ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಳ್ಳೇಗಾಲ-ಕಲ್ಲಿಕೋಟೆ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ವಿರೋಧ

|
Google Oneindia Kannada News

ಮೈಸೂರು, ನವೆಂಬರ್ 29 : ಕೊಳ್ಳೇಗಾಲ-ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಿಸಲು ಅಧಿಸೂಚನೆ ಹೊರಡಿಸಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ 212 (ಹೊಸ ಸಂಖ್ಯೆ 766)ಯಲ್ಲಿ ಟೋಲ್ ಸಂಗ್ರಹ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. 238.5 ಕಿ. ಮೀ ದೂರದ ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲಿ 150 ಕಿ. ಮೀ. ಹಾದು ಹೋಗುತ್ತದೆ. ಉಳಿದ ಭಾಗ ಕೇರಳದಲ್ಲಿದೆ.

ದೇಶದ ಟೋಲ್ ಪ್ಲಾಜಾ ಕ್ಯೂನಲ್ಲಿ 12 ಸಾವಿರ ಕೋಟಿದೇಶದ ಟೋಲ್ ಪ್ಲಾಜಾ ಕ್ಯೂನಲ್ಲಿ 12 ಸಾವಿರ ಕೋಟಿ

ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಲ್ಲಿ ರಸ್ತೆಯ ಗುಣಮಟ್ಟ ಕಳಪೆಯಾಗಿದೆ. ಆದರೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು

People Refused To Pay Toll In National Highway 766

ಗುಂಡ್ಲುಪೇಟೆಯಿಂದ ಕಳಲೆ ತನಕ ಚತುಷ್ಪಥ ರಸ್ತೆ ನಿರ್ಮಾಣಗೊಂಡಿಲ್ಲ. ಕಳಲೆ-ನಂಜನಗೂಡು ಮಾರ್ಗದಲ್ಲಿ ಮೈಸೂರಿನ ತನಕ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ರಸ್ತೆಯ ಗುಣಮಟ್ಟ ಕಳಪೆಯಾಗಿದೆ. ಸರಿಯಾಗಿ ನಿರ್ವಹಣೆ ಸಹ ಮಾಡಿಲ್ಲ ಎಂಬುದು ಜನರ ಆರೋಪ.

6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ! 6 ಸಾವಿರ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ ಇತ್ತ ನೋಡಲಿ!

ಮೈಸೂರಿನಿಂದ ಕೊಳ್ಳೇಗಾಲದ ತನಕ ಈ ರಸ್ತೆಯಲ್ಲಿ ಸಂಚಾರ ನಡೆಸಿದರೆ ಎಲ್ಲಿಯೂ ನಾಲ್ಕು ಪಥದ ರಸ್ತೆ ಸಿಗುವುದಿಲ್ಲ. ರಸ್ತೆಯಲ್ಲಿ ಡಿವೈಡರ್ ಸಹ ಹಾಕಿಲ್ಲ. ಇದು ರಾಷ್ಟ್ರೀಯ ಹೆದ್ದಾರಿಯೇ ಎಂಬ ಅನುಮಾನ ಬರುವಂತೆ ರಸ್ತೆ ಇದೆ ಎಂದು ಜನರು ಹೇಳುತ್ತಿದ್ದಾರೆ.

"ಈ ರಸ್ತೆ ಗುಣಮಟ್ಟ ಕಳಪೆಯಾಗಿದೆ. ಗುತ್ತಿಗೆದಾರ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ" ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಬಿ. ಹರ್ಷವರ್ಧನ್ ಆರೋಪ ಮಾಡಿದ್ದಾರೆ.

150 ಕಿ. ಮೀ. ರಸ್ತೆಯಲ್ಲಿ ಎರಡು ಟೋಲ್ ಸಂಗ್ರಹ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಇನ್ನೂ ಟೋಲ್ ಸಂಗ್ರಹ ಆರಂಭಿಸಿಲ್ಲ. ಜನರು ಟೋಲ್ ಕೊಡಲು ಸಹ ಹಿಂದೇಟು ಹಾಕುತ್ತಿದ್ದಾರೆ.

English summary
People unhappy to pay toll in national highway 766 ( previously NH-212 ) that connects Kerala with Kollegal in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X