• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಪೊಲೀಸರ ಜನಸ್ನೇಹಿ ವ್ಯವಸ್ಥೆ; ಎಷ್ಟು ದಂಡ ಸಂಗ್ರಹ?

By C. Dinesh
|

ಮೈಸೂರು, ಏಪ್ರಿಲ್ 2; ಮೈಸೂರು ನಗರದಲ್ಲಿ ಸಂಚಾರಿ ಪೊಲೀಸರ ಕರ್ತವ್ಯವನ್ನು 'ಜನಸ್ನೇಹಿ'ಯಾಗಿಸಲು ಮತ್ತು ಪಾರದರ್ಶಕವಾಗಿಸಲು ಸುಧಾರಿತ ಸಂಚಾರ ನಿಯಂತ್ರಣಾ ಸೂಚಿಯನ್ನು ಜಾರಿಗೊಳಿಸಲಾಗಿದೆ. ಸ್ವಯಂ ಪ್ರೇರಿತ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು, ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ನಗರದ ರಿಂಗ್ ರಸ್ತೆಯಲ್ಲಿ ಪೊಲೀಸ್‍ ತಪಾಸಣೆ ವೇಳೆ ಸಂಭವಿಸಿದ ಅಪಘಾತದ ನಂತರ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು 'ಸುಧಾರಿತ ಸಂಚಾರ ನಿಯಂತ್ರಣ ಮಾರ್ಗಸೂಚಿ' ಸಿದ್ಧಪಡಿಸಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ತಿರುವು! ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ತಿರುವು!

ಜನರು ಸ್ವಯಂ ಪ್ರೇರಿತ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ‌ ವಾಹನಗಳ‌ ಮೇಲಿರುವ ಸಂಚಾರ ನಿಯಮಗಳ ಉಲ್ಲಂಘನೆಯ ಬಾಕಿ ಪ್ರಕರಣಗಳ ಮಾಹಿತಿ ಪಡೆದು, ದಂಡ ಪಾವತಿಸುವ ಮತ್ತು ದಾಖಲಾತಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಏಪ್ರಿಲ್ 1ರಿಂದ ಈ ಕೇಂದ್ರ ಆರಂಭವಾಗಿದೆ.

ಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವುಮೈಸೂರು: ಸಂಚಾರಿ ಪೊಲೀಸ್ ತಪಾಸಣೆ ವೇಳೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು

ಮೊದಲ ದಿನವೇ 59,700 ರೂ. ದಂಡ ಸಂಗ್ರಹ ಆಗಿದ್ದು, ಜನರು ಒಟ್ಟು 78 ಪ್ರಕರಣಗಳಿಗೆ ದಂಡ ಪಾವತಿಸಿದ್ದಾರೆ. ನಗರದ 10 ಕಡೆಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಬೆಳಗ್ಗೆ 10 ರಿಂದ 7ಗಂಟೆವರೆಗೆ ಕೇಂದ್ರಗಳಲ್ಲಿ ಜನರು ಮಾಹಿತಿ ಪಡೆಯಬಹುದು.

ಮನೆಗೆ ಹೋಗಿ ಸಂಚಾರಿ ಪೊಲೀಸರು ಸಂಗ್ರಹಿಸಿದ್ದು 18 ಕೋಟಿ ದಂಡ! ಮನೆಗೆ ಹೋಗಿ ಸಂಚಾರಿ ಪೊಲೀಸರು ಸಂಗ್ರಹಿಸಿದ್ದು 18 ಕೋಟಿ ದಂಡ!

ಈ ಕೇಂದ್ರಗಳು ಒಂದು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಈ ವೇಳೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಬಾಕಿ ಇರುವ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Mysuru city police have introduced new guidelines for vehicle checking and imposing fines for traffic violations. The move come to effect to make traffic police as people friendly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X