• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧ್ಯಾತ್ಮ-ವಿಜ್ಞಾನ-ತಂತ್ರಜ್ಞಾನದ ಸಮಾಗಮ ಭಾರತದ ಆತ್ಮ: ಪ್ರಧಾನಿ ಮೋದಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 22: ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ವರ್ಧಂತ್ಯುತ್ಸವಕ್ಕೆ ಚಾಲನೆ ದೊರೆತಿದೆ. ನಗರದ ಅವಧೂತ ದತ್ತಪೀಠದಲ್ಲಿ ಭಾನುವಾರ ಆಯೋಜಿಸಿದ್ದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಅವರ ಭಾಷಣದ ವಿಡಿಯೋವನ್ನು ಬಿತ್ತರಿಸಲಾಯಿತು. ಆಧ್ಯಾತ್ಮಿಕತೆ, ಪ್ರಕೃತಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಮಾಗಮವೇ ಪ್ರಗತಿಶೀಲ ಭಾರತದ ಆತ್ಮವಾಗಿದೆ ಎಂದು ಹೇಳಿದರು.

''ಸಾಧು ಸಂತರ ಜನ್ಮವೂ ಕೇವಲ ಜೀವಯಾತ್ರೆಯಷ್ಟೇ ಅಲ್ಲ, ಅದು ಸಮಾಜದ ಉತ್ಖನನ. ಜನ ಕಲ್ಯಾಣ ಕಾಯಕವಾಗಿದೆ. ಇದಕ್ಕೆ ಗಣಪತಿ ಸಚ್ಚಿದಾನಂದಶ್ರೀಗಳ ಜೀವನವೇ ಒಂದು ಸಾಕ್ಷಿ. ದೇಶ-ವಿದೇಶಗಳಲ್ಲಿ ಅನೇಕ ಸಂಸ್ಥೆಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ. ಅವುಗಳ ಉದ್ದೇಶ-ಆಶಯ ಮಾತ್ರ ಒಂದೇ. ಅದು ಜೀವಗಳ ಮತ್ತು ಜನರ ಕಲ್ಯಾಣವೇ ಆಗಿದೆ. ಶ್ರೀಗಳು ಆಧ್ಯಾತ್ಮಿಕತೆ ಮತ್ತು ಆಧುನಿಕತೆಗೆ ಸ್ಫೂರ್ತಿಯಾಗಿದ್ದು, ಎರಡು ಸಂಸ್ಕೃತಿಗಳ ಸಮತೋಲದ ಬೆಳವಣಿಗೆ ಶ್ರೀಗಳ ಆಶ್ರಮದಲ್ಲಿ ಗೋಚರವಾಗುತ್ತದೆ'' ಎಂದರು.

''ಪ್ರಕೃತಿ, ಪಕ್ಷಿಗಳ ಸಂಕುಲ ಸಂರಕ್ಷಣಾ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಇದರೊಂದಿಗೆ ಹೊಸ ಸಂಕಲ್ಪವನ್ನೂ ಮಾಡಬೇಕು. ಜಲ, ನದಿ ಸಂರಕ್ಷಣಾ ಕೆಲಸವೂ ಆಗಲಿ. ಜನಜಾಗೃತಿ ಮೂಡಿಸುವುದೂ ಆಗಲಿ. ಈ ನಿಟ್ಟಿನಲ್ಲಿ ಎಲ್ಲರೂ ಸಾಂಗವಾಗಿ ಕೆಲಸವನ್ನು ಮಾಡೋಣ''ಎಂದರು.

''ಶ್ರೀಗಳು ಅಸಮಾನತೆ ನಿವಾರಣೆಗೆ ಮತ್ತು ಪೌರಕಾರ್ಮಿಕರ ಜೀವನ ಸುಧಾರಣೆಗೂ ಕೆಲಸ ಮಾಡುತ್ತಿದ್ದಾರೆ. ಇದುವೇ ಎಲ್ಲ ಧರ್ಮಗಳ ಸಾರವಾಗಿದೆ. ಅದನ್ನು ಶ್ರೀಗಳು ಸಾಕಾರಗೊಳಿಸುತ್ತಿದ್ದಾರೆ. ಹೀಗೆ ಸಮಾಜ, ರಾಷ್ಟ್ರ ನಿರ್ಮಾಣದ ಗುರುತರ ಜವಾಬ್ದಾರಿಯನ್ನು ಮುಂದುವರಿಸಲಿ. ಜೀವಗಳ ಮತ್ತು ಜನರ ಸೇವಾ ಯಜ್ಞ ಇನ್ನಷ್ಟು ವಿಸ್ತಾರವಾಗಲಿ,'' ಎಂದು ಪ್ರಧಾನಿ ಆಶಿಸಿದರು.

PM Modi lauds Ganapathy Sachchidananda Swamiji and Avadhoota Datta Peetham contribution to society

ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ಆಶ್ರಮದ ಆವರಣದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಆಶ್ರಮದ ಆವರಣದಲ್ಲಿ ನಾನಾ ಧಾರ್ಮಿಕ ಕಾರ್ಯಗಳು, ಸಾಧಕರಿಗೆ ಸನ್ಮಾನ, ನಾಡಿನ ಪ್ರತಿಷ್ಠಿತ ಮಠಾಧೀಶರು ಪ್ರವಚನ ನೀಡಲಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ದೇಶ-ವಿದೇಶಗಳಿಂದ ಭಕ್ತಾದಿಗಳು ಆಗಮಿಸಿದ್ದಾರೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಅಹೋಬಲ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಹೋಟೆಲ್ ಉದ್ಯಮಿ ರಾಜೇಂದ್ರ ಇದ್ದರು.

English summary
Prime Minister Narendra Modi lauded the efforts of Ganapathy Sachchidananda Swamiji, the Founder Pontiff of Avadhoota Datta Peetham contribution to society and to build a good society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X