ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲಕಾಡು ಪಂಚಲಿಂಗಗಳಿಗೆ ಕೈಮುಗಿದ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ಡಿ. 2 : ತಲಕಾಡಿನ ಪುರಾಣ ಪ್ರಸಿದ್ಧ ಪಂಚಲಿಂಗದರ್ಶನ ಮಹೋತ್ಸವಕ್ಕೆ ಚಾಲನೆ ದೊರಕಿದೆ. ಸೋಮವಾರ ಮುಂಜಾನೆ 5.30ರಿಂದಲೇ ಪಂಚಲಿಂಗ ದರ್ಶನಕ್ಕೂ ಮೊದಲು ನಡೆಯುವ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಲಕ್ಷಾಂತರ ಭಕ್ತರು ತಲಕಾಡಿಗೆ ಆಗಮಿಸಿ ಪುಣ್ಯ ಸ್ನಾನ ಮಾಡಿ ಪಂಚಲಿಮಗ ದರ್ಶನ ಪಡೆದು ಪುನೀತರಾದರು.

ಬೆಳಗ್ಗೆ 9 ಗಂಟೆ ಸುಮಾರಿಗೆ ಅಷ್ಠಾವಧಾನ ಸೇವೆ ಮುಗಿದ ನಂತರ ಸಿಎಂ ಸಿದ್ದರಾಮಯ್ಯ ವೈದ್ಯನಾಥೇಶ್ವರ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ತಮಿಳುನಾಡು, ಕೇರಳ ಒಳಗೊಂಡಂತೆ ನೆರೆಹೊರೆಯ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ತಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ಪಂಚಲಿಂಗ ದರ್ಶನ ಪಡೆದರು. (ಪಂಚಲಿಂಗ ದರ್ಶನಕ್ಕೆ ದಾರಿ ಯಾವುದಯ್ಯ)

ವೈದ್ಯನಾಥೇಶ್ವರ, ಮುರುಡೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ವೈದ್ಯನಾಥೇಶ್ವರನಿಗೆ ಮುಂಜಾನೆ ಗೋಕರ್ಣ ಸರೋವರದಿಂದ ಐದು ಕಳಸಗಳಲ್ಲಿ ಅಗ್ರೋದಕವನ್ನು ತಂದು ಪುಣ್ಯಾಹ ನೆರವೇರಿಸಿ ಮೂಲ ವಿಗ್ರಹಕ್ಕೆ ಪಂಚ ಕಳಸದ ಅಭಿಷೇಕ ನೆರವೇರಿಸಿ ಅಷ್ಠಾವಧಾನ ಸೇವೆ ನೆರವೇರಿಸಲಾಯಿತು. (ಚಿತ್ರಗಳಲ್ಲಿ ನೋಡಿ ಪಂಚಲಿಂಗ ದರ್ಶನ)

 5.30ರಿಂದಲೇ ಧಾರ್ಮಿಕ ವಿಧಿವಿಧಾನ

5.30ರಿಂದಲೇ ಧಾರ್ಮಿಕ ವಿಧಿವಿಧಾನ

ಸೋಮವಾರ ಮುಂಜಾನೆ 5.30ರಿಂದಲೇ ಪಂಚಲಿಂಗದರ್ಶನಕ್ಕೂ ಮುನ್ನ ನಡೆಯುವ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಸಿಎಂ ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ವೈದ್ಯನಾಥೇಶ್ವರ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಲಕ್ಷಾಂತರ ಭಕ್ತರು ತಲಕಾಡಿಗೆ ಆಗಮಿಸಿ ಪುಣ್ಯ ಸ್ನಾನ ಮಾಡಿ ಪಂಚಲಿಮಗ ದರ್ಶನ ಪಡೆದು ಪುನೀತರಾದರು.

ಪಂಚಲಿಂಗಗಳು

ಪಂಚಲಿಂಗಗಳು

ಪಂಚಲಿಂಗಗಳಾದ ವೈದ್ಯನಾಥೇಶ್ವರ, ಮುರುಡೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸೋಮವಾರ ರಾತ್ರಿ 12 ಗಂಟೆಯವರೆಗೂ ಐದು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 7 ರ ತನಕ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು ಜಾರಿಯಲ್ಲಿರುತ್ತದೆ.

ಸಂಜೆಯ ಧಾರ್ಮಿಕ ಕಾರ್ಯಕ್ರಮಗಳು

ಸಂಜೆಯ ಧಾರ್ಮಿಕ ಕಾರ್ಯಕ್ರಮಗಳು

ಸೋಮವಾರ ಸಂಜೆ ವಾಸ್ತು ಬೀದಿಯಲ್ಲಿ ಬಲಿ ಪ್ರದಾನ, ನಿತ್ಯಾರ್ಚನೆ, ಗಜಾರೋಹಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನೆರವೇರಲಿವೆ. ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ತಮಿಳುನಾಡು, ಕೇರಳ ಒಳಗೊಂಡಂತೆ ನೆರೆಹೊರೆಯ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಪಂಚಲಿಂಗ ದರ್ಶನ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದಾರೆ.

ದೇವಾಲಯಗಳಿಗೆ ವಿಶೇಷ ಅಲಂಕಾರ

ದೇವಾಲಯಗಳಿಗೆ ವಿಶೇಷ ಅಲಂಕಾರ

ಪಂಚಲಿಂಗ ದರ್ಶನದ ಅಂಗವಾಗಿ ತಲಕಾಡಿನಲ್ಲಿರುವ ಪಂಚಲಿಂಗ ದೇಗುಲಗಳು ಸೇರಿದಂತೆ ಗ್ರಾಮ ದೇವತೆ ಚೌಡೇಶ್ವರಿ ದೇಗುಲಗಳಿಗೆ ಭಾನುವಾರದಿಂದಲೇ ವಿಶೇಷ ದೀಪಾಲಂಕಾರ ಹಾಗೂ ಪುಷ್ಪಾಲಂಕಾರ ಮಾಡಲಾಗಿದೆ. ವೈದ್ಯನಾಥೇಶ್ವರ ಹೊರತುಪಡಿಸಿ ಉಳಿದ ನಾಲ್ಕು ಶಿವಲಿಂಗಗಳ ದರ್ಶನಕ್ಕೆ ಮುಂಜಾನೆಯಿಂದಲೇ ಅವಕಾಶ ಕಲ್ಪಿಸಲಾಗಿತ್ತು.

10 ಗಂಟೆ ನಂತರ ವೈದ್ಯನಾಥೇಶ್ವರ ದರ್ಶನ

10 ಗಂಟೆ ನಂತರ ವೈದ್ಯನಾಥೇಶ್ವರ ದರ್ಶನ

ಸೋಮವಾರ ಬೆಳಗ್ಗೆ 10 ಗಂಟೆ ನಂತರ ವೈದ್ಯನಾಥೇಶ್ವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಒದಗಿಸಲಾಯಿತು. ಸುಮಾರು ಎರಡು ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಲಕ್ಷಾಂತರ ಭಕ್ತರು, ಕಾಲ್ನಡಿಗೆಯಲ್ಲಿ ದೇಗುಲಗಳ ಬಳಿಗೆ ಸಾಗಿಬಂದು ಸರತಿಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾದರು.

ಅಗತ್ಯ ಮನ್ನೆಚ್ಚರಿಕೆ

ಅಗತ್ಯ ಮನ್ನೆಚ್ಚರಿಕೆ

ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಎರಡು ಕಿ.ಮೀ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡಿ ಕಾಲ್ತುಳಿತದಂತಹ ಅವಘಡ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಸ್ನಾನ ಗೃಹಗಳಲ್ಲಿ, ದರ್ಶನಕ್ಕೆ ಆಗಮಿಸುವ ಮಾರ್ಗದಲ್ಲಿ ಭಕ್ತರಿಗೆ ತೊಂದರೆ ಆಗದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

English summary
Historical Panchalinga Darshana begins at Talakadu T. Narasipura taluk at Mysore district. CM Siddaramaiah inaugurated Talakadu Panchalinga Mahotsava on Monday, December 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X