ ತಾಳ್ಮೆಯಿಂದ ಕಾಯಬೇಕು ಎಂದು ಅವರು ಹೇಳಿದರು.

English summary
Prime minister Narendra Modi thoughts accepted globally, said by well known Kannada writer S. L. Bhyrappa in Suttur mutt on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X