ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರಿಗೆ ಗೌರವದ ಮತ್ತೊಂದು ಗರಿ!

|
Google Oneindia Kannada News

ಬೆಂಗಳೂರು, ಅ. 16: ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಮತ್ತೊಂದು ಗೌರವಕ್ಕೆ ಭಾಜನರಾಗಿದ್ದಾರೆ. ಶತಮಾನೋತ್ಸವ ಸಂಭ್ರದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ 100ನೇ ವಾರ್ಷಿಕೋತ್ಸವದಲ್ಲಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.

ಇದೇ ಅಕ್ಟೋಬರ್ 19ರಂದು ಬೆಳಗ್ಗೆ 10.30ಕ್ಕೆ ಕ್ರಾಫರ್ಡ್ ಭವನದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಮಾಧ್ಯಮದ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ವಿ.ಆರ್. ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ, ಕುಲಾಧಿಪತಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಮೋದಿ ಭಾಷಣಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಮೋದಿ ಭಾಷಣ

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಮೈಸೂರು ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದು, ಘಟಿಕೋತ್ಸವದಲ್ಲಿ ಇದನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರೊ.ಜಿ. ಹೇಮಂತಕುಮಾರ್ ಹೇಳಿದರು.

PM Narendramodi is scheduled to address the University of Mysore (UoM) convocation virtually on October 19

ಈ ವಿಷಯವಾಗಿ ರಚಿಸಲಾಗಿದ್ದ ಸಮಿತಿಯು ಮೂವರು ಹೆಸರನ್ನು ಅಂತಿಮಗೊಳಿಸಿ ರಾಜ್ಯಭವನಕ್ಕೆ ಕಳುಹಿಸಿಕೊಟ್ಟಿತ್ತು. ಇದನ್ನು ಪರಿಶೀಲನೆ ಮಾಡಿದ ರಾಜ್ಯಪಾಲರು, ಗೌರವ ಡಾಕ್ಟರೇಟ್ ಪದವಿಗೆ ಕೇವಲ ಸುಧಾಮೂರ್ತಿ ಹೆಸರನ್ನು ಅನುಮೋದಿಸಿದ್ದಾರೆ. ಉಳಿದ ಇಬ್ಬರ ಹೆಸರನ್ನು ತಿರಸ್ಕರಿಸಿದ್ದು, ಆ ಇಬ್ಬರು ಹೆಸರು ಗೊತ್ತಿಲ್ಲ ಎಂದು ಕುಲಪತಿ ತಿಳಿಸಿದರು.

ಉನ್ನತ ಶಿಕ್ಷಣದಲ್ಲಿಯೂ ಮಹಿಳೆಯರದ್ದೆ ಮೇಲುಗೈ: ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಪದವಿ ಪಡೆದುಕೊಳ್ಳುವವರ ಪೈಕಿ ಈ ಸಲವೂ ಮಹಿಳೆಯರದ್ದೇ ಪಾರುಪತ್ಯ. ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ ವಿಭಾಗದಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. 29,018 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಇದರಲ್ಲಿ 18,344(ಶೇ.63.21) ಮಹಿಳೆಯರು. 10,674(ಶೇ.36.78) ಪುರುಷರು. ವಾಣಿಜ್ಯ ನಿಕಾಯದ ಎಂಬಿಎ ಅಗ್ರಿಬಿಜಿನೆಸ್ ಕೋರ್ಸ್‌ನ ಒಬ್ಬ ಅಭ್ಯರ್ಥಿಗೆ ಮಾತ್ರ ಡಿ.ಲೀಟ್ ಪದವಿ ನೀಡಲಾಗುತ್ತಿದೆ. ವಿವಿಧ ವಿಷಯಗಳಲ್ಲಿ 654 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುತ್ತದೆ. ಅವರಲ್ಲಿ 264(ಶೇ.40.36) ಮಹಿಳೆಯರು ಮತ್ತು 390(ಶೇ.59.63) ಪುರುಷರು ಎಂದು ಮಾಹಿತಿ ನೀಡಿದರು.

English summary
Infosys Foundation Sudha Murthy is conferred the honorary Doctorate Degree at the 100th Anniversary of the University of Mysore at the centenary celebration. PM Narendra Modi is scheduled to address the University of Mysore (UoM) convocation virtually on October 19. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X