ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ರಸ್ತೆಯಲ್ಲಿ 4 ಗಂಟೆಗೂ ಹೆಚ್ಚು ಕಾಲ ಕಾರು ನಿಲ್ಲಿಸಿದರೆ ದಂಡ!

By Coovercolly Indresh
|
Google Oneindia Kannada News

ಮೈಸೂರು, ಡಿಸೆಂಬರ್ 23: ಮೈಸೂರು ನಗರದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಕಾರನ್ನು ನಿಲ್ಲಿಸಲು ಸ್ಥಳ ಸಿಗುತ್ತಿಲ್ಲ. ಕೆಲವು ಕಡೆ ಗಂಟೆಗಟ್ಟಲೆ ಕಾದರೂ ಕಾರು ನಿಲ್ಲಿಸಲು ಸ್ಥಳ ಸಿಗಲ್ಲ. ದೂರದಲ್ಲಿ ನಿಲ್ಲಿಸಿದರೆ ಅರ್ಧ, ಒಂದು ಕಿ. ಮೀ. ನಡೆಯಬೇಕಾಗುತ್ತದೆ.

ನಡೆದುಕೊಂಡು ಬಂದರೆ ಕಾರು ಇದ್ದೂ ಇಲ್ಲದಂತಾಗುತ್ತದೆ ಎಂಬುದು ವಾಹನ ಮಾಲೀಕರ ಅಭಿಪ್ರಾಯ. ಕೆಲವು ಕಡೆ ಕಾರುಗಳನ್ನು ಜನರು ಬೆಳಗ್ಗೆ ನಿಲ್ಲಿಸಿ ಹೋದರೆ ಎಲ್ಲಾ ಕೆಲಸ ಮುಗಿಸಿಕೊಂಡು ಬಂದು ಸಂಜೆ ತೆಗೆದುಕೊಂಡು ಹೋಗುವ ಪರಿಪಾಠವೂ ಇದೆ.

ನಗರದ ರಸ್ತೆ ಅಗೆದರೆ ಭಾರೀ ದಂಡ ಕಟ್ಟಲು ಸಿದ್ಧರಾಗಿ ನಗರದ ರಸ್ತೆ ಅಗೆದರೆ ಭಾರೀ ದಂಡ ಕಟ್ಟಲು ಸಿದ್ಧರಾಗಿ

ನಗರದಲ್ಲಿ ಜನರ ದಟ್ಟಣೆ ಹೆಚ್ಚಿರುವ ಡಿ.ದೇವರಾಜ ಅರಸು ಮತ್ತು ಸಯ್ಯಾಜಿ ರಾವ್‌ ರಸ್ತೆಗಳಲ್ಲಿ ಗಂಟೆಗಟ್ಟಲೆ ಕಾದರೂ ಕಾರು ನಿಲ್ಲಿಸಲು ಸ್ಥಳ ಸಿಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲು ಸಂಚಾರಿ ಪೋಲೀಸರು ಹೊಸ ಉಪಾಯ ಮಾಡಿದ್ದಾರೆ.

ಮೈಸೂರಿನ ಜನರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲೇ ಕಟ್ಟಿ ಮೈಸೂರಿನ ಜನರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲೇ ಕಟ್ಟಿ

ಇನ್ನು ಮುಂದೆ ದೇವರಾಜ ಅರಸು ರಸ್ತೆಯಲ್ಲಿ ಶಾಪಿಂಗ್‌ಗೆ ಬಂದವರು ಕಾರು ನಿಲ್ಲಿಸಿದರೆ 4 ಗಂಟೆಗಳೊಳಗೆ ವಾಹನ ವಾಪಸ್ ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಚಕ್ರ ಲಾಕ್ ಆಗುತ್ತದೆ, ಕಾರಿನ ಮಾಲೀಕರು ದಂಡವನ್ನು ಕಟ್ಟಬೇಕಾಗುತ್ತದೆ.

ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು

ಕಾರಿಗೆ ಟ್ಯಾಗ್ ಅಳವಡಿಕೆ

ಕಾರಿಗೆ ಟ್ಯಾಗ್ ಅಳವಡಿಕೆ

ದೇವರಾಜ ಅರಸು ರಸ್ತೆಯಲ್ಲಿ ಕಾರು ನಿಲ್ಲಿಸುವವರು ತಮ್ಮ ಕೆಲಸಗಳನ್ನು 4 ಗಂಟೆಗಳ ಅವಧಿಯಲ್ಲಿ ಮುಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ. ಕಾರು ಪಾರ್ಕಿಂಗ್ ಆದ ತಕ್ಷಣ ಸಂಚಾರಿ ಪೊಲೀಸ್ ಸಿಬ್ಬಂದಿ ಸಮಯ ನಮೂದಿಸಿಕೊಂಡು ವಾಹನಕ್ಕೆ ಟ್ಯಾಗ್ ಹಾಕುತ್ತಾರೆ. ಮಾಲೀಕರಿಗೆ ಸಹ ರಸೀದಿ ನೀಡಲಾಗುತ್ತದೆ. ನಾಲ್ಕು ಗಂಟೆಯ ಅವಧಿಯಲ್ಲಿ ಮಾಲೀಕರು ಮತ್ತೆ ಬಂದು ಕಾರು ತೆಗೆದುಕೊಂಡು ಹೋಗಬೇಕು.

ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಲು ಕಾರಣ

ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಲು ಕಾರಣ

ದೇವರಾಜ ಅರಸು ರಸ್ತೆಯಲ್ಲಿರುವ ತಮ್ಮ ಅಂಗಡಿಗಳಿಗೆ ಬರುವ ವರ್ತಕರಲ್ಲಿ ಹಲವಾರು ಜನರು ಕಾರಿನಲ್ಲಿಯೇ ಬರುತ್ತಾರೆ. ಅಲ್ಲಿಯೇ ಕಾರು ನಿಲ್ಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಅವರು ಪರ್ಯಾಯ ವ್ಯವಸ್ಥೆ ಹುಡುಕಿಕೊಳ್ಳಬೇಕೆಂದು ಸಂಚಾರಿ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಎಸಿಪಿ ಹೇಳುವುದೇನು?

ಎಸಿಪಿ ಹೇಳುವುದೇನು?

ಈ ಕುರಿತು ಮಾತನಾಡಿರುವ ಸಂಚಾರ ಎಸಿಪಿ ಸಂದೇಶ್‌ ಕುಮಾರ್‌, "ನಮಗೆ ದ್ವಿಚಕ್ರ ವಾಹನಗಳ ಸಮಸ್ಯೆಯಿಲ್ಲ. ಕಾರುಗಳ ಪಾರ್ಕಿಂಗ್ ದೊಡ್ಡ ತಲೆನೋವು. ಇದರಿಂದ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದೇವೆ. ಇದಕ್ಕೆ ಅರಸು ರಸ್ತೆಯ ವರ್ತಕರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರದಲ್ಲೇ ಇದರ ಜಾರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ" ಎಂದು ಹೇಳಿದರು.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಕಾರು ಎಲ್ಲಿ ನಿಲ್ಲಿಸಬೇಕು?

ಕಾರು ಎಲ್ಲಿ ನಿಲ್ಲಿಸಬೇಕು?

ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ. ಇದಕ್ಕೆ ವರ್ತಕರ ಸಂಘದವರು ಪಾಲಿಕೆಗೆ ಮನವಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈ ನೂತನ ನಿಯಮಾವಳಿ ಜಾರಿಗೆ ತರುವ ಕುರಿತು ಪೋಲೀಸ್‌ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯುಕ್ತರು ಒಪ್ಪಿಗೆ ಸೂಚಿಸಿದ ಕೂಡಲೇ ಜಾರಿಗೆ ಬರಲಿದೆ.

English summary
Mysuru traffic police will impose fine if people park the car in Devaraj Urs road more than 4 hours. Police will add tag to park in the time of parking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X