ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ 100ರ ನೋಟಿಗೆ ಬೆಂಕಿ ಹಚ್ಚಿದ ಜನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 18: ರಸ್ತೆಯಲ್ಲಿ ನೋಟು ಕಂಡರೆ ಅದನ್ನು ಜೇಬಿಗೆ ಇಳಿಸಿಕೊಳ್ಳುವವರೇ ಹೆಚ್ಚು. ಆದರೆ ಈಗ ರಸ್ತೆಯಲ್ಲಿ ನೋಟು ಕಂಡರೆ ಬೆಚ್ಚಿ ಬೀಳುತ್ತಿದ್ದಾರೆ. ನೋಟಿನ ಮೂಲಕ ಕೊರೊನಾ ವೈರಸ್ ಹರಡುತ್ತಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಜನರು ನೋಟನ್ನು ಕಂಡರೆ ಮಾರು ದೂರ ಹೋಗುತ್ತಿದ್ದಾರೆ.

ಮೊನ್ನೆ ಹೆಬ್ಬಾಳದ ಬಡಾವಣೆಯೊಂದರ ರಸ್ತೆಯಲ್ಲಿ 50 ರೂಪಾಯಿಗಳ 7 ನೋಟುಗಳು ಬಿದ್ದಿದ್ದವು. ಸಾರ್ವಜನಿಕರ ದೂರಿನ ಮೇರೆಗೆ ಮಹಾನಗರಪಾಲಿಕೆ ಅಧಿಕಾರಿಗಳು ಅದನ್ನು ತೆರವು ಗೊಳಿಸಿದ್ದರು. ಇಂದು ಮತ್ತೆ ನಜರಬಾದ್ ನಲ್ಲಿ 100 ರೂಪಾಯಿಯ ನೋಟೊಂದು ಪತ್ತೆ ಆಗಿದೆ. ಅದನ್ನು ಕಂಡ ಜನರು ಆ ನೋಟಿಗೆ ಬೆಂಕಿ‌ ಹಚ್ಚಿದ ಘಟನೆ ನಡೆದಿದೆ. ನಜರ್ ಬಾದ್ ನ ಮೆಡಿಕಲ್ ಸ್ಟೋರ್ ಒಂದರ ಮುಂಭಾಗ 100 ರೂ. ಮುಖಬೆಲೆಯ ನೋಟು ಬಿದ್ದಿತ್ತು.

ಉಡುಪಿ; ದಾರಿಯಲ್ಲಿ ನೋಟು ಎಸೆದು ಆತಂಕ ಸೃಷ್ಟಿಸಿದ ಯುವಕಉಡುಪಿ; ದಾರಿಯಲ್ಲಿ ನೋಟು ಎಸೆದು ಆತಂಕ ಸೃಷ್ಟಿಸಿದ ಯುವಕ

ನೋಟಿನಲ್ಲಿ ಕೊರೊನಾ ವೈರಸ್ ಇರಬಹುದೆಂಬ ಶಂಕೆಯಿಂದ ನೋಟಿಗೆ ವ್ಯಕ್ತಿಯೊಬ್ಬರು ಸ್ಯಾನಿಟೈಸರ್ ಹಾಕಿ‌ ನಂತರ ಬೆಂಕಿ ಇಟ್ಟಿದ್ದಾರೆ. ನೋಟಿಗೆ ಬೆಂಕಿ‌ ಇಟ್ಟ ವಿಡಿಯೋ ಇದೀಗ ವೈರಲ್ ಆಗಿದ್ದು, ಮೈಸೂರಿನ ಜನತೆಯಲ್ಲಿ ಆತಂಕ ಹೆಚ್ಚಿದೆ. ಗುರುವಾರ ಹೆಬ್ಬಾಳದಲ್ಲಿಯೂ 50ರೂ.ನೋಟು ಬಿಸಾಡಿ ಹೋಗಿದ್ದರು. ಅದನ್ನು ಪಾಲಿಕೆ ಅಧಿಕಾರಿಗಳು ಎತ್ತಿಕೊಂಡು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ.

People Scared Of Seeing 100 Rs Note On Road In Mysuru

ಜನತೆಯಲ್ಲಿ ಭೀತಿ ಹುಟ್ಟಿಸಲು ಯಾರೋ ಬೇಕೆಂತಲೇ ಈ ಕೆಲಸ ಮಾಡುತ್ತಿದ್ದಾರಾ ಅಥವಾ ಕೊರೊನಾ ವೈರಸ್ ಸೋಂಕಿರುವವರೇ ಸೋಂಕು ಹರಡಲು ಈ ರೀತಿ ಮಾಡುತ್ತಿದ್ದಾರಾ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

English summary
People scared by seeing 100 rs note on nazarbad road in mysuru, They sanitize the note and burnt it,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X