ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡಿನ ಬೈಪಾಸ್ ರಸ್ತೆಯಲ್ಲಿ ಹಂದಿಗಳ ಸವಾರಿ!

|
Google Oneindia Kannada News

ಮೈಸೂರು, ಜುಲೈ 1: ಇದುವರೆಗೆ ಬೀದಿನಾಯಿ, ಬೀದಿ ದನಗಳಿಂದ ತೊಂದರೆ ಅನುಭವಿಸುತ್ತಿದ್ದ ನಂಜನಗೂಡು ಜನ ಇದೀಗ ಹಂದಿಗಳ ಕಾಟದಿಂದ ಒದ್ದಾಡುವಂತಾಗಿದೆ. ಎಲ್ಲೆಂದರಲ್ಲಿ ಅಡ್ಡಾಡುವ ಹಂದಿಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ವಾಹನ ಸವಾರರಿಗೆ ಸವಾಲ್ ಆಗಿ ಪರಿಣಮಿಸಿದೆ.

ಈಗಾಗಲೇ ನಂಜನಗೂಡು ಪಟ್ಟಣದ ಜನ ಬೀದಿ ನಾಯಿ, ಬೀದಿ ದನ, ಕುದುರೆಗಳ ಕಾಟದಿಂದ ಕಂಗಾಲಾಗಿದ್ದಾರೆ. ಈ ಹಿಂದೆ ಕುದುರೆಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿವೆ. ಇದೆಲ್ಲವೂ ಹಸಿರಾಗಿರುವಾಗಲೇ ಹಂದಿಗಳ ಕಾಟ ಆರಂಭವಾಗಿದೆ. ಹಂದಿಗಳನ್ನು ಸಾಕುವವರು ಅವುಗಳನ್ನು ಬೀದಿಗೆ ಬಿಡುತ್ತಿರುವುದರಿಂದ ಅವು ರಾಜಾರೋಷವಾಗಿ ಪಟ್ಟಣದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದು, ಅವುಗಳಿಂದ ತಪ್ಪಿಸಿಕೊಂಡು ಸಂಚರಿಸುವುದೇ ಒಂದು ರೀತಿಯ ಸರ್ಕಸ್ ಎಂದರೆ ತಪ್ಪಾಗಲಾರದು.

ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಗಳಿಗೆ ಸೀಟು ಮೀಸಲು ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಗಳಿಗೆ ಸೀಟು ಮೀಸಲು

ಬೈಪಾಸ್ ರಸ್ತೆಯಲ್ಲಿ ಹಂದಿಗಳ ಕಾಟ
ಇನ್ನು ನಂಜನಗೂಡು ಹಾಗೂ ಚಾಮರಾಜನಗರ ಬೈಪಾಸ್ ರಸ್ತೆಯು ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಇಂತಹ ಬೈಪಾಸ್ ರಸ್ತೆ ವ್ಯಾಪ್ತಿಯಲ್ಲಿಯೇ ಹಂದಿಗಳ ಕಾಟ ಹೆಚ್ಚಾಗಿರುವುದು ಸಂಚರಿಸುವ ಸಾರ್ವಜನಿಕರಿಗೆ ನುಂಗಲಾರದ ಬಿಸಿ ತುತ್ತಾಗಿದೆ. ಇಲ್ಲಿ ರಸ್ತೆಗೆ ಅಡ್ಡಲಾಗಿ ಆಗಾಗ್ಗೆ ಹಂದಿಗಳು ದಾಟುತ್ತಿರುತ್ತವೆ. ಈ ವೇಳೆ ವಾಹನ ಚಾಲಿಸುವವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಒಮ್ಮೊಮ್ಮೆ ವಾಹನಗಳು ಹತ್ತಿರ ಬರುತ್ತಿದ್ದಂತೆಯೇ ದಿಢೀರ್ ಆಗಿ ರಸ್ತೆಗೆ ಅಡ್ಡಲಾಗಿ ಬರುವ ಹಂದಿಗಳತ್ತ ಲಕ್ಷ್ಯ ವಹಿಸದೆ ಹೋದರೆ ಅಪಘಾತವಂತು ಖಚಿತ. ಈಗಾಗಲೇ ದ್ವಿಚಕ್ರ ಸವಾರರು ಇವುಗಳ ಕಾಟದಿಂದ ವಾಹನ ಸಹಿತ ನೆಲಕ್ಕುರುಳಿ ಪೆಟ್ಟು ಮಾಡಿಕೊಂಡ ನಿದರ್ಶನಗಳಿವೆ. ಒಂದು ವೇಳೆ ಬಸ್ ಅಥವಾ ಲಾರಿಗೆ ಹಂದಿಗಳು ಅಡ್ಡ ಬಂದರೆ ದೊಡ್ಡ ಅವಘಡವೇ ನಡೆಯುವುದರಲ್ಲಿ ಎರಡು ಮಾತಿಲ್ಲ.

Mysuru: Pigs Wandering On Nanjangud Bypass Road Makes Troubles To Public

ಹಂದಿಗಳನ್ನು ಬೀದಿಗೆ ಬಿಡದಂತೆ ಕ್ರಮ ಕೈಗೊಳ್ಳಿ
ಸಾಮಾನ್ಯವಾಗಿ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಆರಂಭವಾಗಿ ಭಾರೀ ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಸದಾ ವಾಹನಗಳಿಂದ ತುಂಬಿರುತ್ತವೆ. ಹೀಗಿರುವಾಗ ಈ ರಸ್ತೆಗಳಲ್ಲಿ ಹಂದಿಗಳು ಅಡ್ಡಾದಿಡ್ಡಿ ಓಡಾಡಿದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿದರೆ ಸಾಕು, ಪರಿಸ್ಥಿತಿ ಅರ್ಥವಾಗಿ ಬಿಡುತ್ತದೆ. ಹೀಗಿರುವಾಗ "ಈ ವ್ಯಾಪ್ತಿಯಲ್ಲಿ ಹಂದಿ ಸಾಕುವ ಮಾಲೀಕರತ್ತ ನಗರ ಸಭೆ ಗಮನಹರಿಸಿ ಪಟ್ಟಣದ ಹೊರಭಾಗದಲ್ಲಿ ಹಂದಿ ಸಾಕಲು ಅವಕಾಶ ಮಾಡಿಕೊಡಬೇಕು. ಅಷ್ಟೇ ಅಲ್ಲದೆ ಸಾಕಿರುವ ಹಂದಿಗಳನ್ನು ಬೀದಿಗೆ ಬಿಡದಂತೆ ಕ್ರಮಕೈಗೊಳ್ಳಬೇಕು,'' ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Mysuru: Pigs Wandering On Nanjangud Bypass Road Makes Troubles To Public

ನಗರಸಭೆ ಎದುರು ಪ್ರತಿಭಟಿಸುವ ಎಚ್ಚರಿಕೆ
"ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲೆಂದರಲ್ಲಿ ಅಡ್ಡಾಡುವ ಹಂದಿಗಳನ್ನು ಸೆರೆಹಿಡಿದು ನಿರ್ಭಯವಾಗಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡುವ,'' ಎಚ್ಚರಿಕೆಯನ್ನು ವಾಹನ ಚಾಲಕರು ಮತ್ತು ಸಾರ್ವಜನಿಕರು ನೀಡಿದ್ದಾರೆ.
English summary
The public is disturbed by the pigs on the Nanjangud and Chamarajanagar Bypass Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X