ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗ್ನಲ್ ಜಂಪ್ ಮಾಡೋ ಮುನ್ನ ಈ ವಿಷಯ ನಿಮ್ಮ ನೆನಪಿನಲ್ಲಿರಲಿ...

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 19: ಕೆಲವೇ ನಿಮಿಷ ಕಾಯಲಾಗದೇ ಆತುರಕ್ಕೆ ಬಿದ್ದು ಸಿಗ್ನಲ್ ಜಂಪ್ ಮಾಡುವ ಎಷ್ಟೋ ಮಂದಿ ಇರುತ್ತಾರೆ. ಆದರೆ ಆ ಆತುರ ಜೀವಕ್ಕೇ ಎರವಾಗುತ್ತದೆ. ಅಂಥದ್ದೊಂದು ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ. ಸಿಗ್ನಲ್ ಜಂಪ್ ಮಾಡಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೈಸೂರಿನ ಆಕಾಶವಾಣಿ ಸಿಗ್ನಲ್ ಬಳಿ ಘಟನೆ‌ ನಡೆದಿದ್ದು, ಸಿಗ್ನಲ್ ಜಂಪ್ ಮಾಡಲು ಹೋದ ವೇಳೆ ಮಿನಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ಕುರಿತು ಮಾಹಿತಿ ಲಭ್ಯವಾಗಿಲ್ಲ. ಎಸ್.ಎಸ್. ಟೆಕ್ನಾಲಜಿ ಸಂಸ್ಥೆಗೆ ಸೇರಿದ ಮಿನಿ ಬಸ್ ಕೆಆರ್ ಎಸ್ ಕಡೆಯಿಂದ ಬರುತ್ತಿತ್ತು. ಈ ವೇಳೆ ಬೈಕ್ ಸವಾರ ಸಿಗ್ನಲ್ ಜಂಪ್ ಮಾಡಲು ಯತ್ನಿಸಿದ್ದು, ಈ ಸಮಯದಲ್ಲಿ ಬೈಕ್ ಸವಾರನ ತಲೆ ಮೇಲೆ ಬಸ್ ಹರಿದಿದೆ.

ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾದ ಟೆಕ್ಕಿಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾದ ಟೆಕ್ಕಿ

Person Died In An Accident While Jumping Traffic Signal

ಬೈಕ್ ಸವಾರ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಮೃತ ದೇಹವನ್ನು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bike rider was killed in an accident while trying to jump signal near akashavani office in mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X