ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ನುಗ್ಗಿದ ಚಿರತೆ, ಆತಂಕದ ವಾತಾವರಣ

|
Google Oneindia Kannada News

Recommended Video

ಮೈಸೂರು ಮೃಗಾಲಯದಲ್ಲಿ ಚಿರತೆ : ಆತಂಕದ ವಾತಾವರಣ | Oneindia Kannada

ಮೈಸೂರು, ಅಕ್ಟೋಬರ್ 26 : 'ಮೈಸೂರು ಮೃಗಾಲಯದಿಂದ ಯಾವುದೇ ಚಿರತೆ ತಪ್ಪಿಸಿಕೊಂಡಿಲ್ಲ. ಬೇರೆ ಕಡೆಯಿಂದ ಬಂದ ಚಿರತೆ ಮೃಗಾಲಯಕ್ಕೆ ನುಗ್ಗಿದೆ. ಕಾರಂಜಿ ಕೆರೆಯ ಬಳಿಯ ದ್ವಾರದಿಂದ ಮೃಗಾಲಯಕ್ಕೆ ನುಗ್ಗಿರುವ ಸಾಧ್ಯತೆ ಇದೆ' ಎಂದು ಒನ್ ಇಂಡಿಯಾಕ್ಕೆ ಮೃಗಾಲಯದ ನಿರ್ದೇಶಕ ರವಿಶಂಕರ್ ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟದಿಂದ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃಗಾಲಯದಲ್ಲಿದ್ದ ಪ್ರವಾಸಿಗರನ್ನು ಹೊರಕ್ಕೆ ಕಳಿಸಲಾಗಿದೆ.

ಹೊಸ ಅತಿಥಿಗಳು ಬಂದಿದ್ದಾರೆ, ಮೈಸೂರು ಝೂಗೆ ಬನ್ನಿ!ಹೊಸ ಅತಿಥಿಗಳು ಬಂದಿದ್ದಾರೆ, ಮೈಸೂರು ಝೂಗೆ ಬನ್ನಿ!

Panic after leopard escape Mysuru zoo

ಹಿಂದಿನ ಸುದ್ದಿ : ಮೈಸೂರು ಮೃಗಾಲಯದಿಂದ ಚಿರತೆ ತಪ್ಪಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಮೃಗಾಲಯದ ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ಗುರುವಾರ ಬೆಳಗ್ಗೆ ಮೃಗಾಲಯದ ಬೋನಿನಿಂದ ಚಿರತೆ ತಪ್ಪಿಸಿಕೊಂಡು ಹೊರ ಬಂದಿದ್ದು, ಮೃಗಾಲಯದ ಆವರಣದಲ್ಲಿನ ಮರವೇರಿ ಕುಳಿತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೃಗಾಲಯಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.

ಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳುಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳು

ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಮೃಗಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ನೂರಾರು ಪ್ರವಾಸಿಗರು ಪ್ರತಿದಿನ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಗುರುವಾರ ಬೆಳಗ್ಗೆ ಚಿರತೆ ಬೋನಿನಿಂದ ತಪ್ಪಿಸಿಕೊಳ್ಳುವಾಗ ಕೆಲವು ಪ್ರವಾಸಿಗರು ಮೃಗಾಲಯದ ಒಳಗಿದ್ದರು ಎಂದು ತಿಳಿದುಬಂದಿದೆ.

English summary
Leopard escaped from Mysuru zoo on October 26 morning, triggering panic among residents and tourists. Forest department officials visited spot. Sri Chamarajendra Zoological Gardens popularly known as Mysore Zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X