ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋನ್ ಕದ್ದಾಲಿಕೆ: ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ಗರಂ

|
Google Oneindia Kannada News

ಬೆಂಗಳೂರು, ಆಗಸ್ಟ್ 14 : "ನನ್ನ ಪೋನ್ ಕೂಡಾ ಕದ್ದಾಲಿಕೆ ಮಾಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದರೂ ನನ್ನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು" ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಒತ್ತಾಯಿಸಿದರು.

ಬುಧವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವನಾಥ್, "ಎಲ್ಲಾ ಬಂಡಾಯ ಶಾಸಕರ ಪೋನ್ ಟ್ಯಾಪ್ ಮಾಡಲಾಗಿತ್ತು. ಅದನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು" ಎಂದು ಆರೋಪಿಸಿದರು.

"ಮೈತ್ರಿ ಸರ್ಕಾರವಿದ್ದಾಗ ನನ್ನ ಫೋನನ್ನೂ ಟ್ರ್ಯಾಪ್ ಮಾಡಿದ್ದರು": ಎಂ.ಪಿ. ರೇಣುಕಾಚಾರ್ಯ

"ಎಚ್. ಡಿ. ಕುಮಾರಸ್ವಾಮಿ ನನ್ನ ಪೋನ್ ಕೂಡಾ ಕದ್ದಾಲಿಕೆ ಮಾಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕನಾಗಿದ್ದರೂ ನನ್ನ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ನಾನು ನನ್ನ ಕುಟುಂಬದವರ ಜತೆ ಮಾತನಾಡುವುದನ್ನು ಕದ್ದಾಲಿಕೆ ಮಾಡುವುದು ಎಷ್ಟು ಸರಿ?" ಎಂದು ಪ್ರಶ್ನೆ ಮಾಡಿದರು.

ಕರ್ನಾಟಕದಲ್ಲಿ ಮಹಾ ಪ್ರವಾಹ : ಯಡಿಯೂರಪ್ಪಗೆ ದೇವೇಗೌಡರ ಪತ್ರಕರ್ನಾಟಕದಲ್ಲಿ ಮಹಾ ಪ್ರವಾಹ : ಯಡಿಯೂರಪ್ಪಗೆ ದೇವೇಗೌಡರ ಪತ್ರ

Phone Taping H Vishwanath Upset With HD Kumaraswamy

"ಬಂಡಾಯ ಶಾಸಕರೆಲ್ಲರ ಪೋನ್ ಟ್ಯಾಪ್ ಮಾಡಲಾಗಿತ್ತು. ಇದನ್ನು ನೇರವಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಡಿಸಿದ್ದರು. ನಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಕೆಲಸವಾಗಿದೆ" ಎಂದು ಹೇಳಿದರು.

17 ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ17 ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ

"ಕಾನೂನಿನ ಪ್ರಕಾರ ನನ್ನ ಪತ್ನಿಯ ದೂರವಾಣಿ ಸಹ ಕದ್ದಾಲಿಕೆ ಮಾಡುವಂತಿಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ‌ ಬಳಿಕ ನಮ್ಮನ್ನು ಬ್ಲಾಕ್ ಮೇಲ್ ಮಾಡಲು ಪೋನ್ ಟ್ಯಾಪಿಂಗ್ ಮಾಡಲಾಗಿತ್ತು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.

ಬಿಜೆಪಿ ನಾಯಕ ಆರ್. ಅಶೋಕ ಸಹ ಫೋನ್ ಟ್ಯಾಪಿಂಗ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಟೆಲಿಫೋನ್ ಕದ್ದಾಲಿಕೆ ಮಹಾಪರಾಧ. ನಾನು ಆರು ತಿಂಗಳ ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಿದ್ದೆ. ಬಿಜೆಪಿ ನಾಯಕರು, ಕೆಲವು ಪತ್ರಕರ್ತರು ಸೇರಿದಂತೆ ಹಲವರ ಪೋನ್ ಕದ್ದಾಲಿಕೆ ಮಾಡಲಾಗಿದೆ" ಎಂದು ಆರೋಪ ಮಾಡಿದ್ದಾರೆ.

"ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಲಾಗುವುದು" ಎಂದು ಆರ್. ಅಶೋಕ ಹೇಳಿದರು.

English summary
Disqualified MLA H. Vishwanath alleged that Chief Minister office was misused for phone tapping and it was a crime. He also demanded for inquiry on tapping case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X