ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 10; ಬೆಂಗಳೂರು ಹಾಗೂ ಮಂಗಳೂರಿನ ನಂತರ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ.

ನಗರದ 16,917 ಚದರ ಕಿ. ಮೀ. ವ್ಯಾಪ್ತಿಯನ್ನು ಪೈಪ್‌ಲೈನ್ ಅನಿಲ ಸಂಪರ್ಕ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಎಜಿ ಅಂಡ್ ಪಿ ಕಂಪನಿಯು 5 ವರ್ಷಗಳಲ್ಲಿ ನಗರದ 3.75 ಲಕ್ಷ ಮನೆಗಳಿಗೆ ಸಂಪರ್ಕಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿ ಹೊಂದಿದೆ.

ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ

ಈಗಾಗಲೇ ನಗರದ ಹೆಬ್ಬಾಳ್ ಬಡಾವಣೆಯಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಶುರುವಾಗಿದೆ. ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಇದು ಜಿಐಎಸ್ ಆಧಾರಿತ ನಿಯಂತ್ರಣ ವ್ಯವಸ್ಥೆ ಹಾಗೂ ತುರ್ತು ಸ್ಪಂದನಾ ವಾಹನಗಳ ಬಳಕೆಯಿಂದ ಅನಾಹುತ ತಡೆಯುವ ವ್ಯವಸ್ಥೆ ಹೊಂದಿದೆ.

ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ

Piped Cooking Gas To Home Project Work Start At Mysuru

ರಿಂಗ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಿಂದ ಶುರುವಾಗುವ ಕಾಮಗಾರಿಯು ಕುಂಬಾರ ಕೊಪ್ಪಲ್‌ ಮುಖಾಂತರ ಹಾದು ಹೋಗಿ ಅಲ್ಲಿಂದ ಹಿನಕಲ್, ಬೋಗಾದಿ, ದಟ್ಟಗಳ್ಳಿ, ಶ್ರೀರಾಂಪುರ, ಜೆಪಿನಗರ, ನಂಜನಗೂಡು ರಸ್ತೆ ಹಾಗೂ ತಿ‌.ನರಸೀಪುರ ಜಂಕ್ಷನ್ ವರೆಗೆ ಯೋಜನೆ ತನಕ ಸಾಗಲಿದೆ. ಒಟ್ಟು 28 ಕಿ. ಮೀ. ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಬೆಂಗಳೂರು: ಬಿಡಿಎ ಅಪಾರ್ಟ್‌ಮೆಂಟ್‌ಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಬೆಂಗಳೂರು: ಬಿಡಿಎ ಅಪಾರ್ಟ್‌ಮೆಂಟ್‌ಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್

ಮೇ ತಿಂಗಳಿನಿಂದ ಅನಿಲ ಪೂರೈಕೆ; ಅಂದುಕೊಂಡಂತೆ ಕಾಮಗಾರಿ ಮುಗಿದರೆ ಮೊದಲ ಹಂತದಲ್ಲಿ 2022ರ ಮೇ ತಿಂಗಳಿನಿಂದ ಮೈಸೂರಿನ ಪ್ರತಿಮನೆಗೂ ಪೈಪ್ ಲೈನ್ ಮುಖಾಂತರವೇ ಅಡುಗೆ ಅನಿಲ ಪೂರೈಕೆ ಆಗಲಿದೆ. ಮೊದಲಿಗೆ ಪೈಪ್ ಲೈನ್ ಎಳೆಯಲಾಗುತ್ತದೆ. ಅನಿಲ ಪೂರೈಕೆಗೆ ಹೆಬ್ಬಾಳದಲ್ಲಿ ಅನಿಲ‌ ಸರಬರಾಜು ಘಟಕ ನಿರ್ಮಾಣ ‌ಮಾಡಲಾಗಿದೆ.

Piped Cooking Gas To Home Project Work Start At Mysuru

ಯಾವುದೇ ಸಂದರ್ಭದಲ್ಲೂ ಅನಿಲ ಸೋರಿಕೆಯಾಗದಂತೆ ಸುಮಾರು 1.2 ಮೀಟರ್‌ನಷ್ಟು ಭೂಮಿ ಅಗೆದು ಉಕ್ಕಿನ ಹಾಗೂ ಎಂಡಿಪಿ (ಮೀಡಿಯಂ ಡೆನ್ಸಿಟಿ ಪಾಲಿಥಲೀನ್) ಪೈಪ್ ಅಳವಡಿಸಲಾಗುತ್ತದೆ. ಅಲ್ಲದೆ, ಪ್ರತಿದಿನ ಅನಿಲ ಪೂರೈಕೆಯಾಗುವ ಪೈಪ್‌ಲೈನ್‌ನ ಮೇಲೆ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಅನಾಹುತ ಸಂಭವಿಸಿದಲ್ಲಿ ವಾಲ್ವ್‌ಗಳ ಮೂಲಕ ಅನಿಲ ಪೂರೈಕೆಯಾಗುವುದನ್ನು ನಿಲ್ಲಿಸಬಹುದು.

ಏನೆಲ್ಲಾ ಪ್ರಯೋಜನ‌ ಇದೆ?; ಹೊಸ‌ ಮಾದರಿಯ ಈ ಪೈಪ್ ಲೈನ್ ಜೋಡಣೆಯಿಂದ ಹಲವು ಅನುಕೂಲಗಳಿವೆ.‌ ಮೊದಲಿಗೆ ಸುರಕ್ಷತೆ ದೃಷ್ಟಿಯಿಂದ ಇದು ಒಳ್ಳೆಯ ಯೋಜನೆ. ಅಲ್ಲದೆ, ಯಾವುದೇ ಅಡ್ಡಿ ಇಲ್ಲದೆ ಗ್ರಾಹಕರಿಗೆ ನಿರಂತರವಾಗಿ ಅನಿಲ ಪೂರೈಕೆ ಆಗುತ್ತದೆ.

ಅಡುಗೆ ಅನಿಲದ ಬೆಲೆ ಕೂಡ‌ ಕಡಿಮೆ ಇದ್ದು, ಅನಿಲ ವ್ಯರ್ಥವಾಗುವುದಿಲ್ಲ, ಸಿಲಿಂಡರ್ ಬುಕ್ ಮಾಡುವ ಅಗತ್ಯವಿಲ್ಲ. ಮೊದಲೇ ಹಣ ಪಾವತಿಸುವಂತಿಲ್ಲ. ಪರಿಸರಕ್ಕೆ ಹಾನಿಕರವಲ್ಲ, ಬಳಕೆಯೂ ಸುಲಭ.

ಬೆಂಗಳೂರಿನಲ್ಲಿ ಜಾರಿಯಾಗಿದೆ; ಪೈಪ್‌ಲೈನ್ ಮೂಲಕ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆ ಬೆಂಗಳೂರು ನಗರದಲ್ಲಿ ಜಾರಿಯಾಗಿದೆ. 2021ರ ಜನವರಿಯಲ್ಲಿ ಮಾತನಾಡಿದ್ದ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "2.8 ಲಕ್ಷ ಮನೆಗಳಿಗೆ ಇದುವರೆಗೂ ಈ ಯೋಜನೆಯಿಂದ ಲಾಭವಾಗಿದೆ. ಇನ್ನೂ 1.68 ಲಕ್ಷ ಮನೆಗಳಿಗೆ ಗ್ಯಾಸ್ ಪೂರೈಕೆ ಮಾಡಲು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ" ಎಂದು ಹೇಳಿದ್ದರು.

ಗೇಲ್ ಗ್ಯಾಸ್ ಲಿಮಿಟೆಡ್ ಬೆಂಗಳೂರಲ್ಲಿ ಯೋಜನೆ ಜಾರಿಗೊಳಿಸುತ್ತಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 4,395 ಚದರ ಕಿ. ಮೀ. ವ್ಯಾಪ್ತಿಗೆ ಯೋಜನೆ ವಿಸ್ತರಣೆ ಮಾಡುವ ಗುರಿ ಹೊಂದಿದೆ.

Recommended Video

ಭಾರತ ಸೇನೆಗೆ ಬಿಪಿನ್ ರಾವತ್ ಕೊಟ್ಟ ಕೊಡುಗೆ ಏನೇನು ಗೊತ್ತಾ? | Oneindia Kannada

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಿದೆ.

English summary
Cooking gas through pipeline at home will come reality in Mysuru city. The project work started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X