ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಕೊರೊನಾಗಾಗಿ ರಸ್ತೆಗಿಳಿದ ಯಮ ಧರ್ಮರಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 01: ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನೇ ದಿನೇ ದೇಶದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‌ ಡೌನ್ ಘೋಷಣೆ ಮಾಡಿದೆ. ಆದರೆ ಪೊಲೀಸರು ಎಷ್ಟು ಎಚ್ಚರಿಕೆ ನೀಡಿದರೂ ಜನರು, ವಾಹನ ಸವಾರರು ರಸ್ತೆಗಿಳಿಯುವುದನ್ನು ನಿಲ್ಲಿಸಿಲ್ಲ.

ಪರಿಪರಿಯಾಗಿ ಮನವಿ ಮಾಡಿದರೂ, ದಂಡ ವಿಧಿಸಿದರೂ ರಸ್ತೆಗೆ ಬರುವುದು ತಪ್ಪಿಲ್ಲ. ಹಾಗಾಗಿ ಜನರಲ್ಲಿ ಅರಿವು ಮೂಡಿಸಲೆಂದು ಇಲ್ಲಿನ ಪ್ರಜ್ಞಾವಂತ ನಾಗರಿಕ ವೇದಿಕೆ ಪೊಲೀಸರ ನೆರವಿನೊಂದಿಗೆ ಯಮ ಧರ್ಮರಾಜನ ವೇಷ ಧರಿಸಿದ ವ್ಯಕ್ತಿಯಿಂದ ಕೊರೊನಾ ವೈರಸ್ ಸೋಂಕು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

Person Dressed As Yama Bring Awareness About Coronavirus In Mysuru

 ಶಿವಮೊಗ್ಗದಲ್ಲಿ ಲಾಕ್ ಡೌನ್ ನಡುವೆಯೂ ತಿಥಿಗೆ ಸೇರಿದ್ರು ನೂರಾರು ಜನ! ಶಿವಮೊಗ್ಗದಲ್ಲಿ ಲಾಕ್ ಡೌನ್ ನಡುವೆಯೂ ತಿಥಿಗೆ ಸೇರಿದ್ರು ನೂರಾರು ಜನ!

ಇಂದು ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಸಿದ್ದಾರ್ಥ ನಗರದ ನಿವಾಸಿ ಜೀವನ್ ಯಮ ವೇಷಧಾರಿಯಾಗಿ ಗಮನ ಸೆಳೆದರು. ಕೊರೊನಾ ವೈರಸ್ ಸೋಂಕು ಹರಡುವಿಕೆ ದಿನೇ ದಿನೇ ಹೆಚ್ಚುತ್ತಿದೆ, ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಎಂದು ಯಮ ವೇಷಧಾರಿ ಮನವಿ ಮಾಡಿದರು. ಪೊಲೀಸರು ಪಾಸ್ ಗಳನ್ನು ಪರಿಶೀಲನೆ ಮಾಡಿ ಜನರನ್ನು ಬಿಡುತ್ತಿರುವುದು ಕಂಡು ಬಂತು.

English summary
A person dressed as yama dharmaraya tried to create awareness about coronavirus among people in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X